Advertisement

T20: ಮಳೆ ಪಂದ್ಯ ಗೆದ್ದ ನ್ಯೂಜಿಲ್ಯಾಂಡ್‌; ಸರಣಿ 1-1 ಸಮಬಲ

11:46 PM Dec 31, 2023 | Team Udayavani |

ಮೌಂಟ್‌ ಮೌಂಗನಿ: ಮಳೆಯಿಂದ ಅಡಚಣೆಗೊಳಗಾದ 3ನೇ ಟಿ20 ಪಂದ್ಯವನ್ನು ಡಿ-ಎಲ್‌ ನಿಯಮದಂತೆ 17 ರನ್ನುಗಳಿಂದ ಗೆದ್ದ ನ್ಯೂಜಿಲ್ಯಾಂಡ್‌, ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಸರಣಿಯನ್ನು 1-1 ಸಮಬಲದಲ್ಲಿ ಮುಗಿಸುವಲ್ಲಿ ಯಶಸ್ವಿಯಾಗಿದೆ.

Advertisement

ರವಿವಾರ ಇಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ 19.2 ಓವರ್‌ಗಳಲ್ಲಿ 110ಕ್ಕೆ ಕುಸಿಯಿತು. ನ್ಯೂಜಿ ಲ್ಯಾಂಡ್‌ ಕೂಡ ಚೇಸಿಂಗ್‌ ವೇಳೆ ಪರದಾಡಿತು. 49ಕ್ಕೆ 5 ವಿಕೆಟ್‌ ಉರುಳಿಸಿ ಕೊಂಡಿತು. ಆದರೆ ಅದೃಷ್ಟ ದೊಡ್ಡದಿತ್ತು. 14.4 ಓವರ್‌ ಆದಾಗ ಮಳೆ ಸುರಿ ಯಿತು. ಪಂದ್ಯ ರದ್ದುಗೊಂಡಿತು. ಆಗ ನ್ಯೂಜಿಲ್ಯಾಂಡ್‌ 5 ವಿಕೆಟಿಗೆ 95 ರನ್‌ ಮಾಡಿತ್ತು. ಡಕ್‌ವರ್ತ್‌-ಲೂಯಿಸ್‌ ನಿಯಮದಂತೆ ಬಾಂಗ್ಲಾಕ್ಕಿಂತ 17 ರನ್‌ ಮುಂದಿತ್ತು.

ಮೊದಲ ಪಂದ್ಯವನ್ನು ಬಾಂಗ್ಲಾ 5 ವಿಕೆಟ್‌ಗಳಿಂದ ಜಯಿಸಿತ್ತು. ದ್ವಿತೀಯ ಮುಖಾಮುಖೀ ಮಳೆಯಿಂದ ರದ್ದುಗೊಂಡಿತ್ತು.

ನ್ಯೂಜಿಲ್ಯಾಂಡ್‌ ನಾಯಕ ಮಿಚೆಲ್‌ ಸ್ಯಾಂಟ್ನರ್‌ 16ಕ್ಕೆ 4 ವಿಕೆಟ್‌ ಉರುಳಿಸಿ ಬಾಂಗ್ಲಾ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದರು. ಸೌಥಿ, ಮಿಲೆ°, ಸಿಯರ್ ತಲಾ 2 ವಿಕೆಟ್‌ ಉರುಳಿಸಿದರು.

ಚೇಸಿಂಗ್‌ ವೇಳೆ ನ್ಯೂಜಿಲ್ಯಾಂಡ್‌ನ‌ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್ ತಲಾ ಒಂದೊಂದು ರನ್‌ ಮಾಡಿ ನಿರ್ಗಮಿಸಿದಾಗ ಬಾಂಗ್ಲಾಕ್ಕೆ ಮೇಲುಗೈ ಅವಕಾಶವಿತ್ತು. ಆದರೆ ಜೇಮ್ಸ್‌ ನೀಶಮ್‌ (28)-ಮಿಚೆಲ್‌ ಸ್ಯಾಂಟ್ನರ್‌ (18) ಸೇರಿಕೊಂಡು ತಂಡವನ್ನು ಆಧರಿಸಿ ನಿಂತರು. ಮುರಿಯದ 6ನೇ ವಿಕೆಟಿಗೆ 46 ರನ್‌ ಒಟ್ಟುಗೂಡಿತು. ಆಗ ಮಳೆ ಸುರಿಯಿತು.

Advertisement

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ- 19.2 ಓವರ್‌ಗಳಲ್ಲಿ 110 (ನಜ್ಮುಲ್‌ 17, ತೌಹಿದ್‌ 16, ಆಫಿಫ್ 14, ಸ್ಯಾಂಟ್ನರ್‌ 18ಕ್ಕೆ 4, ಮಿಲೆ° 23ಕ್ಕೆ 2, ಸೌಥಿ 25ಕ್ಕೆ 2, ಸಿಯರ್ 28ಕ್ಕೆ 2). ನ್ಯೂಜಿಲ್ಯಾಂಡ್‌-14.4 ಓವರ್‌ಗಳಲ್ಲಿ 95 (ಅಲೆನ್‌ 38, ನೀಶಮ್‌ ಔಟಾಗದೆ 28, ಸ್ಯಾಂಟ್ನರ್‌ ಔಟಾಗದೆ 18, ಶೊರೀಫ‌ುಲ್‌ 17ಕ್ಕೆ 2, ಮಹೆದಿ ಹಸನ್‌ 18ಕ್ಕೆ 2).
ಪಂದ್ಯಶ್ರೇಷ್ಠ: ಮಿಚೆಲ್‌ ಸ್ಯಾಂಟ್ನರ್‌. ಸರಣಿಶ್ರೇಷ್ಠ: ಶೊರೀಫ‌ುಲ್‌ ಇಸ್ಲಾಮ್‌.

Advertisement

Udayavani is now on Telegram. Click here to join our channel and stay updated with the latest news.

Next