Advertisement

ಟಿ20 ವಿಶ್ವಕಪ್‌ ಕ್ರಿಕೆಟ್‌: ಆಸೀಸ್‌ ನೂತನ ಜೆರ್ಸಿ ಬಿಡುಗಡೆ

12:41 AM Sep 15, 2022 | Team Udayavani |

ಮೆಲ್ಬರ್ನ್: ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗಾಗಿ ಆತಿಥೇಯ ಆಸ್ಟ್ರೇಲಿಯ ಕ್ರಿಕೆಟಿಗರ ನೂತನ ಜೆರ್ಸಿಯನ್ನು ಬುಧವಾರ ಅನಾವರಣಗೊಳಿಸಲಾಯಿತು.

Advertisement

ದೇಸಿ ಉತ್ಪನ್ನಗಳಿಂದಲೇ ಈ ವರ್ಣಮಯ ಉಡುಗೆಯನ್ನು ತಯಾರಿಸಿರುವುದು ವಿಶೇಷ. ಎಂದಿನಂತೆ ಕಾಂಗರೂಗಳ ಕ್ರಿಕೆಟ್‌ ಜೆರ್ಸಿ ಹಳದಿ ಬಣ್ಣದಲ್ಲೇ ಇದೆ. ಅಂಗಿಯ ತೋಳಿನ ಭಾಗಕ್ಕೆ ಕಪ್ಪು ಬಣ್ಣ ನೀಡಲಾಗಿದೆ. ಉಳಿದ ಭಾಗದಲ್ಲಿ ಹಸುರು ಬಣ್ಣದ ಕಲಾಕೃತಿಯನ್ನು ವಿನ್ಯಾಸಗೊಳಿಸಲಾಗಿದೆ. ಪ್ಯಾಂಟ್‌ ಕಪ್ಪು ಬಣ್ಣವನ್ನು ಹೊಂದಿದೆ.

ಆಸ್ಟ್ರೇಲಿಯನ್‌ ಕ್ರಿಕೆಟ್‌ ಜೆರ್ಸಿಯನ್ನು ವಿನ್ಯಾಸ ಗೊಳಿ ಸುವ ಆಂಟಿ ಫಿಯೋನಾ ಕ್ಲಾರ್ಕ್‌ ಮತ್ತು ಕೋರ್ಟ್ನಿ ಹ್ಯಾಗನ್‌ ಅವರೇ ವಿಶ್ವಕಪ್‌ ಜೆರ್ಸಿಯ ವಿನ್ಯಾಸವನ್ನೂ ರೂಪಿಸಿದ್ದಾರೆ.

ಆಸ್ಟ್ರೇಲಿಯದ ಕ್ರಿಕೆಟಿಗರಾದ ಮಿಚೆಲ್‌ ಸ್ಟಾರ್ಕ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಜೋಶ್‌ ಹೇಝಲ್‌ವುಡ್‌ ಮೊದಲಾದವರೆಲ್ಲ ನೂತನ ಜೆರ್ಸಿ ಧರಿಸಿ ಸಮಾರಂಭದ ಕಳೆ ಹೆಚ್ಚಿಸಿದರು.

ಮೂವರು ಭಾರತ ಪ್ರವಾಸಕ್ಕಿಲ್ಲ
ಆಸ್ಟ್ರೇಲಿಯದ ಗಾಯಾಳು ಕ್ರಿಕೆಟಿಗರಾದ ಮಿಚೆಲ್‌ ಮಾರ್ಷ್‌, ಮಿಚೆಲ್‌ ಸ್ಟಾರ್ಕ್‌ ಮತ್ತು ಮಾರ್ಕಸ್‌ ಸ್ಟೋಯಿನಿಸ್‌ ಮುಂಬರುವ ಭಾರತ ಪ್ರವಾಸದ ಟಿ20 ತಂಡದಿಂದ ಬೇರ್ಪಟ್ಟಿದ್ದಾರೆ.
ಇವರ ಬದಲು ವೇಗಿ ನಥನ್‌ ಎಲ್ಲಿಸ್‌, ಆಲ್‌ರೌಂಡರ್‌ ಡೇನಿಯಲ್‌ ಸ್ಯಾಮ್ಸ್‌ ಮತ್ತು ಸೀನ್‌ ಅಬೋಟ್‌ ಸ್ಥಾನ ಸಂಪಾದಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next