Advertisement
ಮೊದಲ ಮುಖಾಮುಖಿ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡ ಬಳಿಕ ಎರಡೇ ಪಂದ್ಯಗಳಲ್ಲಿ ಸರಣಿ ಇತ್ಯರ್ಥವಾಗ ಬೇಕಾದ ಸನ್ನಿವೇಶ ಎದುರಾಗಿತ್ತು. ಮಂಗಳವಾರದ ದ್ವಿತೀಯ ಪಂದ್ಯಕ್ಕೂ ಮಳೆಯ ಕಾಟ ಎದುರಾಯಿತು. ಭಾರತದ ಇನ್ನಿಂಗ್ಸ್ ಮುಕ್ತಾಯಕ್ಕೆ ಇನ್ನೇನು 3 ಎಸೆತಗಳಿವೆ ಎನ್ನುವಾಗ ಸುರಿದ ಮಳೆಯಿಂದ ಟಾರ್ಗೆಟ್ ಬದಲಿಸಬೇಕಾಗಿ ಬಂತು. ಭಾರತ 7 ವಿಕೆಟಿಗೆ 180 ರನ್ನುಗಳ ಸವಾಲಿನ ಮೊತ್ತ ಪೇರಿಸಿತ್ತು. ದಕ್ಷಿಣ ಆಫ್ರಿಕಾ 15 ಓವರ್‌ಗಳಲ್ಲಿ 152 ರನ್ ಗುರಿ ಲಭಿಸಿತು. ಅಂದರೆ, ಓವರ್‌ಗೆ ಸರಾಸರಿ 10ರಷ್ಟು ರನ್ ತೆಗೆಯಬೇಕಾದ ಒತ್ತಡ. ಮಾರ್ಕ್‌ರಮ್ ಪಡೆ ಇದನ್ನು ಯಶಸ್ವಿಯಾಗಿ ನಿಭಾಯಿಸಿ “ವಿನ್ನಿಂಗ್ ಮಾರ್ಕ್’ ಗಳಿಸಿತು. 13.5 ಓವರ್‌ಗಳಲ್ಲಿ 5 ವಿಕೆಟಿಗೆ 154 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು.
ಇದಕ್ಕೆ ಜೊಹಾನ್ಸ್‌ಬರ್ಗ್‌ನಲ್ಲಿ “ಯಂಗ್ ಇಂಡಿಯಾ’ ತಿರುಗೇಟು ನೀಡಲೇಬೇಕಿದೆ. ಅತೀ ಮುಖ್ಯವಾಗಿ ಬೌಲಿಂಗ್ ವಿಭಾಗದಲ್ಲಿ ದೊಡ್ಡ ಮಟ್ಟದ ಸುಧಾರಣೆ ಕಾಣಬೇಕಾದ, ನಿಯಂತ್ರಣ ಸಾಧಿಸಬೇಕಾದ ಸವಾಲು ಎದುರಾಗಿದೆ. ದ್ವಿತೀಯ ಪಂದ್ಯದ ತಾಣ ವಾದ ಪೋರ್ಟ್ ಎಲಿಜಬೆತ್‌ನ “ಸೇಂಟ್ ಜಾಜ್Õì ಪಾರ್ಕ್’ ಅಪ್ಪಟ ಬ್ಯಾಟಿಂಗ್ ಟ್ರ್ಯಾಕ್ ಆಗಿ ಗೋಚರಿಸಿತ್ತು. ಟಿ20 ಜೋಶ್ ಹೆಚ್ಚಿಸುವ ಸಲುವಾಗಿ “ನ್ಯೂ ವಾಂಡರರ್ ಟ್ರ್ಯಾಕ್’ ಕೂಡ ಬ್ಯಾಟಿಂಗ್ ಸ್ನೇಹಿಯಾಗಿ ರೂಪುಗೊಂಡಿದೆ ಎಂದು ವರದಿಯಾಗಿದೆ. ಹೀಗಾಗಿ ಬೌಲರ್, ಅದರಲ್ಲೂ ಪ್ರವಾಸಿ ಭಾರತದ ಅನನುಭವಿ ಎಸೆತಗಾರರಿಗೆ ಇನ್ನೊಂದು ಅಗ್ನಿಪರೀಕ್ಷೆ ಎದು ರಾಗಲಿದೆ ಎಂದೇ ಹೇಳ ಬೇಕಾಗುತ್ತದೆ.
