Advertisement

T20; ನ್ಯೂಜಿಲಂಡ್‌ ವಿರುದ್ಧದ ಸರಣಿಗೆ ಪಾಕ್‌ ಆತಿಥ್ಯ

11:18 PM Feb 25, 2024 | Team Udayavani |

ಕರಾಚಿ: ಮುಂಬರುವ ಅಂತಾರಾಷ್ಟ್ರೀಯ ಟಿ20 ವಿಶ್ವಕಪ್‌ ಟೂರ್ನಿಗೆ ಸಿದ್ಧತೆ ನಡೆಸುವ ನಿಟ್ಟಿನಲ್ಲಿ ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ನ್ಯೂಜಿಲಂಡ್‌ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಆಯೋಜಿಸಲಿದೆ. ಮುಂದಿನ ಎಪ್ರಿಲ್‌ನಲ್ಲಿ ಈ ಸರಣಿ ನಡೆಯಲಿದೆ.

Advertisement

ಪಿಸಿಬಿ ಅಧಿಕಾರಿಗಳು ಈಗಾಗಲೇ ಈ ವಿಚಾರವನ್ನು ಖಚಿತಪಡಿಸಿದ್ದು, ಎ. 13ರಿಂದ 24ರ ವರೆಗೆ ಲಾಹೋರ್‌ ಮತ್ತು ರಾವಲ್ಪಿಂಡಿಯಲ್ಲಿ ಪಂದ್ಯಗಳು ನಡೆಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುನೈಟೆಡ್‌ ಸ್ಟೇಟ್ಸ್‌ ಮತ್ತು ವೆಸ್ಟ್‌ ಇಂಡೀಸ್‌ ಜಂಟಿಯಾಗಿ ಆತಿಥ್ಯ ವಹಿಸಿರುವ 2024ರ ಟಿ20 ವಿಶ್ವಕಪ್‌ ಟೂರ್ನಿ ಜೂನ್‌ 1ರಿಂದ ಜುಲೈ 29ರ ವರೆಗೆ ನಡೆಯಲಿದೆ. ಈ ಮಹತ್ವದ ಟೂರ್ನಿಗೆ ಸಿದ್ಧತೆ ಆರಂಭಿಸುವ ನಿಟ್ಟಿನಲ್ಲಿ ಟಿ20 ಸರಣಿಗೆ ಪಾಕ್‌ ಆತಿಥ್ಯ ವಹಿಸಿದೆ ಎಂದು ಪಿಸಿಬಿ ಮಾಹಿತಿ ನೀಡಿದೆ. ಅಂದಹಾಗೆ, ಕಳೆದ ಜನವರಿಯಲ್ಲಷ್ಟೇ ನ್ಯೂಜಿಲಂಡ್‌ಗೆ ಪ್ರವಾಸ ಹೋಗಿದ್ದ ಪಾಕ್‌ ಕ್ರಿಕೆಟ್‌ ತಂಡ ಅಲ್ಲಿ 5 ಪಂದ್ಯಗಳ ಟಿ20 ಸರಣಿ ಆಡಿತ್ತು. ಆದರೆ ಸರಣಿ 4-1ರಿಂದ ನ್ಯೂಜಿಲಂಡ್‌ ವಶವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next