Advertisement

T20 World Cup; ಮಳೆಯಿಂದ ಪಂದ್ಯ ರದ್ದು: ಅಮೆರಿಕ ಸೂಪರ್‌-8 ಗೆ ,ಪಾಕ್ ಮನೆಗೆ

11:52 PM Jun 14, 2024 | Team Udayavani |

ಲಾಡರ್‌ಹಿಲ್‌: ಶುಕ್ರವಾರ ರಾತ್ರಿ ಇಲ್ಲಿ ನಡೆಯಬೇಕಿದ್ದ ಅಮೆರಿಕ-ಐರ್ಲೆಂಡ್‌ ನಡುವಿನ ನಿರ್ಣಾಯಕ ಟಿ20 ವಿಶ್ವಕಪ್‌ ಪಂದ್ಯಕ್ಕೆ ಮಳೆಯಿಂದ ರದ್ದಾಗಿದೆ. ಇದರಿಂದಾಗಿ ಅಮೆರಿಕ ಸೂಪರ್‌-8 ಸುತ್ತನ್ನು ಪ್ರವೇಶಿಸಿದೆ. ಗ್ರೂಪ್ ಎ ನಲ್ಲಿ ಪ್ರಬಲ ತಂಡ ಪಾಕಿಸ್ಥಾನ ಅಧಿಕೃತವಾಗಿ ಹೊರ ಬಿದ್ದಿದೆ.

Advertisement

ಇಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಮಳೆ ಆಗುತ್ತಿದ್ದು, ಪಂದ್ಯಕ್ಕೆ ಅಡಚಣೆಯಾಯಿತು. ಪಂದ್ಯ ರದ್ದುಗೊಂಡು ಅಮೆರಿಕ 5 ಅಂಕಗಳೊಂದಿಗೆ ಮುಂದಿನ ಹಂತಕ್ಕೆ ಪ್ರವೇಶಿಸಿದೆ. ಇಂದಿನ ಫಲಿತಾಂಶಕ್ಕಾಗಿ ಕಾಯುತ್ತಿದ್ದ ಪಾಕಿಸ್ಥಾನ ಪಂದ್ಯಾವಳಿಯಿಂದ ನಿರ್ಗಮಿಸಿದೆ.

ಭಾರತ-ಕೆನಡಾ ನಡುವಿನ ಪಂದ್ಯವೂ ಶನಿವಾರ ಇಲ್ಲಿ ನಡೆಯಲಿದೆ. ಜೂ. 16ರಂದು ಪಾಕಿಸ್ಥಾನ-ಐರ್ಲೆಂಡ್‌ ಎದುರಾಗಲಿವೆ. ಗೆದ್ದರೆ ಪಾಕ್‌ ಗೆ ಸಮಾಧಾನವಷ್ಟೇ.

Advertisement

Udayavani is now on Telegram. Click here to join our channel and stay updated with the latest news.

Next