Related Articles
Advertisement
ರಿಂಕು-ಸೂರ್ಯ ಸಾಹಸಬ್ಯಾಟಿಂಗ್ ವಿಷಯಕ್ಕೆ ಬಂದಾಗ, ಭಾರತದ ಓಪನಿಂಗ್ ವೈಫಲ್ಯ ಎದ್ದು ಕಾಣುತ್ತದೆ. ಜೈಸ್ವಾಲ್, ಗಿಲ್ ಇಬ್ಬರೂ ಸೊನ್ನೆ ಸುತ್ತಿದ್ದು ಅಕ್ಷಮ್ಯ. ಆಗ ಸ್ಕೋರ್‌ಬೋರ್ಡ್ ಕೇವಲ 6 ರನ್ ದಾಖಲಿಸುತ್ತಿತ್ತು. ಆದರೆ ರಿಂಕು ಸಿಂಗ್, ಸೂರ್ಯ ಕುಮಾರ್ ಯಾದವ್ ಅವರ ಅರ್ಧ ಶತಕದ ಸಾಹಸದಿಂದ ಭಾರತದ ಮೊತ್ತ 180ರ ತನಕ ಬೆಳೆದದ್ದು ಅಮೋಘ ಚೇತರಿಕೆಗೆ ಹಾಗೂ ಬ್ಯಾಟಿಂಗ್ ಸಾಹಸಕ್ಕೆ ಸಾಕ್ಷಿಯಾಯಿತು. ರಿಂಕು ಅವರೀಗ ಭಾರತದ ನ್ಯೂ ಟಿ20 ಸ್ಟಾರ್ ಎಂಬುದರಲ್ಲಿ ಎರಡು ಮಾತಿಲ್ಲ.
ದಕ್ಷಿಣ ಆಫ್ರಿಕಾ ಅತ್ಯಂತ ಬಲಿಷ್ಠ ಬ್ಯಾಟಿಂಗ್ ಸರದಿಯನ್ನು ಹೊಂದಿರುವ ತಂಡ. ಹೆಂಡ್ರಿಕ್ಸ್, ಮಾರ್ಕ್‌ರಮ್, ಕ್ಲಾಸೆನ್, ಮಿಲ್ಲರ್ ಅವರೆಲ್ಲ ಬಿಗ್ ಹಿಟ್ಟರ್. ಇವರನ್ನು ತಡೆಯಲು ಸಾಮಾನ್ಯ ಬೌಲಿಂಗ್ ಪಡೆ ಖಂಡಿತ ಸಾಲದು. ಹೀಗಾಗಿ ಸರಣಿ ಸಮಬಲದ ಹಾದಿ ಸುಗಮವಂತೂ ಅಲ್ಲ. ಮುಗ್ಗರಿಸಿದ ಭಾರತ
ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ಡಿ-ಎಲ್ ನಿಯಮದಂತೆ 5 ವಿಕೆಟ್ ಸೋಲಿಗೆ ತುತ್ತಾಯಿತು. ಮಳೆಯಿಂದಾಗಿ ಭಾರತದ ಇನ್ನಿಂಗ್ಸ್ 19.3 ಓವರ್‌ಗಳಿಗೆ ನಿಂತಿತು. ಸ್ಕೋರ್ 7ಕ್ಕೆ 180. ರಿಂಕು ಸಿಂಗ್ ಅಜೇಯ 68, ಸೂರ್ಯಕುಮಾರ್ 56 ರನ್ ಹೊಡೆದರು. ದಕ್ಷಿಣ ಆಫ್ರಿಕಾಕ್ಕೆ ಲಭಿಸಿದ ಗುರಿ 15 ಓವರ್‌ಗಳಲ್ಲಿ 152 ರನ್. ಅದು 13.4 ಓವರ್‌ಗಳಲ್ಲಿ 5 ವಿಕೆಟಿಗೆ 154 ರನ್ ಬಾರಿಸಿ ಗೆಲುವು ಸಾಧಿಸಿತು. ರೀಝ ಹೆಂಡ್ರಿಕ್ಸ್ 49, ಐಡನ್ ಮಾರ್ಕ್‌ರಮ್ 30, ಮಿಲ್ಲರ್ 17 ರನ್ ಮಾಡಿದರು.