Advertisement

Womens T20 World Cup: ಪಾಕ್‌ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್‌ ಸೋತ ಭಾರತ

03:12 PM Oct 06, 2024 | Team Udayavani |

ದುಬೈ: ಐಸಿಸಿ ವನಿತಾ ಟಿ20 ವಿಶ್ವಕಪ್‌ ಕೂಟದ ಮೊದಲ ಪಂದ್ಯದಲ್ಲಿಯೇ ಎಡವಿದ ಭಾರತ ವನಿತಾ ತಂಡವು ಇಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುತ್ತಿದೆ. ದುಬೈನಲ್ಲಿ ಆರಂಭವಾದ ಪಂದ್ಯದಲ್ಲಿ ಪಾಕಿಸ್ತಾನವು ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿದೆ.

Advertisement

ಭಾರತವು ಕೂಟದ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ದ ಹೀನಾಯವಾಗಿ ಸೋಲು ಕಂಡಿತ್ತು. 58 ರನ್‌ ಗಳ ಸೋಲಿನ ಬಳಿಕ ಭಾರತಕ್ಕೆ ಇದೀಗ ಉತ್ತಮ ಗೆಲುವು ಅಗತ್ಯವಿದೆ.

ಇಂದಿನ ಪಂದ್ಯಕ್ಕೆ ಭಾರತ ಒಂದು ಬದಲಾವಣೆ ಮಾಡಿಕೊಂಡಿದೆ. ಪೂಜಾ ವಸ್ತ್ರಾಕರ್‌ ಅವರು ಗಾಯಗೊಂಡಿದ್ದು, ಅವರ ಬದಲಿಗೆ ಎಸ್‌ ಸಜನಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ತಂಡಗಳು

ಭಾರತ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್ (ನಾ), ಜೆಮಿಮಾ ರೋಡ್ರಿಗಸ್, ರಿಚಾ ಘೋಷ್ (ವಿ.ಕೀ), ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ, ಎಸ್ ಸಜನಾ, ಶ್ರೇಯಾಂಕ ಪಾಟೀಲ್, ಆಶಾ ಸೋಭಾನಾ, ರೇಣುಕಾ ಠಾಕೂರ್ ಸಿಂಗ್

Advertisement

ಪಾಕಿಸ್ತಾನ: ಮುನೀಬಾ ಅಲಿ (ವಿ.ಕೀ), ಗುಲ್ ಫಿರೋಜಾ, ಸಿದ್ರಾ ಅಮೀನ್, ನಿದಾ ದಾರ್, ಅಲಿಯಾ ರಿಯಾಜ್, ಒಮೈಮಾ ಸೊಹೈಲ್, ಫಾತಿಮಾ ಸನಾ (ನಾ), ತುಬಾ ಹಸನ್, ನಶ್ರಾ ಸಂಧು, ಸೈಯದಾ ಅರೂಬ್ ಶಾ, ಸಾದಿಯಾ ಇಕ್ಬಾಲ್.

Advertisement

Udayavani is now on Telegram. Click here to join our channel and stay updated with the latest news.

Next