ಸಿಡ್ನಿ: ಟಿ20 ವಿಶ್ವಕಪ್ ನ ಹೈವೋಲ್ಟೇಜ್ ಮಹತ್ವದ ಮೊದಲ ಸೆಮಿ ಫೈನಲ್ ನಲ್ಲಿ ನ್ಯೂಜಿಲ್ಯಾಂಡ್ – ಪಾಕಿಸ್ತಾನ ಹಣಾಹಣೆ ನಡೆಸಲಿದೆ. ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ.
ಟೂರ್ನಮೆಂಟ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ವಿಲಿಯಮ್ಸನ್ ಪಡೆ ಬಲಿಷ್ಠ ಬ್ಯಾಟಿಂಗ್ ಹಾಗೂ ವೇಗಿಗಳ ಬಲ ಹೊಂದಿದೆ. ಇನ್ನೊಂದೆಡೆ ಸೋಲು – ಗೆಲುವಿನ ಆಟದಲ್ಲಿ ಕುಂಟುತ್ತಾ ಬಂದು ಅದೃಷ್ಟದ ಬಲದಿಂದ ಸಮೀಸ್ ಗೆ ಬಂದ ಪಾಕ್ ಗೆ ಬೌಲಿಂಗ್ ಹಾಗೂ ಮಧ್ಯಮ ಕ್ರಮಾಂಕದ ಆಟಗಾರರೇ ಬೆನ್ನುಲುಬು.
ಎರಡು ತಂಡಗಳ ರೋಚಕ ಹಣಾಹಣೆಗೆ ಸಿಡ್ನಿ ಮೈದಾನ ಸಾಕ್ಷಿಯಾಗಲಿದೆ. ಈವರೆಗಿನ ಐಸಿಸಿ ವಿಶ್ವಕಪ್ ಪಂದ್ಯಗಳ ಚರಿತ್ರೆಯನ್ನು ಅವಲೋಕಿಸುವಾಗ ಅಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಪಾಕಿಸ್ಥಾನ ಸ್ಪಷ್ಟ ಮೇಲುಗೈ ಸಾಧಿಸಿರುವುದು ಅರಿವಿಗೆ ಬರುತ್ತದೆ. ಇನ್ನೊಂದು ಅಂಕಿಅಂಶದಂತೆ, ಬ್ಲ್ಯಾಕ್ ಕ್ಯಾಪ್ಸ್ ಪಡೆ ಕಳೆದ 7 ವರ್ಷಗಳಲ್ಲಿ 3 ವಿಶ್ವಕಪ್ ಫೈನಲ್‌ಗಳಲ್ಲಿ ಸೋತಿದೆ. 2015 ಮತ್ತು 2019ರ ಏಕದಿನ ವಿಶ್ವಕಪ್ ಹಾಗೂ ಕಳೆದ ಸಲದ ಟಿ20 ವಿಶ್ವಕಪ್ ಪ್ರಶಸ್ತಿ ಸಮರದಲ್ಲಿ ಕಿವೀಸ್ ಮುಗ್ಗರಿಸಿದೆ.
ತಂಡಗಳು :
ನ್ಯೂಜಿಲ್ಯಾಂಡ್ : ಫಿನ್ ಅಲೆನ್, ಡೆವೊನ್ ಕಾನ್ವೇ(ಕೀಪರ್), ಕೇನ್ ವಿಲಿಯಮ್ಸನ್(ನಾಯಕ), ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಇಶ್ ಸೋಧಿ, ಲಾಕಿ ಫರ್ಗುಸನ್, ಟ್ರೆಂಟ್ ಬೋಲ್ಟ್
ಪಾಕಿಸ್ತಾನ : ಮೊಹಮ್ಮದ್ ರಿಜ್ವಾನ್(ಕೀಪರ್), ಬಾಬರ್ ಅಜಮ್(ನಾಯಕ), ಮೊಹಮ್ಮದ್ ನವಾಜ್, ಮೊಹಮ್ಮದ್ ಹ್ಯಾರಿಸ್, ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