Advertisement

ಟಿ20 ಆಟಗಾರರೂ ಬಿಸಿಸಿಐ ಒಪ್ಪಂದ ವ್ಯಾಪ್ತಿಗೆ

10:35 PM Nov 20, 2020 | mahesh |

ಹೊಸದಿಲ್ಲಿ: ಬಿಸಿಸಿಐ ತನ್ನ ವಾರ್ಷಿಕ ಒಪ್ಪಂದ ಪದ್ಧತಿಯಲ್ಲಿ ಬದಲಾವಣೆ ತರಲು ಮುಂದಾಗಿದ್ದು, ಇನ್ನು ಮುಂದೆ ಕನಿಷ್ಠ 10 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಆಟಗಾರರೂ ಈ ವ್ಯಾಪ್ತಿಗೆ ಬರಲಿದ್ದಾರೆ.

Advertisement

ಇದುವರೆಗೆ ಕೇವಲ ಟೆಸ್ಟ್‌ ಮತ್ತು ಏಕದಿನ ಕ್ರಿಕೆಟ್‌ ಪಂದ್ಯಗಳನ್ನು ಆಡಿದವರಿಗೆ ಮಾತ್ರ ಈ ಸೌಲಭ್ಯ ಸಿಗುತ್ತಿತ್ತು. ಈ ಹಿಂದೆ ಸುಪ್ರೀಂಕೋರ್ಟ್‌ ನೇಮಕ ಮಾಡಿದ್ದ ಆಡಳಿತಾಧಿಕಾರಿಗಳ ಅವಧಿಯ ವೇಳೆ, ಟಿ20 ಆಟಗಾರರನ್ನು ಒಪ್ಪಂದಕ್ಕೆ ಪರಿಗಣಿಸಲು ನಿರಾಕರಿಸಲಾಗಿತ್ತು.

ಇದಕ್ಕೂ ಹಿಂದೆ, ಆಟಗಾರರನ್ನು ಒಪ್ಪಂದಕ್ಕೆ ಪರಿಗಣಿಸುವಾಗ ಬಿಸಿಸಿಐ ಕೆಲವೊಂದು ನಿಯ ಮಗಳನ್ನು ರೂಪಿಸಿತ್ತು. ಅದರಂತೆ, ಒಂದು ಪಂದ್ಯ ವನ್ನಾಡಿದರೂ ಅವರು ಒಪ್ಪಂದ ವ್ಯಾಪ್ತಿಗೆ ಒಳಪಡುತ್ತಿದ್ದರು. ಆದರೆ ಸುಪ್ರೀಂ ನೇಮಿಸಿದ ಆಡಳಿತಾಧಿಕಾರಿಗಳ ಅವಧಿಯಲ್ಲಿ ಕೆಲವು ಬದಲಾವಣೆ ಮಾಡಲಾಯಿತು. ಈ ಪ್ರಕಾರ, ಕನಿಷ್ಠ 3 ಟೆಸ್ಟ್‌ ಮತ್ತು 7 ಏಕದಿನ ಪಂದ್ಯಗಳನ್ನು ಆಡಿದ ಆಟಗಾರರಿಗೆ ಮಾತ್ರ ಬಿಸಿಸಿಐನ ಕಾಂಟ್ರ್ಯಾಕ್ಟ್ ನೀಡಲಾಗುತ್ತಿತ್ತು.

ಒಪ್ಪಂದ ನಿಯಮ ಬದಲು
ಈಗ ಈ ಒಪ್ಪಂದ ಪದ್ಧತಿಯಲ್ಲಿ ಬದಲಾವಣೆ ತರಲು ಮುಂದಾಗಿದೆ. ಅದರಂತೆ, ಕಮಿಷ್ಠ 10 ಟಿ20 ಪಂದ್ಯಗಳನ್ನು ಆಡಿರುವ ಆಟಗಾರನನ್ನೂ ಈ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗುತ್ತದೆ. ಟಿ20 ಸ್ಪೆಷಲಿಸ್ಟ್‌ ಆಟಗಾರನೊಬ್ಬ ಬಿಸಿಸಿಐ ಒಪ್ಪಂದ ವ್ಯಾಪ್ತಿಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ.

15 ವರ್ಷವಾದರಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌
ದುಬಾೖ: ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳನ್ನಾಡಲು ಐಸಿಸಿ ವಯೋಮಿತಿ ನಿಗದಿ ಮಾಡಿದೆ. ಇದರಂತೆ, ಇನ್ನು ಮುಂದೆ ಕ್ರಿಕೆಟಿಗನಿಗೆ ಕನಿಷ್ಠ 15 ವರ್ಷವಾಗಿದ್ದರೆ ಮಾತ್ರ ಆಡಲು ಅವಕಾಶವಿದೆ. ಇದು ದ್ವಿಪಕ್ಷೀಯ ಸರಣಿ, ಅಂಡರ್‌-19 ಪಂದ್ಯಗಳಿಗೂ ಅನ್ವಯಿಸಲಿದೆ. ಮಹಿಳೆಯರಿಗೂ ಇದೇ ನಿಯಮ ಅನ್ವಯವಾಗಲಿದೆ.
ವಿಶೇಷ ಸಂದರ್ಭಗಳಲ್ಲಿ ಐಸಿಸಿ ಅನುಮತಿ ಪಡೆದು, 15ಕ್ಕಿಂತ ಕಡಿಮೆ ವಯಸ್ಸಿನವರನ್ನು ಆಡಿಸಲು ಅವಕಾಶ ಪಡೆಯಬಹುದಾಗಿದೆ. ಆದರೆ ಆ ವೇಳೆ ಆಟಗಾರನ ಮಾನಸಿಕ ಬೆಳವಣಿಗೆ, ಅಂತಾರಾಷ್ಟ್ರೀಯ ಕ್ರಿಕೆಟಿಗೆ ಸ್ಪಂದಿಸುವ ಸಾಮರ್ಥ್ಯ ಮೊದಲಾದವನ್ನು ಪರಿಶೀಲಿಸಿ ನಿರ್ಧರಿಸಲಾಗುತ್ತದೆ.

Advertisement

ಸದ್ಯ ಪಾಕಿಸ್ಥಾನದ ಹಸನ್‌ ರಝ ಅತೀ ಕಡಿಮೆ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ ಹೆಗ್ಗಳಿಕೆ ಹೊಂದಿದ್ದಾರೆ. ಟೆಸ್ಟ್‌ ಕ್ರಿಕೆಟಿಗೆ ಪದಾರ್ಪಣೆ ಮಾಡುವಾಗ ಅವರ ವಯಸ್ಸು ಕೇವಲ 14 ವರ್ಷ, 227 ದಿನಗಳಾಗಿದ್ದವು. ಅನಂತರ ಅವರ ಜನನ ಪ್ರಮಾಣಪತ್ರದ ಬಗ್ಗೆ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next