ನಾರ್ತಾಂಪ್ಟನ್ : ಇಂಗ್ಲೆಂಡ್ ಎದುರಿನ ಟಿ20 ಸರಣಿಯನ್ನು ಭಾರತ ಸೋಲಿನೊಂದಿಗೆ ಆರಂಭಿಸಿದೆ. ಮಳೆಪೀಡಿತ ಮೊದಲ ಪಂದ್ಯವನ್ನು ಡಿ-ಎಲ್ ನಿಯಮದಂತೆ 18 ರನ್ನಿನಿಂದ ಕಳೆದುಕೊಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 7 ವಿಕೆಟಿಗೆ 177 ರನ್ ಪೇರಿಸಿ ಸವಾಲೊಡ್ಡಿತು. ಇದನ್ನು ಬೆನ್ನಟ್ಟುವ ಹಾದಿಯಲ್ಲಿ ಭಾರತ 8.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 54 ರನ್ ಮಾಡಿತ್ತು. ಆಗ ಮಳೆ ಆರಂಭವಾಯಿತು; ಪಂದ್ಯ ರದ್ದು ಗೊಂಡಿತು. ಡಿ-ಎಲ್ ನಿಯಮ ದಂತೆ ಇಂಗ್ಲೆಂಡ್ ವಿಜಯಿಯಾಯಿತು.
ಭಾರತದ ಆರಂಭ ಅತ್ಯಂತ ಆಘಾತಕಾರಿಯಾಗಿತ್ತು. ಡ್ಯಾಶಿಂಗ್ ಓಪನರ್ ಶಫಾಲಿ ವರ್ಮ ದ್ವಿತೀಯ ಎಸೆತದಲ್ಲೇ ಖಾತೆ ತೆರೆಯದೇ ಬ್ರಂಟ್‌ಗೆ ವಿಕೆಟ್ ಒಪ್ಪಿಸಿದರು. ಸ್ಮತಿ ಮಂಧನಾ ಮತ್ತು ಹಲೀìನ್ ದೇವಲ್ ದ್ವಿತೀಯ ವಿಕೆಟಿಗೆ 44 ರನ್ ಪೇರಿಸಿ ಹೋರಾಟವನ್ನು ಜಾರಿ ಯಲ್ಲಿರಿಸಿದರು. ಕೌರ್ ಬ್ಯಾಟಿಂಗ್ ಇಲ್ಲಿಯೂ ಕೈಕೊಟ್ಟಿತು (1).
ಇದನ್ನೂ ಓದಿ : ಟೋಕಿಯೊದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ : ಹೆಚ್ಚಿತು ಒಲಿಂಪಿಕ್ಸ್ ಕಳವಳ
ವ್ಯಾಟ್-ಬ್ಯೂಮಂಟ್ ಜೋಡಿ ಇಂಗ್ಲೆಂಡಿಗೆ ಉತ್ತಮ ಆರಂಭ ಒದಗಿಸಿತು. 7.2 ಓವರ್‌ಗಳಿಂದ 56 ರನ್ ಒಟ್ಟುಗೂಡಿತು. ನಥಾಲಿ ಶಿವರ್ ಮತ್ತು ಆ್ಯಮಿ ಜೋನ್ಸ್ 4ನೇ ವಿಕೆಟಿಗೆ 78 ರನ್ ಪೇರಿಸಿದರು. ಶಿವರ್ ಗಳಿಕೆ 27 ಎಸೆತಗಳಿಂದ 55 ರನ್ (8 ಬೌಂಡರಿ, 1 ಸಿಕ್ಸರ್).
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-7 ವಿಕೆಟಿಗೆ 177 (ಶಿವರ್ 55, ಜೋನ್ಸ್ 43, ವ್ಯಾಟ್ 31, ಶಿಖಾ 22ಕ್ಕೆ 3). ಭಾರತ-8.4 ಓವರ್‌ಗಳಲ್ಲಿ 3 ವಿಕೆಟಿಗೆ 54 (ಮಂಧನಾ 29, ಹಲೀìನ್ ಔಟಾಗದೆ 17, ಬ್ರಂಟ್ 11ಕ್ಕೆ 1). ಪಂದ್ಯಶ್ರೇಷ್ಠ: ನಥಾಲಿ ಶಿವರ್.