ಹೊಸದಿಲ್ಲಿ: ಭಾರತದ “ಡೇರಿ ಜೈಂಟ್’ ಅಮುಲ್ ಮುಂದಿನ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳೆ ಯುಎಸ್‌ಎ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಪ್ರಾಯೋಜಕತ್ವ ವಹಿಸಲಿದೆ. ಇದನ್ನು ಎರಡೂ ತಂಡಗಳ ಕ್ರಿಕೆಟ್ ಮಂಡಳಿಗಳು ಗುರುವಾರ ಪ್ರಕಟಿಸಿದವು.
ಜಾಗತಿಕ ಮಟ್ಟದಲ್ಲಿ ತನ್ನ ಉತ್ಪಾದನೆಯನ್ನು ಪ್ರಚುರಪಡಿಸುವ ಉದ್ದೇಶ ಹೊಂದಿರುವ ಅಮುಲ್, ಈ ಮೊದಲು ನೆದರ್ಲೆಂಡ್ಸ್, ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ಥಾನ ತಂಡಗಳಿಗೂ ಸ್ಪಾನ್ಸರ್ ಮಾಡಿತ್ತು.
ಅಮೆರಿಕದಲ್ಲೂ ಅಮುಲ್:
ಅಮುಲ್ ಅಮೆರಿಕ ತಂಡದ ಪ್ರಾಯೋಜಕತ್ವ ವಹಿಸುತ್ತಿರು ವುದು ಇದೇ ಮೊದಲು. ಅಮೆರಿಕದಲ್ಲೂ ಅಮುಲ್ ಹಾಲು ಮಾರಾಟವಾಗುತ್ತಿದೆ.
“ಅಮುಲ್ ಹಾಲಿನ ಸ್ವಾದ ಅಮೆರಿಕ ಕ್ರಿಕೆಟ್ ತಂಡವನ್ನು ಬಲಿಷ್ಠಗೊಳಿಸಿ ಜಗತ್ತಿನಾದ್ಯಂತ ಪ್ರಶಂಸೆ ಪಡೆದುಕೊಳ್ಳಲು ಉತ್ತೇಜಕವಾಗಲಿದೆ. ಮೊದಲ ಸಲ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡುತ್ತಿರುವ ಅಮೆರಿಕ ತಂಡಕ್ಕೆ ಶುಭ ಹಾರೈಕೆಗಳು’ ಎಂಬುದಾಗಿ ಅಮುಲ್‌ನ ಎಂ.ಡಿ. ಜಯೆನ್ ಮೆಹ್ತಾ ಹೇಳಿದ್ದಾರೆ.