Advertisement
ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಇಂಗ್ಲೆಂಡ್ 17.4 ಓವರ್‌ಗಳಲ್ಲಿ ಕೇವಲ 96 ರನ್ನಿಗೆ ಆಲೌಟ್ ಆಯಿತು; ಸಣ್ಣ ಮೊತ್ತಕ್ಕೆ ಜವಾಬಿತ್ತ ಆಸ್ಟ್ರೇಲಿಯ 11.3 ಓವರ್‌ಗಳಲ್ಲೇ 2 ವಿಕೆಟಿಗೆ 97 ರನ್ ಮಾಡಿ ಜಯ ಸಾಧಿಸಿತು. ಇದು ಈ ಸರಣಿಯಲ್ಲಿ ಇಂಗ್ಲೆಂಡಿಗೆ ಎದುರಾದ ಮೊದಲ ಸೋಲು.
ಆಸ್ಟ್ರೇಲಿಯದ ಸಂಘಟಿತ ಬೌಲಿಂಗ್ ಆಕ್ರಮಣಕ್ಕೆ ತತ್ತರಿಸಿದ ಇಂಗ್ಲೆಂಡಿಗೆ ರನ್ ಗಳಿಸುವುದೇ ದೊಡ್ಡ ಸಮಸ್ಯೆಯಾಗಿ ಕಾಡಿತು. ದಾಳಿಗಿಳಿದ 7 ಮಂದಿಯಲ್ಲಿ 6 ಬೌಲರ್‌ಗಳು ವಿಕೆಟ್ ಬೇಟೆಯಾಡುವಲ್ಲಿ ಯಶಸ್ವಿ ಯಾದರು. ಇವರಲ್ಲಿ ಮಧ್ಯಮ ವೇಗಿ ಡೆಲಿಸ್ಸಾ ಕಿಮ್ಮಿನ್ಸ್ 20 ರನ್ನಿತ್ತು 3 ವಿಕೆಟ್ ಕಿತ್ತು ಹೆಚ್ಚಿನ ಯಶಸ್ಸು ಸಾಧಿಸಿದರು. ಇದು ಕಿಮ್ಮಿನ್ಸ್ ಅವರ ಜೀವನಶ್ರೇಷ್ಠ ಬೌಲಿಂಗ್ ಆಗಿದೆ.
Related Articles
Advertisement
ಈ ಸಣ್ಣ ಮೊತ್ತವನ್ನು ಬೆನ್ನಟ್ಟುವ ಹಾದಿಯಲ್ಲಿ ಆಸ್ಟ್ರೇಲಿಯ ಕೂಡ ಆರಂಭಿಕ ಕುಸಿತಕ್ಕೆ ಸಿಲುಕಿತು. ಅಲಿಸ್ಸಾ ಹೀಲಿ (6) ಮತ್ತು ಎಲಿಸ್ ವಿಲ್ಲಾನಿ (1) 12 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡರು. ಆದರೆ 3ನೇ ವಿಕೆಟಿಗೆ ಜತೆಗೂಡಿದ ಎಲ್ಲಿಸ್ ಪೆರ್ರಿ (ಔಟಾಗದೆ 47) ಮತ್ತು ನಾಯಕಿ ಮೆಗ್ ಲ್ಯಾನಿಂಗ್ (ಔಟಾಗದೆ 41) 85 ರನ್ ಪೇರಿಸಿ ತಂಡದ ಗೆಲುವು ಸಾರಿದರು.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-17.4 ಓವರ್‌ಗಳಲ್ಲಿ 96 (ಅಲಿಸ್ 24, ಬೇಮಾಂಟ್ 17, ಗನ್ 12, ಕಿಮ್ಮಿನ್ಸ್ 20ಕ್ಕೆ 3, ಶಟ್ 13ಕ್ಕೆ 2, ಜೊನಾಸೆನ್ 21ಕ್ಕೆ 2). ಆಸ್ಟ್ರೇಲಿಯ-11.3 ಓವರ್‌ಗಳಲ್ಲಿ 2 ವಿಕೆಟಿಗೆ 97 (ಪೆರ್ರಿ ಔಟಾಗದೆ 47, ಲ್ಯಾನಿಂಗ್ ಔಟಾಗದೆ 41).
ಪಂದ್ಯಶ್ರೇಷ್ಠ: ಎಲ್ಲಿಸ್ ಪೆರ್ರಿ.