Advertisement

ಟಿ20: ಅಫ್ಘಾನಿಸ್ಥಾನ ವಿಶ್ವದಾಖಲೆ: ಟಿ20ಯಲ್ಲಿ ಸರ್ವಾಧಿಕ ರನ್‌

12:30 AM Feb 24, 2019 | |

ಡೆಹ್ರಾಡೂನ್‌: ಅಫ್ಘಾನಿಸ್ಥಾನ ಟಿ20 ಅಂತಾ ರಾಷ್ಟ್ರೀಯ ಪಂದ್ಯದಲ್ಲಿ ಸರ್ವಾಧಿಕ ರನ್‌ ಪೇರಿಸಿದ ವಿಶ್ವದಾಖಲೆ ನಿರ್ಮಿಸಿದೆ. ಐರ್ಲೆಂಡ್‌ ವಿರುದ್ಧದ ಮುಖಾಮುಖೀಯಲ್ಲಿ ಅಫ್ಘಾನ್‌ 3 ವಿಕೆಟಿಗೆ 278 ರನ್‌ ಗಳಿಸಿ ಈ ದಾಖಲೆ ಸ್ಥಾಪಿಸಿತು. 

Advertisement

2016ರ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯ 3 ವಿಕೆಟಿಗೆ 263 ರನ್‌ ಬಾರಿಸಿದ ದಾಖಲೆ ಪತನಗೊಂಡಿತು. 

ಅಫ್ಘಾನ್‌ ಪರ ಆರಂಭಕಾರ ಹಜ್ರತುಲ್ಲ ಜಜಾಯ್‌ ಅಜೇಯ 162 ರನ್‌ ಬಾರಿಸಿದರು (62 ಎಸೆತ, 11 ಬೌಂಡರಿ, 16 ಸಿಕ್ಸರ್‌). ಇದು ಟಿ20 ಇತಿಹಾಸದ 2ನೇ ಸರ್ವಾಧಿಕ ವೈಯಕ್ತಿಕ ಗಳಿಕೆ. ಕಳೆದ ವರ್ಷ ಜಿಂಬಾಬ್ವೆ ವಿರುದ್ಧದ ಹರಾರೆ ಪಂದ್ಯದಲ್ಲಿ ಆಸ್ಟ್ರೇ ಲಿಯದ ಆರಂಭಕಾರ ಆರನ್‌ ಫಿಂಚ್‌ 172 ರನ್‌ ಬಾರಿಸಿದ್ದು ವಿಶ್ವದಾಖಲೆಯಾಗಿದೆ.

ಆದರೆ ಹಜ್ರತುಲ್ಲ ಜಜಾಯ್‌ ಇನ್ನಿಂಗ್ಸ್‌ ಒಂದರಲ್ಲಿ ಅತೀ ಹೆಚ್ಚು ಸಿಕ್ಸರ್‌ ಬಾರಿಸಿದ ವಿಶ್ವದಾಖಲೆ ಬರೆ ದರು. 2013ರ ಇಂಗ್ಲೆಂಡ್‌ ಎದುರಿನ ಸೌತಾಂಪ್ಟನ್‌ ಪಂದ್ಯದಲ್ಲಿ  ಫಿಂಚ್‌ ಬಾರಿಸಿದ 14 ಸಿಕ್ಸರ್‌ಗಳ ದಾಖಲೆ ಪತನಗೊಂಡಿತು. 

Advertisement

Udayavani is now on Telegram. Click here to join our channel and stay updated with the latest news.

Next