Advertisement
ಮೊದಲು ಬ್ಯಾಟಿಂಗ್ ನಡೆಸಿದ ಭಾರತ 2 ವಿಕೆಟಿಗೆ 210 ರನ್ ರಾಶಿ ಹಾಕಿತು. ಇದು ವಿಶ್ವಕಪ್‌ನಲ್ಲಿ ಭಾರತ ಪೇರಿಸಿದ 2ನೇ ಸರ್ವಾಧಿಕ ಗಳಿಕೆ. ಜವಾಬಿತ್ತ ಅಫ್ಘಾನಿಸ್ಥಾನ 7 ವಿಕೆಟಿಗೆ 144 ರನ್ ಮಾಡಿ ಶರಣಾಯಿತು. ಈ ದೊಡ್ಡ ಗೆಲುವು ಕೊಹ್ಲಿ ಪಡೆಯನ್ನು ಎಲ್ಲಿಯ ತನಕ ಕೊಂಡೊಯ್ಯುತ್ತದೆ ಎಂಬುದನ್ನು ಕಾದು ನೋಡಬೇಕು.
ರೋಹಿತ್-ರಾಹುಲ್ ಮೊದಲ ವಿಕೆಟಿಗೆ 14.4 ಓವರ್‌ಗಳಲ್ಲಿ 140 ರನ್ ಪೇರಿಸಿದರು. ಇದು ಟಿ20 ಪಂದ್ಯಗಳಲ್ಲಿ ಭಾರತದ ಮೊದಲ ವಿಕೆಟಿಗೆ ದಾಖಲಾದ ಅತ್ಯಧಿಕ ಮೊತ್ತ. ಇಂಗ್ಲೆಂಡ್ ಎದುರಿನ 2007ರ ಡರ್ಬನ್ ಪಂದ್ಯದಲ್ಲಿ ಸೆಹವಾಗ್-ಗಂಭೀರ್ 136 ರನ್ ಪೇರಿಸಿದ ದಾಖಲೆ ಪತನಗೊಂಡಿತು. ಕೊನೆಯಲ್ಲಿ ಪಂತ್-ಪಾಂಡ್ಯ ಕೂಡ ಬಿರುಸಿನ ಆಟಕ್ಕಿಳಿದರು. ಇವರು ಕೇವಲ 21 ಎಸೆತಗಳಿಂದ 63 ಸೂರೆಗೈದರು.
Related Articles
Advertisement
ರೋಹಿತ್-ರಾಹುಲ್ ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸತೊಡಗಿದರು. ಅಬುಧಾಬಿ ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಯಾಯಿತು. 11.4 ಓವರ್‌ಗಳಲ್ಲಿ ಶತಕದ ಜತೆಯಾಟ ಪೂರ್ತಿಗೊಂಡಿತು. ಇದು ರೋಹಿತ್-ರಾಹುಲ್ ಜೋಡಿಯ 4ನೇ ಸೆಂಚುರಿ ಪಾಟ್ನರ್‌ಶಿಪ್. ಹಾಗೆಯೇ ರೋಹಿತ್ ಟಿ20ಯಲ್ಲಿ ಸರ್ವಾಧಿಕ 12 ಶತಕಗಳ ಜತೆಯಾಟಗಳಲ್ಲಿ ಭಾಗಿಯಾಗಿ ಬಾಬರ್ ಆಜಂ ಜತೆ ಕಾಣಿಸಿಕೊಂಡರು.
ಇದನ್ನೂ ಓದಿ:ಟಿ20 ವಿಶ್ವಕಪ್: ಸೆಮಿಫೈನಲ್‌ನತ್ತ ಕಿವೀಸ್ ದಾಪುಗಾಲು
ಮೊದಲ ಅರ್ಧ ಶತಕ ರೋಹಿತ್ ಅವರಿಂದ ದಾಖಲಾಯಿತು. ಇದು 2014ರ ಬಳಿಕ ರೋಹಿತ್ ಬಾರಿಸಿದ ಮೊದಲ ಟಿ20 ಫಿಫ್ಟಿ. ಅಂದು ಬಾಂಗ್ಲಾದೇಶ ವಿರುದ್ಧ ಮಿರ್ಪುರ್‌ನಲ್ಲಿ 56 ರನ್ ಹೊಡೆದಿದ್ದರು. ಅಫ್ಘಾನಿಸ್ಥಾನದ ವಿಶ್ವ ದರ್ಜೆಯ ಸ್ಪಿನ್ನರ್ ರಶೀದ್ ಖಾನ್ ಎಸೆತಗಳೂ ಇವರಿಬ್ಬರ ಆರ್ಭಟದ ಮುಂದೆ ಚಿಂದಿಯಾದವು. ಮುನ್ನುಗ್ಗಿ ಹೋದ ರೋಹಿತ್ ಸತತ ಸಿಕ್ಸರ್‌ಗಳ ರುಚಿ ತೋರಿಸಿದರು.
