Advertisement

T20 World Cup: ನಿಜವಾಯಿತು ಬ್ಯಾಟಿಂಗ್‌ ಗ್ರೇಟ್‌ ಲಾರಾ ನುಡಿದ ಭವಿಷ್ಯ!

07:45 AM Jun 26, 2024 | Team Udayavani |

ಕಿಂಗ್ಸ್‌ಟೌನ್‌: ವೆಸ್ಟ್‌ ಇಂಡಿಯನ್‌ ಬ್ಯಾಟಿಂಗ್‌ ಗ್ರೇಟ್‌ ಬ್ರಿಯಾನ್‌ ಲಾರಾ ನುಡಿದ ಭವಿಷ್ಯವೊಂದು ನಿಜವಾಗಿದೆ. ಈ ವಿಶ್ವಕಪ್‌ನಲ್ಲಿ ಅಫ್ಘಾನಿಸ್ಥಾನ ಸೆಮಿ ಫೈನಲ್‌ ಪ್ರವೇಶಿಸಲಿದೆ ಎಂದು ಲಾರಾ ಕೂಟದ ಆರಂಭದ ಮೊದಲೇ ಹೇಳಿದ್ದರು. ಅಫ್ಘಾನ್‌ ಸೆಮಿಗೆ ಲಗ್ಗೆ ಇರಿಸಿದ ಬಳಿಕ ನಾಯಕ ರಶೀದ್‌ ಖಾನ್‌ ಇದನ್ನು ನೆನಪಿಸಿಕೊಂಡಿದ್ದಾರೆ.

Advertisement

“ನಮ್ಮ ತಂಡದ ಸಾಮರ್ಥ್ಯವನ್ನು ಅಂದಾಜಿಸಿ, ನಮಗೆ ಸೆಮಿಫೈನಲ್‌ ಅವಕಾಶ ಇದೆ ಎಂದು ಹೇಳಿದ ಏಕೈಕ ವ್ಯಕ್ತಿಯೆಂದರೆ ಬ್ರಿಯಾನ್‌ ಲಾರಾ. ಲೆಜೆಂಡ್ರಿ ಕ್ರಿಕೆಟಿಗನಿಂದ ಹೊರಹೊಮ್ಮಿದ ಈ ಮಾತುಗಳೇ ನಮ್ಮ ಯಶಸ್ಸಿಗೆ ಸ್ಫೂರ್ತಿ. ವೆಲ್‌ಕಮ್‌ ಪಾರ್ಟಿಯೊಂದರಲ್ಲಿ ಲಾರಾ ಅವರನ್ನು ಭೇಟಿ ಮಾಡಿದ ವೇಳೆ, ನಾವು ನಿಮ್ಮ ನಿರೀಕ್ಷೆಯನ್ನು ಖಂಡಿತ ಸಾಕಾರಗೊಳಿಸಲು ಪ್ರಯತ್ನಿಸುತ್ತೇವೆ ಎಂದಿದ್ದೆ’ ಎಂಬುದಾಗಿ ರಶೀದ್‌ ಖಾನ್‌ ಹೇಳಿದರು.

ಇದೊಂದು ಕನಸು: ರಶೀದ್‌

ಸೆಮಿಫೈನಲ್‌ ನಮ್ಮ ಪಾಲಿನ ಕನಸು ಎಂಬುದಾಗಿ ರಶೀದ್‌ ಖಾನ್‌ ಹೇಳಿದ್ದಾರೆ. “ಯಾವಾಗ ನಾವು ನ್ಯೂಜಿಲ್ಯಾಂಡನ್ನು ಮಣಿಸಿದೆವೋ, ಆಗ ನಮ್ಮ ನಂಬಿಕೆ, ಆತ್ಮವಿಶ್ವಾಸ ಹೆಚ್ಚಿತು. ನಮ್ಮ ದೇಶವಾಸಿಗಳಿಗೆ, ಅದರಲ್ಲೂ ಮುಖ್ಯವಾಗಿ ಯುವ ಪೀಳಿಗೆಗೆ ಈ ಗೆಲುವನ್ನು ಅರ್ಪಿಸುತ್ತಿದ್ದೇವೆ’ ಎಂದರು.

ಟ್ರೋಲ್‌ ಆದ ಕಮಿನ್ಸ್‌

Advertisement

ಆಸ್ಟ್ರೇಲಿಯ ಸೋತು ಹೊರಬಿದ್ದ ಬಳಿಕ, ತಂಡದ ವೇಗಿ ಪ್ಯಾಟ್‌ ಕಮಿನ್ಸ್‌ ಆಫ್ಘಾನ್‌ನ ನಜೀಬುಲ್ಲ ಜದ್ರಾನ್‌ ಅವರಿಂದ ಟ್ರೋಲ್‌ ಆಗಿದ್ದಾರೆ. ಕೂಟದ ಪತ್ರಿಕಾಗೋಷ್ಠಿಯೊಂದರ ವೇಳೆ, ಸೆಮಿಫೈನಲ್‌ ಪ್ರವೇಶಿಸಲಿರುವ 4 ತಂಡಗಳು ಯಾವುದು ಎಂದು ಕಮಿನ್ಸ್‌ ಅವರನ್ನು ಪ್ರಶ್ನಿಸಲಾಗಿತ್ತು. ಆಗ ಕಮಿನ್ಸ್‌, “ಒಂದಂತೂ ನಾವು (ಆಸ್ಟ್ರೇಲಿಯ). ಉಳಿದ ಮೂರನ್ನು ನೀವೇ ಆರಿಸಿಕೊಳ್ಳಿ’ ಎಂದಿದ್ದರು. ಇದನ್ನು ತಮ್ಮ “ಎಕ್ಸ್‌’ ಖಾತೆಯಲ್ಲಿ ಉಲ್ಲೇಖೀಸಿದ ಜದ್ರಾನ್‌, ವಿಮಾನ ಮತ್ತು ಮೌನದ ಇಮೋಜಿಗಳೊಂದಿಗೆ ಟ್ರೋಲ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next