Advertisement
ಮೊದಲ ಪಂದ್ಯದಲ್ಲಿ ಎಲ್ಲ ವಿಭಾಗ ಗಳಲ್ಲೂ ವೈಫಲ್ಯ ಅನುಭವಿಸಿ 8 ವಿಕೆಟ್ ಸೋಲಿಗೆ ತುತ್ತಾಗಿದ್ದ ಭಾರತ ಮರು ಪಂದ್ಯದಲ್ಲೇ ಗೆಲುವಿನ ಹಾದಿ ಕಂಡುಕೊಂಡದ್ದು ಧನಾತ್ಮಕ ಬೆಳವಣಿಗೆ. ಇಶಾನ್ ಕಿಶನ್ ಮೊದಲ ಪಂದ್ಯದಲ್ಲೇ ನಿರ್ಭೀತ ಬ್ಯಾಟಿಂಗ್ ನಡೆಸಿದ್ದು, ಸೊನ್ನೆ ಸುತ್ತಿದ ಬಳಿಕ ಕೊಹ್ಲಿ ನೈಜ ಆಟಕ್ಕೆ ಕುದುರಿದ್ದು, ಬೌಲಿಂಗ್‌ನಲ್ಲಿ ನಿಯಂತ್ರಣ ಸಾಧಿಸಿದ್ದೆಲ್ಲ ಭಾರತದ ಗೆಲುವಿನ ಪ್ರಮುಖ ಅಂಶಗಳಾಗಿದ್ದವು.
ಟೀಮ್ ಇಂಡಿಯಾದ ಸದ್ಯದ ಚಿಂತೆಯೆಂದರೆ ಕೆ.ಎಲ್. ರಾಹುಲ್ ಅವರ ಸತತ ವೈಫಲ್ಯ (1 ಮತ್ತು 0). ಇದರಿಂದ ಅವರ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಮುಂಬೈ ಇಂಡಿಯನ್ಸ್‌ನ ಸ್ಟಾರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ತಮ್ಮ ಸ್ಥಾನವನ್ನು ಭದ್ರಪಡಿಸುವ ಸೂಚನೆ ನೀಡಿರುವುದರಿಂದ ಹಾಗೂ ರೋಹಿತ್ ಹನ್ನೊಂದರ ಬಳಗವನ್ನು ಪ್ರವೇಶಿಸುವ ಸಾಧ್ಯತೆ ಇರುವುದರಿಂದ ರಾಹುಲ್ ಸ್ಥಾನ ಅಲುಗಾಡುತ್ತಿರುವುದು ಸುಳ್ಳಲ್ಲ. ನಾಯಕ ಕೊಹ್ಲಿ ನೀಡಿದ ಹೇಳಿಕೆ ಪ್ರಕಾರ ರೋಹಿತ್‌ಗೆ ಮೊದಲೆರಡು ಪಂದ್ಯಗಳಲ್ಲಷ್ಟೇ ವಿಶ್ರಾಂತಿ ನೀಡಲಾಗಿದೆ. ರೋಹಿತ್ ಸೋಮವಾರ ಕಠಿನ ಅಭ್ಯಾಸ ನಡೆಸಿದ್ದನ್ನು ಕಂಡಾಗ 3ನೇ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತ ಎಂದೇ ಭಾವಿಸಬೇಕಾಗುತ್ತದೆ. ಅಕಸ್ಮಾತ್ ರೋಹಿತ್ ವಿಶ್ರಾಂತಿ ಮುಂದುವರಿದರಷ್ಟೇ ರಾಹುಲ್ ಸ್ಥಾನ ಉಳಿಸಿಕೊಳ್ಳಬಹುದು ಎಂಬುದು ಸದ್ಯದ ಲೆಕ್ಕಾಚಾರ. ಅಂದಮಾತ್ರಕ್ಕೆ ರಾಹುಲ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸುವ ಸಾಧ್ಯತೆ ಇರಲಿಕ್ಕಿಲ್ಲ. ಇಲ್ಲಿ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಗಟ್ಟಿಗೊಳಿಸುವುದು ತಂಡದ ಯೋಜನೆ ಆಗಿರಲಿದೆ.
