ಅಡಿಲೇಡ್: ಬೆನ್ನುನೋವಿಗೆ ಸಿಲುಕಿರುವ ಭಾರತದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಬಾಂಗ್ಲಾದೇಶ ವಿರುದ್ಧದ ಮುಂದಿನ ಟಿ20 ವಿಶ್ವಕಪ್ ಪಂದ್ಯದಲ್ಲಿ ಆಡುವ ಸಾಧ್ಯತೆ ಇಲ್ಲ.
ದ. ಆಫ್ರಿಕಾ ವಿರುದ್ಧ ನಡೆದ ಪಂದ್ಯದ ವೇಳೆ ಕಾರ್ತಿಕ್ ಬೆನ್ನುನೋವಿನ ಸಮಸ್ಯೆಗೆ ಒಳಗಾಗಿದ್ದರು.
ಹೀಗಾಗಿ ಕೊನೆಯ 5 ಓವರ್‌ಗಳ ಆಟದ ವೇಳೆ ಅವರು ಅಂಗಳದಲ್ಲಿ ಕಾಣಿಸಿಕೊಳ್ಳಲಿಲ್ಲ. ಈ ಅವಧಿಯಲ್ಲಿ ಮೀಸಲು ಕೀಪರ್ ರಿಷಭ್ ಪಂತ್ ಕೀಪಿಂಗ್ ಮಾಡಿದ್ದರು.
ದಿನೇಶ್ ಕಾರ್ತಿಕ್ “ಬೆಸ್ಟ್ ಫಿನಿಶರ್’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಹಾರ್ಡ್ ಹಿಟ್ಟರ್ ರಿಷಭ್ ಪಂತ್ ಅವರನ್ನು ಕೈಬಿಟ್ಟು ಈವರೆಗಿನ ಮೂರೂ ಪಂದ್ಯಗಳ ಆಡುವ ಬಳಗ ದಲ್ಲಿ ಸೇರಿಸಿಕೊಳ್ಳಲಾಗಿತ್ತು.