ಟರೂಬ (ಟ್ರಿನಿಡಾಡ್): ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯ ವನ್ನೂ ಗೆಲ್ಲುವ ಮೂಲಕ ವೆಸ್ಟ್ ಇಂಡೀಸ್ 3-0 ಕ್ಲೀನ್‌ಸ್ವೀಪ್ ಸಾಧನೆಗೈದಿತು.
ಮಳೆಯಿಂದ ಅಡಚಣೆಗೊಳಗಾದ ಈ ಪಂದ್ಯವನ್ನು 13 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ದಕ್ಷಿಣ ಆಫ್ರಿಕಾ 4 ವಿಕೆಟಿಗೆ 108 ರನ್ ಗಳಿಸಿದರೆ, ವೆಸ್ಟ್ ಇಂಡೀಸ್‌ಗೆ ಡಿಎಲ್‌ಎಸ್ ನಿಯಮದಂತೆ 116 ರನ್ ಗುರಿ ನಿಗದಿಗೊಂಡಿತು. 9.2 ಓವರ್‌ಗಳಲ್ಲಿ 2 ವಿಕೆಟಿಗೆ 116 ರನ್ ಬಾರಿಸಿ ಜಯಭೇರಿ ಮೊಳಗಿಸಿತು.
ಚೇಸಿಂಗ್ ವೇಳೆ ಶೈ ಹೋಪ್ ಮತ್ತು ನಿಕೋಲಸ್ ಪೂರಣ್ ಸಿಡಿದು ನಿಂತರು. 3.1 ಓವರ್‌ಗಳಲ್ಲಿ 48 ರನ್ ರಾಶಿಹಾಕಿದರು. ಹೋಪ್ 24 ಎಸೆತಗಳಿಂದ ಅಜೇಯ 42 ರನ್ ಬಾರಿಸಿದರೆ (1 ಬೌಂಡರಿ, 4 ಸಿಕ್ಸರ್), ಪೂರಣ್ ಕೇವಲ 13 ಎಸೆತಗಳಿಂದ 35 ರನ್ ಚಚ್ಚಿದರು (2 ಬೌಂಡರಿ, 4 ಸಿಕ್ಸರ್). ಶಿಮ್ರನ್ ಹೆಟ್‌ಮೈರ್ ಗಳಿಕೆ ಅಜೇಯ 31 ರನ್. ದಕ್ಷಿಣ ಆಫ್ರಿಕಾ ಸರದಿಯಲ್ಲಿ 15 ಎಸೆತಗಳಿಂದ 40 ರನ್ ಬಾರಿಸಿದ ಟ್ರಿಸ್ಟನ್ ಸ್ಟಬ್ಸ್ ಅವರದು ಸರ್ವಾಧಿಕ ಸ್ಕೋರ್ ಆಗಿತ್ತು (5 ಬೌಂಡರಿ, 3 ಸಿಕ್ಸರ್).
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ-4 ವಿಕೆಟಿಗೆ 108 (ಸ್ಟಬ್ಸ್ 40, ರಿಕಲ್ಟನ್ 27, ಶೆಫರ್ಡ್ 14ಕ್ಕೆ 2). ವೆಸ್ಟ್ ಇಂಡೀಸ್-9.2 ಓವರ್‌ಗಳಲ್ಲಿ 2 ವಿಕೆಟಿಗೆ 116 (ಹೋಪ್ ಔಟಾಗದೆ 42, ಪೂರಣ್ 35, ಹೆಟ್‌ಮೈರ್ ಔಟಾಗದೆ 31).
ಪಂದ್ಯಶ್ರೇಷ್ಠ: ರೊಮಾರಿಯೊ ಶೆಫರ್ಡ್, ಸರಣಿಶ್ರೇಷ್ಠ: ಶೈ ಹೋಪ್.