Advertisement
ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡಿದ್ದ ಕೊಹ್ಲಿಗೆ ಬೌಲರ್‌ಗಳಿಂದ ಅಷ್ಟೇನೂ ಬೆಂಬಲ ಸಿಗಲಿಲ್ಲ. ಹೀಗಾಗಿ ಇಂಗ್ಲೆಂಡ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತ್ತು. 189 ರನ್‌ಗಳ ಗುರಿ ಬೆನ್ನತ್ತಿದ ಭಾರತಕ್ಕೆ ಉತ್ತಮ ಆರಂಭ ಸಿಕ್ಕಿತು. ಇಶಾನ್ ಕಿಶನ್ 70, ಕೆ.ಎಲ್.ರಾಹುಲ್ 51 ರನ್ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಬಳಿಕ ಬಂದ ವಿರಾಟ್ ಕೊಹ್ಲಿ ಬೇಗನೇ ನಿರ್ಗಮಿಸಿದರು. ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ತಂಡವನ್ನು ಗೆಲುವಿನ ದಡಕ್ಕೆ ಹತ್ತಿಸಿದರು. ಕೊಹ್ಲಿ ಮತ್ತು ಸೂರ್ಯಕುಮಾರ್ ಮಾತ್ರ ಕಡಿಮೆ ಮೊತ್ತಕ್ಕೆ ಔಟಾದರು. ಕಡೆಗೆ 19 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿ ಭಾರತ ಜಯದ ನಗೆ ಬೀರಿತು.
Related Articles
Advertisement
ಬೌಲಿಂಗ್ ಆಯ್ದುಕೊಂಡ ಭಾರತ ಪವರ್ ಪ್ಲೇ ಒಳಗಾಗಿ ಇಂಗ್ಲೆಂಡ್ ಆರಂಭಿಕರಿಬ್ಬರನ್ನೂ ಔಟ್ ಮಾಡಲು ಯಶಸ್ವಿಯಾಯಿತು. ಜಾಸ್ ಬಟ್ಲರ್ (18) ಮತ್ತು ಜಾಸನ್ ರಾಯ್ (17) ಇಬ್ಬರನ್ನೂ ಶಮಿ ಸತತ ಓವರ್‌ಗಳಲ್ಲಿ ಕೆಡವಿದರು. ಆರಂಭಿಕರಿಂದ 3.4 ಓವರ್‌ಗಳಿಂದ 36 ರನ್ ಒಟ್ಟುಗೂಡಿತು. ಮೊದಲ 6 ಓವರ್‌ಗಳಲ್ಲಿ ಇಂಗ್ಲೆಂಡ್ 2 ವಿಕೆಟಿಗೆ 51 ರನ್ ಗಳಿಸಿತು.
ಡೇವಿಡ್ ಮಾಲನ್ ಕೂಡ ಇನ್ನಿಂಗ್ಸ್ ವಿಸ್ತರಿಸಲು ವಿಫಲರಾದರು. ಅವರ ಆಟ 18 ರನ್ನಿಗೆ ಮುಗಿಯಿತು. ಈ ವಿಕೆಟ್ ಉರುಳಿಸಿದವರು ರಾಹುಲ್ ಚಹರ್. 10 ಓವರ್ ಅಂತ್ಯಕ್ಕೆ 3ಕ್ಕೆ 79 ರನ್ ಮಾಡಿದ್ದ ಇಂಗ್ಲೆಂಡ್ ಉತ್ತಮ ಮೊತ್ತದ ಸೂಚನೆ ನೀಡಿತು. 12.3 ಓವರ್‌ಗಳಲ್ಲಿ ಇಂಗ್ಲೆಂಡ್ ಮೊತ್ತ ನೂರರ ಗಡಿ ಮುಟ್ಟಿತು. ಬೇರ್‌ಸ್ಟೊ-ಲಿವಿಂಗ್‌ಸ್ಟೋನ್ 4ನೇ ವಿಕೆಟಿಗೆ 52 ರನ್ ಪೇರಿಸಿದರು. ಈ ಜೋಡಿಯನ್ನು ಶಮಿ ಬೇರ್ಪಡಿಸಿದರು. ಲಿವಿಂಗ್‌ಸ್ಟೋನ್ ಗಳಿಕೆ 20 ಎಸೆತಗಳಿಂದ 30 ರನ್ (4 ಬೌಂಡರಿ, 1 ಸಿಕ್ಸರ್). ಶಮಿ ಸಾಧನೆ 40ಕ್ಕೆ 3 ವಿಕೆಟ್.
ಬಹಳ ಸಮಯದ ಬಳಿಕ ಭಾರತದ ಪರ ಟಿ20 ಪಂದ್ಯ ಆಡಿದ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ವಿಕೆಟ್ ಉರುಳಿಸುವಲ್ಲಿ ವಿಫಲರಾದರೂ 4 ಓವರ್‌ಗಳಲ್ಲಿ ಕೇವಲ 23 ರನ್ ನೀಡಿ ಉತ್ತಮ ನಿಯಂತ್ರಣ ಸಾಧಿಸಿದರು.
ಭುವನೇಶ್ವರ್ ಬಹಳ ದುಬಾರಿಯಾದರು. ಅವರ ಅಂತಿಮ ಓವರ್‌ನಲ್ಲಿ 21 ರನ್ ಸೋರಿ ಹೋಯಿತು. ಅಷ್ಟೂ ರನ್ ಮೊಯಿನ್ ಅಲಿ ಬಾರಿಸಿದರು. ಕೊನೆಯ 2 ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದರು. ಭುವನೇಶ್ವರ್ 4 ಓವರ್‌ಗಳಿಂದ 54 ರನ್ ನೀಡಿದರು.