Advertisement

T20: ಕಿವೀಸ್‌ ವಿರುದ್ಧ ಸರಣಿ ವೈಟ್‌ವಾಷ್‌ ಸಾಧನೆ ಮಾಡಿದ ಆಸೀಸ್‌

11:22 PM Feb 25, 2024 | Team Udayavani |

ಆಕ್ಲೆಂಡ್‌: ಆತಿಥೇಯ ನ್ಯೂಜಿಲಂಡ್‌ ವಿರುದ್ಧ ಪ್ರವಾಸಿ ಆಸ್ಟ್ರೇಲಿಯ ಕ್ರಿಕೆಟ್‌ ತಂಡ, 3-0ಯಿಂದ ಟಿ20 ಸರಣಿಯನ್ನು ಜಯಿಸಿದೆ. ಸರಣಿಯನ್ನು ವೈಟ್‌ವಾಷ್‌ ಮೂಲಕ ಗೆದ್ದುಕೊಂಡಿದೆ. ರವಿವಾರ ನಡೆದ 3ನೇ ಪಂದ್ಯದಲ್ಲಿ ಆಸ್ಟ್ರೇಲಿಯ, ಡಕ್‌ವರ್ತ್‌ ಲೂಯಿಸ್‌ ನಿಯಮದಂತೆ 27 ರನ್ನುಗಳಿಂದ ಜಯ ಗಳಿಸಿದೆ. ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ 10.4 ಓವರ್‌ಗೆ 4 ವಿಕೆಟ್‌ ಕಳೆದುಕೊಂಡು 118 ರನ್‌ ಕಲೆ ಹಾಕಿದ್ದಾಗ ಮಳೆ ಸುರಿಯಿತು. ಈ ಹಿನ್ನೆಲೆಯಲ್ಲಿ ಕಿವೀಸ್‌ಗೆ 10 ಓವರ್‌ಗಳಲ್ಲಿ 126 ರನ್‌ ಗಳಿಸುವ ಗುರಿ ನೀಡಲಾಗಿತ್ತು. ಕಿವೀಸ್‌ 3 ವಿಕೆಟ್‌ಗೆ 98 ರನ್‌ ಗಳಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next