Advertisement
ಮೊದಲು ಬ್ಯಾಟಿಂಗ್ ನಡೆಸಿದ ಲಂಕೆಗೆ ಗಳಿಸಲು ಸಾಧ್ಯವಾದದ್ದು 7 ವಿಕೆಟಿಗೆ 111 ರನ್ ಮಾತ್ರ. ಚೇಸಿಂಗ್ ವೇಳೆ 12 ಓವರ್ ಮುಗಿದ ಬಳಿಕ ಮಳೆ ಸುರಿದ ಕಾರಣ ಇಂಗ್ಲೆಂಡ್ ಗುರಿಯನ್ನು ಪರಿಷ್ಕರಿಸಲಾಯಿತು. 18 ಓವರ್‌ಗಳಲ್ಲಿ 103 ರನ್ ಟಾರ್ಗೆಟ್ ಲಭಿಸಿತು. ಇಂಗ್ಲೆಂಡ್ 16.1 ಓವರ್‌ಗಳಲ್ಲಿ 5 ವಿಕೆಟಿಗೆ 108 ರನ್ ಬಾರಿಸಿ ಜಯ ಸಾಧಿಸಿತು. ಮೊದಲ ಪಂದ್ಯವನ್ನು ಆಂಗ್ಲರ ಪಡೆ 8 ವಿಕೆಟ್‌ಗಳಿಂದ ಗೆದ್ದಿತ್ತು. ಅಂತಿಮ ಮುಖಾಮುಖೀ ಶನಿವಾರ ನಡೆಯಲಿದೆ.
ಲಂಕೆಯ ಬ್ಯಾಟಿಂಗ್ ಮೊದಲ ಪಂದ್ಯಕ್ಕಿಂತಲೂ ಹೀನಾಯವಾಗಿತ್ತು. ಇಂಗ್ಲೆಂಡ್ ಇನ್ನಷ್ಟು ಘಾತಕ ಬೌಲಿಂಗ್ ನಡೆಸಿತು. ಕುಸಲ್ ಮೆಂಡಿಸ್ (39) ಮತ್ತು ಕುಸಲ್ ಪೆರೆರ (21) 3ನೇ ವಿಕೆಟಿಗೆ ಸಣ್ಣದೊಂದು ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಇದನ್ನೂ ಓದಿ :ವಿಂಬಲ್ಡನ್ ಡ್ರಾ : ಮೊದಲ ಸುತ್ತಿನಲ್ಲಿ ಜೊಕೋಗೆ ಸುಲಭ ಎದುರಾಳಿ
Related Articles
Advertisement
ಪಂದ್ಯಶ್ರೇಷ್ಠ: ಲಿಯಮ್ ಲಿವಿಂಗ್‌ಸ್ಟೋನ್.