Advertisement
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಗಿಳಿದ ಅಫ್ಘಾನಿಸ್ಥಾನ ಆರಂಭದಲ್ಲಿ ಜೊತೆಯಾಟ ನೀಡಿದ ಬಳಿಕ ಮಂದಗತಿಯ ಆಟವನ್ನು ಆಡಿತು.
Related Articles
Advertisement
20 ಓವರ್ ನಲ್ಲಿ 5 ವಿಕೆಟ್ ಕಳೆದುಕೊಂಡು 115 ರನ್ ಗಳ ಕನಿಷ್ಠ ಗುರಿಯನ್ನು ಅಘ್ಘಾನ್ ಬಾಂಗ್ಲಾಕ್ಕೆ ನೀಡಿತು.
12.1 ಓವರ್ ಯೊಳಗೆ ಪಂದ್ಯವನ್ನು ಗೆದ್ದರೆ ಬಾಂಗ್ಲಾ ಕೂಡ ಸೆಮಿಪೈನಲ್ ಗೆ ಹೋಗುವ ಅವಕಾಶವಿತ್ತು. ಈ ಕಾರಣದಿಂದ ಆರಂಭದಲ್ಲೇ ಬಿರುಸಿದ ಬ್ಯಾಟಿಂಗ್ ಮಾಡಲು ಬಾಂಗ್ಲಾ ಆಟಗಾರರು ಮುಂದಾದರು.
ಆರಂಭಿಕ ಆಟಗಾರ ಲಿಟನ್ ದಾಸ್ 54 ರನ್ ಗಳಿಸಿ ಔಟಾಗದೆ ತಂಡವನ್ನು ಗೆಲುವಿನತ್ತ ಸಾಗಿಸಲು ಪ್ರಯತ್ನಿಸಿದರು. ಆದರೆ ಉಳಿದ ಆಟಗಾರರು ಸಾಲಾಗಿ ವಿಕೆಟ್ ಒಪ್ಪಿಸುತ್ತಾ ಹೋದರು. ಬಾಂಗ್ಲಾದ ಭರವಸೆ ಆಟಗಾರರಾದ ಶಾಕಿಬ್ ಅಲ್ ಹಸನ್, ತಂಝೀದ್ ಹಸನ್, ನಜ್ಮುಲ್ ಹೊಸೈನ್ ಶಾಂತೋ, ಸೌಮ್ಯ ಸರ್ಕಾರ್, ಮಹಮ್ಮದುಲ್ಲಾ ಎರಡಂಕಿ ರನ್ ಗಳಿಸಲೂ ಕೂಡ ಪರದಾಡುವ ಸ್ಥಿತಿ ಕಂಡುಬಂತು.
ಕನಿಷ್ಠ ಮೊತ್ತದ ಪಂದ್ಯದಲ್ಲಿ ಅಘ್ಘಾನ್ ಬ್ಯಾಟರ್ ಗಳನ್ನು ಕಟ್ಟಿಹಾಕಿ ಪಂದ್ಯದ ಮೇಲೆ ಗರಿಷ್ಠ ಒತ್ತಡವನ್ನು ಹಾಕಿದರು. ಒಂದು ಹಂತದಲ್ಲಿ ಸುಲಭವಾಗಿ ಪಂದ್ಯವನ್ನು ಗೆಲುವ ಸಾಧ್ಯತೆಯಿದ್ದ ಪಂದ್ಯದಲ್ಲಿ ಅಘ್ಘಾನ್ ಬೌಲರ್ ಗಳು ಮೈಲುಗೈ ಸಾಧಿಸಿದರು.
ಮಳೆಯ ಕಾರಣದಿಂದ ಪಂದ್ಯವನ್ನು 19 ಓವರ್ ಗೆ ಇಳಿಸಲಾಗಿತ್ತು. 114 ರ ಗುರಿಯನ್ನು ನೀಡಲಾಗಿತ್ತು.
ನವೀನ್ ಉಲ್ ಹಕ್ ಹಾಗೂ ನಾಯಕ ರಶೀದ್ ಖಾನ್ ಅವರ ಬೌಲಿಂಗ್ ಬಾಂಗ್ಲಾದ ಬ್ಯಾಟರ್ ಗಳು ತತ್ತರಿಸಿದರು. ನವೀನ್ ಹಾಗೂ ರಶೀದ್ ತಲಾ 4 ವಿಕೆಟ್ ಗಳನ್ನು ಪಡೆದರು.
ಅಘ್ಘಾನ್ ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶವನ್ನು ಪಡೆದಿದೆ. ಇನ್ನೊಂದೆಡೆ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬಿದ್ದಿದೆ.
ಮೊದಲ ಸೆಮಿಫೈನಲ್ ಜೂ.26 ರಂದು ದಕ್ಷಿಣ ಆಫ್ರಿಕಾ – ಅಫ್ಘಾನಿಸ್ತಾನ ನಡುವೆ ನಡೆಯಲಿದೆ. ಎರಡನೇ ಸೆಮಿಫೈನಲ್ ಜೂ.27 ರಂದು ಭಾರತ – ಇಂಗ್ಲೆಂಡ್ ನಡುವೆ ನಡೆಯಲಿದೆ.