Advertisement

T20: ಪ್ರವಾಸಿ ಇಂಗ್ಲೆಂಡ್ ವಿರುದ್ಧ ವಿಂಡೀಸ್‌ 2-0 ಮುನ್ನಡೆ

11:35 PM Dec 15, 2023 | Team Udayavani |

ಸೇಂಟ್‌ ಜಾರ್ಜ್ : ಪ್ರವಾಸಿ ಇಂಗ್ಲೆಂಡನ್ನು ದ್ವಿತೀಯ ಟಿ20 ಪಂದ್ಯದಲ್ಲೂ ಮಣಿಸಿದ ವೆಸ್ಟ್‌ ಇಂಡೀಸ್‌ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

Advertisement

ವೆಸ್ಟ್‌ ಇಂಡೀಸ್‌ 7 ವಿಕೆಟಿಗೆ 176 ರನ್‌ ಪೇರಿಸಿದರೆ, ಇಂಗ್ಲೆಂಡ್‌ 7 ವಿಕೆಟಿಗೆ 166 ರನ್‌ ಗಳಿಸಿ ಶರಣಾಯಿತು. ವಿಂಡೀಸ್‌ ಸರದಿಯಲ್ಲಿ ಆರಂಭಕಾರ ಬ್ರ್ಯಾಂಡನ್‌ ಕಿಂಗ್‌ 82 ಮತ್ತು ನಾಯಕ ರೋವ್ಮನ್‌ ಪೊವೆಲ್‌ 50 ರನ್‌ ಬಾರಿಸಿ ಮಿಂಚಿದರು. ಇಂಗ್ಲೆಂಡ್‌ ಚೇಸಿಂಗ್‌ ಅಷ್ಟೇನೂ ಬಿರುಸಿನಿಂದ ಕೂಡಿರಲಿಲ್ಲ. 4ನೇ ಕ್ರಮಾಂಕಕ್ಕೆ ಭಡ್ತಿ ಪಡೆದು ಬಂದ ಸ್ಯಾಮ್‌ ಕರನ್‌ ಬಿರುಸಿನ ಗತಿಯಲ್ಲಿ 50 ರನ್‌ ಬಾರಿಸಿದರೂ ಉಳಿದವರಿಂದ ರನ್‌ಗತಿ ಏರಿಸಲಾಗಲಿಲ್ಲ. ಅಲ್ಜಾರಿ ಜೋಸೆಫ್ 3 ಮತ್ತು ಅಖೀಲ್‌ ಹುಸೇನ್‌ 2 ವಿಕೆಟ್‌ ಉರುಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next