Advertisement

ವಿಂಡೀಸ್‌-ಬಾಂಗ್ಲಾ: ಸೋತವರಿಗೆ ಉಳಿಗಾಲವಿಲ್ಲ!

09:06 PM Oct 28, 2021 | Team Udayavani |

ಶಾರ್ಜಾ: ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿರುವ ವೆಸ್ಟ್‌ ಇಂಡೀಸ್‌ ಮತ್ತು ಬಾಂಗ್ಲಾದೇಶ ತಂಡಗಳು ಶುಕ್ರವಾರದ ಮೊದಲ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ. ಇದರಲ್ಲಿ ಒಂದು ತಂಡ ಗೆಲುವಿನ ಹಳಿ ಏರಲಿದ್ದು, ಹ್ಯಾಟ್ರಿಕ್‌ ಸೋಲನುಭವಿಸುವ ತಂಡ ನಿರ್ಗಮನ ಬಾಗಿಲಲ್ಲಿ ನಿಲ್ಲುವುದು ಖಚಿತ.

Advertisement

ಉಭಯ ತಂಡಗಳೂ ಬಲಿಷ್ಠವಾಗಿವೆ. ಟಿ20 ತಜ್ಞ ಆಟಗಾರರನ್ನೇ ಹೊಂದಿವೆ. ಆದರೆ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಲು ವಿಫಲವಾಗಿವೆ. ಅದರಲ್ಲೂ ತೀರಾ ಅಪಾಯಕಾರಿ ಎಂದೇ ಭಾವಿಸಲಾಗಿದ್ದ ಹಾಲಿ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ತಂಡವಂತೂ ತೀರಾ ಕಳಪೆ ಪ್ರದರ್ಶನ ನೀಡಿ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಅದು ಸಿಡಿದು ನಿಲ್ಲಲೇಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next