ಕೊನೆಗೂ 15ನೇ ಓವರ್‌ನಲ್ಲಿ ಕರೀಂ ಜನತ್ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. 47 ಎಸೆತಗಳಿಂದ 74 ರನ್ ಬಾರಿಸಿದ ರೋಹಿತ್, ನಬಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವಿಸ್ಫೋಟಕ ಬ್ಯಾಟಿಂಗ್ ವೇಳೆ 8 ಫೋರ್, 3 ಸಿಕ್ಸರ್ ಸಿಡಿಯಲ್ಪಟ್ಟಿತು. ರಾಹುಲ್ 49 ಎಸೆತಗಳಿಂದ 69 ರನ್ ಕಾಣಿಕೆ ಸಲ್ಲಿಸಿದರು (6 ಬೌಂಡರಿ, 2 ಸಿಕ್ಸರ್).
ಪಾಂಡ್ಯ, ಪಂತ್ ತಲಾ 13 ಎಸೆತ ಎದುರಿಸಿದರು. ಪಾಂಡ್ಯ 35 (4 ಬೌಂಡರಿ, 2 ಸಿಕ್ಸರ್), ಪಂತ್ 27 ರನ್ (1 ಬೌಂಡರಿ, 3 ಸಿಕ್ಸರ್) ಹೊಡೆದರು.
ಸ್ಕೋರ್ ಪಟ್ಟಿಭಾರತ
ಕೆ.ಎಲ್. ರಾಹುಲ್ ಬಿ ಗುಲ್ಬದ್ದಿನ್ 69
ರೋಹಿತ್ ಶರ್ಮ ಸಿ ನೈಬ್ ಬಿ ಕರೀಂ 74
ರಿಷಭ್ ಪಂತ್ ಔಟಾಗದೆ 27
ಹಾರ್ದಿಕ್ ಪಾಂಡ್ಯ ಔಟಾಗದೆ 35
ಇತರ 5
ಒಟ್ಟು (2 ವಿಕೆಟಿಗೆ) 210
ವಿಕೆಟ್ ಪತನ:1-140, 2-147.
ಬೌಲಿಂಗ್; ಮೊಹಮ್ಮದ್ ನಬಿ 1-0-7-0
ಶರಾಫುದ್ದೀನ್ ಅಶ್ರಫ್ 2-0-25-0
ನವೀನ್ ಉಲ್ ಹಕ್ 4-0-59-0
ಹಮೀದ್ ಹಸನ್ 4-0-34-0
ಗುಲ್ಬದ್ದಿನ್ ನೈಬ್ 4-0-39-1
ರಶೀದ್ ಖಾನ್ 4-0-36-0
ಕರೀಂ ಜನತ್ 1-0-7-1 ಅಫ್ಘಾನಿಸ್ಥಾನ
ಹಜ್ರತುಲ್ಲ ಬಿ ಠಾಕೂರ್ ಬಿ ಬುಮ್ರಾ 13
ಶಾಬಾಜ್ ಸಿ ಅಶ್ವಿನ್ ಬಿ ಶಮಿ 0
ರೆಹಮಾತುಲ್ಲ ಸಿ ಹಾರ್ದಿಕ್ ಬಿ ಜಡೇಜ 19
ಗುಲ್ಬದಿನ್ ನೈಬ್ ಎಲ್‌ಬಿಡಬ್ಲ್ಯು ಬಿ ಅಶ್ವಿನ್ 18
ನಜಿಬುಲ್ಲ ಜದ್ರಾನ್ ಬಿ ಅಶ್ವಿನ್ 11
ಮೊಮಮ್ಮದ್ ನಬಿ ಸಿ ಜಡೇಜ ಬಿ ಶಮಿ 35
ಕರೀಂ ಜನತ್ ಔಟಾಗದೆ 42
ರಶೀದ್ ಖಾನ್ ಸಿ ಹಾರ್ದಿಕ್ ಬಿ ಶಮಿ 0
ಸರಾಫುದ್ದೀನ್ ಔಟಾಗದೆ 2
ಇತರ 4
ಒಟ್ಟು (7 ವಿಕೆಟಿಗೆ) 144
ವಿಕೆಟ್ ಪತನ:1-13, 2-13, 3-48, 4-59, 5-69, 6-126, 7-127.
ಬೌಲಿಂಗ್;ಮೊಹಮ್ಮದ್ ಶಮಿ 4-0-32-3
ಜಸ್‌ಪ್ರೀತ್ ಬುಮ್ರಾ 4-0-25-1
ಹಾರ್ದಿಕ್ ಪಾಂಡ್ಯ 2-0-23-0
ರವೀಂದ್ರ ಜಡೇಜ 3-0-19-1
ಆರ್. ಅಶ್ವಿನ್ 4-0-14-2
ಶಾರ್ದೂಲ್ ಠಾಕೂರ್ 3-0-31-0