ರಾಯ್ಪುರ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟಿ20 ಪಂದ್ಯ ಗೆದ್ದ ಟೀಂ ಇಂಡಿಯಾ ಒಂದು ಪಂದ್ಯ ಬಾಕಿ ಇರುವಂತೆ ಸರಣಿ ಗೆದ್ದುಕೊಂಡಿದೆ. ರಾಯ್ಪುರದಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಭಾರತವು 20 ರನ್ ಅಂತರದ ಗೆಲುವು ಕಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 174 ರನ್ ಗಳಿಸಿದರೆ, ಆಸ್ಟ್ರೇಲಿಯಾ ತಂಡವು ಏಳು ವಿಕೆಟ್ ನಷ್ಟಕ್ಕೆ 154 ರನ್ ಮಾತ್ರ ಮಾಡಲು ಶಕ್ತವಾಯಿತು.
ಈ ಪಂದ್ಯದಲ್ಲಿ ಭಾರತದ ರುತುರಾಜ್ ಗಾಯಕ್ವಾಡ್ ಅವರು ಕೆಎಲ್ ರಾಹುಲ್ ಅವರ ದಾಖಲೆಯೊಂದನ್ನು ಮುರಿದರು. ರಾಯ್ಪುರ ಪಂದ್ಯದಲ್ಲಿ ಗಾಯಕ್ವಾಡ್ ಅವರು 28 ಎಸೆತಗಳಲ್ಲಿ 32 ರನ್ ಪೇರಿಸಿದರು.
ಪುರುಷರ ಟಿ20 ಕ್ರಿಕೆಟ್ ನಲ್ಲಿ ಅತೀ ವೇಗವಾಗಿ 4000 ರನ್ ಪೇರಿಸಿದ ದಾಖಲೆಯಲ್ಲಿ ರುತುರಾಜ್ ಗಾಯಕ್ವಾಡ್ ಅವರು ಕೆಎಲ್ ರಾಹುಲ್ ಅವರನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದರು. ಭಾರತೀಯರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.
ಪುರುಷರ T20 ಕ್ರಿಕೆಟ್‌ನಲ್ಲಿ ವೇಗವಾಗಿ 4,000 ರನ್ ಗಳಿಸಿದವರು (ಇನ್ನಿಂಗ್ಸ್ ಆಧಾರ)
107 – ಕ್ರಿಸ್ ಗೇಲ್
113 – ಶಾನ್ ಮಾರ್ಷ್
115 – ಬಾಬರ್ ಆಜಮ್
116 – ಡೆವೊನ್ ಕಾನ್ವೇ
116 – ರುತುರಾಜ್ ಗಾಯಕ್ವಾಡ್
117 – ಕೆಎಲ್ ರಾಹುಲ್