ನವದೆಹಲಿ: 2024ರ ಟಿ20 ವಿಶ್ವಕಪ್ ಬೇರೆಯದ್ದೇ ರೂಪ ತಳೆಯಲಿದೆ. ಇದಕ್ಕೆ ಕಾರಣ ತಂಡಗಳ ಸಂಖ್ಯೆ 20ಕ್ಕೇರುವುದು. ಆರಂಭದಲ್ಲಿ 20 ತಂಡಗಳನ್ನು ತಲಾ 5 ತಂಡಗಳ 4 ಗುಂಪುಗಳನ್ನಾಗಿ ವಿಭಾಗಿಸಲಾಗುತ್ತದೆ.
ಪ್ರತೀ ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆದ ತಂಡಗಳು ಸೂಪರ್ 8ಕ್ಕೆ ಮುನ್ನಡೆಯಲಿವೆ. ಇಲ್ಲಿ ತಲಾ 4 ತಂಡಗಳ ಎರಡು ಗುಂಪುಗಳು ಇರಲಿವೆ. ಈ ಹಂತದಲ್ಲಿ ಪ್ರತೀ ಗುಂಪಿನ ಅಗ್ರ 2 ತಂಡಗಳು ಸೆಮಿ ಫೈನಲ್‌ಗೇರಲಿವೆ.
ಇದನ್ನೂ ಓದಿ:ಅಮೆರಿಕಾದ ವಾಲ್‌ಮಾರ್ಟ್‌ನಲ್ಲಿ ಬಂದೂಕುಧಾರಿಯಿಂದ ಗುಂಡಿನ ದಾಳಿ, 10 ಸಾವು, ಹಲವರಿಗೆ ಗಾಯ
ಹಿಂದಿನೆರಡು ಕೂಟಗಳಲ್ಲಿ ಒಟ್ಟು 16 ತಂಡಗಳು ಪಾಲ್ಗೊಂಡಿದ್ದವು. ಅರ್ಹತಾ ಹಂತದಲ್ಲಿ 8 ತಂಡಗಳು ಆಡುತ್ತಿದ್ದವು. ಇಲ್ಲಿ ಅಗ್ರ 4 ಸ್ಥಾನ ಪಡೆದ ತಂಡಗಳು ಸೂಪರ್ 12ಕ್ಕೆ ಆಯ್ಕೆಯಾಗುತ್ತಿದ್ದವು. ಸೂಪರ್-12ರಲ್ಲಿ ಅದಾಗಲೇ 8 ತಂಡಗಳು ಉತ್ತಮ ರ್‍ಯಾಂಕಿಂಗ್ ಆಧಾರದಲ್ಲಿ ಸ್ಥಾನ ಪಡೆದಿರುತ್ತಿದ್ದವು. ಸೂಪರ್-12 ಹಂತದಲ್ಲಿ ತಂಡಗಳನ್ನು ತಲಾ 6 ತಂಡಗಳ 2 ಗುಂಪುಗಳನ್ನಾಗಿಸಲಾಗುತ್ತಿತ್ತು. ಇಲ್ಲಿ ಅಗ್ರ 4 ಸ್ಥಾನ ಪಡೆದ ತಂಡಗಳು ಸೆಮಿಫೈನಲ್‌ಗೇರುತ್ತಿದ್ದವು.
2024ರ ಟಿ20 ವಿಶ್ವಕಪ್ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿದೆ.