Advertisement

T20 Batting Ranking: ಮೂರಕ್ಕೇರಿದ ಯಶಸ್ವಿ ಜೈಸ್ವಾಲ್‌

12:56 AM Jul 18, 2024 | Team Udayavani |

ದುಬಾೖ:  ನೂತನ ಟಿ20 ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಭಾರತದ ಡ್ಯಾಶಿಂಗ್‌ ಓಪನರ್‌ ಯಶಸ್ವಿ ಜೈಸ್ವಾಲ್‌ ಉತ್ತಮ ಪ್ರಗತಿ ಸಾಧಿಸಿದ್ದಾರೆ. 4 ಸ್ಥಾನ ಮೇಲೇರಿರುವ ಅವರೀಗ 3ನೇ ರ್‍ಯಾಂಕ್‌ ಗಳಿಸಿದ್ದಾರೆ. ಟ್ರ್ಯಾವಿಸ್‌ ಹೆಡ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಕ್ರಮವಾಗಿ ಮೊದಲೆರಡು ಸ್ಥಾನ ಕಾಯ್ದುಕೊಂಡಿದ್ದಾರೆ.

Advertisement

ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಮಿಂಚಿನ ಬ್ಯಾಟಿಂಗ್‌ ಪ್ರದರ್ಶಿಸಿದ್ದು ಯಶಸ್ವಿ ಜೈಸ್ವಾಲ್‌ ಅವರ ರ್‍ಯಾಂಕಿಂಗ್‌ ಏರಿಕೆಗೆ ಕಾರಣ. ಜಿಂಬಾಬ್ವೆಯಲ್ಲಿ ಟೀಮ್‌ ಇಂಡಿಯಾವನ್ನು ಮುನ್ನಡೆಸಿದ ಶುಭಮನ್‌ ಗಿಲ್‌ 36 ಸ್ಥಾನ ಮೇಲೇರಿ 37ನೇ ರ್‍ಯಾಂಕ್‌ ಪಡೆದಿದ್ದಾರೆ. ಈ ಸರಣಿಯಲ್ಲಿ ಗಿಲ್‌ 5 ಇನ್ನಿಂಗ್ಸ್‌ಗಳಿಂದ 170 ರನ್‌ ಹೊಡೆದಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next