Related Articles
Advertisement
ಬೌಲಿಂಗ್ ಬದಲಾವಣೆ ಅಸಂಭವಕೆಳ ಕ್ರಮಾಂಕದ ವರೆಗೂ ಬ್ಯಾಟಿಂಗ್ ಸಾಮರ್ಥ್ಯ ಹೊಂದಿರುವ ಇಂಗ್ಲೆಂಡನ್ನು 164ಕ್ಕೆ ನಿಯಂತ್ರಿಸಿದ್ದು ಭಾರತದ ಬೌಲರ್‌ಗಳ ಹೆಚ್ಚುಗಾರಿಕೆ. ಭುವನೇಶ್ವರ್, ಸುಂದರ್ ಮತ್ತು ಠಾಕೂರ್ ಪರಿಣಾಮಕಾರಿ ದಾಳಿ ಸಂಘಟಿಸಿದ್ದರು. ಫಿಟ್‌ನೆಸ್‌ಗೆ ಮರಳಿದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 4 ಓವರ್ ಎಸೆಯುವ ಸಾಮರ್ಥ್ಯ ತೋರಿರುವುದು ಕೂಡ ಉತ್ತಮ ಬೆಳವಣಿಗೆ. ರವಿವಾರದ ಡೆತ್ ಓವರ್‌ಗಳಲ್ಲಿ ಭಾರತ ಉತ್ತಮ ಹಿಡಿತ ಸಾಧಿಸಿತ್ತು. ಹೀಗಾಗಿ ಆತಿಥೇಯರ ಬೌಲಿಂಗ್ ಸರದಿಯಲ್ಲಿ ಬದಲಾವಣೆ ಗೋಚರಿಸುವ ಸಾಧ್ಯತೆ ಕಡಿಮೆ. ಸೈನಿ, ಚಹರ್ ಅವರೆಲ್ಲ ಸದ್ಯ ಕಾಯಬೇಕಾದುದು ಅನಿವಾರ್ಯ. ಸರಣಿಯಲ್ಲಿ ಮೇಲುಗೈ ಸಾಧಿಸಿದರೆ ಇವರಿಗೆ ಹಂತ ಹಂತವಾಗಿ ಅವಕಾಶ ಸಿಗಬಹುದು. ಇಂಗ್ಲೆಂಡ್ ಗಾಯಗೊಂಡ ಹುಲಿ
ದ್ವಿತೀಯ ಪಂದ್ಯದಲ್ಲಿ ಎಡವಿದರೂ ನಂ.1 ಖ್ಯಾತಿಯ ಇಂಗ್ಲೆಂಡ್ ಅಪಾ ಯಕಾರಿ ತಂಡ ಎಂಬುದಲ್ಲಿ ಎರಡು ಮಾತಿಲ್ಲ. ಅದೀಗ ಗಾಯಗೊಂಡ ಹುಲಿ. ರಾಯ್ ಅವರಂತೂ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಜತೆಗೆ ಮಾಲನ್, ಮಾರ್ಗನ್, ಸ್ಟೋಕ್ಸ್, ಬಟ್ಲರ್… ಎಲ್ಲರೂ ಬಿಗ್ ಹಿಟ್ಟರ್. ಆಂಗ್ಲರಲ್ಲಿ ತಿರುಗಿ ಬೀಳುವ ತಾಕತ್ತು ಇದ್ದೇ ಇದೆ. ದ್ವಿತೀಯ ಪಂದ್ಯದಲ್ಲಿ ಮಾರ್ಕ್ ವುಡ್ ಗಾಯಾಳಾಗಿ ಹೊರಗುಳಿದದ್ದು ಇಂಗ್ಲೆಂಡಿಗೆ ಹಿನ್ನಡೆಯಾಗಿ ಪರಿಣಮಿಸಿತ್ತು. ವುಡ್ ಮಂಗಳವಾರ ತಂಡಕ್ಕೆ ಮರಳುವ ಸಾಧ್ಯತೆ ಇದೆ. ಮೊಯಿನ್ ಅಲಿ ಕೂಡ ಕಾಯುತ್ತಿದ್ದಾರೆ.