Advertisement

ಟಿ20 ಕ್ಯಾಪ್ಟನ್ಸಿ: ರೋಹಿತ್‌ ವಿಶಿಷ್ಟ ದಾಖಲೆ

06:15 AM Nov 13, 2018 | Team Udayavani |

ಚೆನ್ನೈ : ಚೆನ್ನೈ ಟಿ20 ಪಂದ್ಯವನ್ನು ಅಂತಿಮ ಎಸೆತದಲ್ಲಿ ಗೆಲ್ಲುವ ಮೂಲಕ ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತ 3-0 ಕ್ಲೀನ್‌ ಸ್ವೀಪ್‌ ಸಾಧನೆಗೈದಿತು. ಇದರೊಂದಿಗೆ ನಾಯಕ ರೋಹಿತ್‌ ಶರ್ಮ ವಿಶಿಷ್ಟ ದಾಖಲೆಗಳೆರಡನ್ನು ತಮ್ಮದಾಗಿಸಿಕೊಂಡರು.

Advertisement

ಇದು ನಾಯಕತ್ವ ವಹಿಸಿದ 12 ಪಂದ್ಯಗಳಲ್ಲಿ ರೋಹಿತ್‌ ಶರ್ಮ ದಾಖಲಿಸಿದ 11ನೇ ಗೆಲುವು. ಇದರೊಂದಿಗೆ ಮೊದಲ 12 ಟಿ20 ಅಂತಾರಾಷ್ಟ್ರೀಯ ಪಂದ್ಯಗಳ ನಾಯಕತ್ವದ ವೇಳೆ ಅತ್ಯಧಿಕ ಗೆಲುವು ಕಂಡ ದಾಖಲೆ ರೋಹಿತ್‌ ಶರ್ಮ ಅವರದ್ದಾಯಿತು. ಮೈಕಲ್‌ ಕ್ಲಾರ್ಕ್‌, ಶೋಯಿಬ್‌ ಮಲಿಕ್‌, ಸಫ‌ìರಾಜ್‌ ಅಹ್ಮದ್‌, ಅಸYರ್‌ ಅಫ್ಘಾನ್‌ ಅವರೆಲ್ಲ ಮೊದಲ 12 ಪಂದ್ಯಗಳಲ್ಲಿ 10 ಗೆಲುವು ಕಂಡಿದ್ದರು. 72 ಪಂದ್ಯಗಳಲ್ಲಿ 41 ಗೆಲುವು ಕಂಡ ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದ ವಿಶ್ವದಾಖಲೆ ಹೊಂದಿದ್ದಾರೆ.

ಚೆನ್ನೈ ಗೆಲುವಿನೊಂದಿಗೆ ರೋಹಿತ್‌ ಶರ್ಮ 2 ಟಿ20 ಸರಣಿಗಳನ್ನು 3-0 ಅಂತರದಿಂದ ಕ್ಲೀನ್‌ ಸ್ವೀಪ್‌ ಆಗಿ ವಶಪಡಿಸಿಕೊಂಡ ವಿಶ್ವದ ಮೊದಲ ನಾಯಕನೆನಿಸಿದರು. ಇದಕ್ಕೂ ಮುನ್ನ  ಶ್ರೀಲಂಕಾ ವಿರುದ್ಧದ 2017-18ರ ಟಿ20 ಸರಣಿಯಲ್ಲೂ ರೋಹಿತ್‌ ನಾಯಕತ್ವದಲ್ಲಿ ಭಾರತ 3-0 ಗೆಲುವು ಸಾಧಿಸಿತ್ತು.

ಇದು ಭಾರತದಿಂದ ದಾಖಲಾದ 3ನೇ 3-0 ಕ್ಲೀನ್‌ ಸ್ವೀಪ್‌ ಸಾಧನೆ. 2016ರಲ್ಲಿ ಮಹೇಂದ್ರ ಸಿಂಗ್‌ ಧೋನಿ ಸಾರಥ್ಯದ ಭಾರತ ತಂಡ ಆಸ್ಟ್ರೇಲಿಯವನ್ನು ಅವರದೇ ನೆಲದಲ್ಲಿ 3-0 ವೈಟ್‌ವಾಶ್‌ಗೆ ಗುರಿಪಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next