Advertisement
ರಾಜ್ಯ ತಂಡದ ಆಯ್ಕೆಗಾಗಿ ಈ ಪಂದ್ಯಾಟ ನಡೆದಿತ್ತು. ಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಸಮ ರ್ಥನಂ ತಂಡ 20 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 140 ರನ್ ಕಲೆ ಹಾಕಿತ್ತು. ಅನಂತರ ಬ್ಯಾಟ್ ಮಾಡಿದ ಕಾರವಾರ ತಂಡ ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 71 ರನ್ ಮಾಡಿ, 69 ರನ್‌ಗಳ ಸೋಲನ್ನು ಅನುಭವಿಸಿತು.ಸಮರ್ಥನಂ ತಂಡದ ಸುನೀತಾ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಸರಣಿ ಶ್ರೇಷ್ಠ ಪ್ರಶಸ್ತಿಯು ಬಿ1 ವಿಭಾಗದಲ್ಲಿ ಕಾವ್ಯ ವಿ., ಬಿ2 ವಿಭಾಗದಲ್ಲಿ ಸುನೀತಾ ಹಾಗೂ ಬಿ3 ವಿಭಾಗದಲ್ಲಿ ದೇವಕ್ಕ ಪಡೆದುಕೊಂಡರು.
ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ, ಶಾಸಕ ಯಶ್‌ಪಾಲ್ ಸುವರ್ಣ, ಮಾಹೆ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್ ಮಾತನಾಡಿ, ನ್ಯೂನತೆ ಮರೆತು ಸಿಕ್ಕ ಅವಕಾಶಗಳನ್ನು ಸದು
ಪಯೋಗಪಡಿಸಿಕೊಳ್ಳಬೇಕು ಹಾಗೂ ಎಲ್ಲರೊಂದಿಗೂ ಬೆರೆಯಬೇಕು ಎಂದು ಶುಭ ಹಾರೈಸಿ, ಪ್ರಶಸ್ತಿ ವಿತರಿಸಿದರು.
ಮಾಹೆ ಸಹ ಕುಲಪತಿ ಡಾ| ಶರತ್ ಕೆ. ರಾವ್, ಕ್ರೀಡಾ ಮಂಡಳಿ ಕಾರ್ಯದರ್ಶಿ ಡಾ| ವಿನೋದ್ ನಾಯಕ್, ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಭೂಸೇಗೌಡ, ಅಗ್ರಜ ಫೌಂಡೇಶನ್‌ನ ನವೀನ್ ಕುಮಾರ್, ಉದಯ ಕಿಚನ್ ಎಂ.ಡಿ. ರಮೇಶ್, ರೋಟರಿ ಕ್ಲಬ್‌ನ ದಿವಾಕರ್, ಪ್ರಮುಖರಾದ ಶಿಖಾ ಶೆಟ್ಟಿ, ವಸಂತಿ ಮೊದಲಾದವರು ಉಪಸ್ಥಿತರಿದ್ದರು. ಅಸೋಸಿಯೇಶನ್ ಫಾರ್ ದಿ ಬ್ಲೈಂಡ್ ಆಫ್ ಇಂಡಿಯಾ (ಸಿಎಬಿಐ) ಅಧ್ಯಕ್ಷ ರಾದ ಸಮರ್ಥನಂನ ಸ್ಥಾಪಕ ಮ್ಯಾನೇ ಜಿಂಗ್ ಟ್ರಸ್ಟಿ ಡಾ| ಮಹಾಂತೇಶ್ ಜಿ. ಸ್ವಾಗತಿಸಿ, ಪ್ರಸ್ತಾವನೆಗೈದರು. ಸತೀಶ್ ನಿರೂಪಿಸಿದರು. ಅಂತಾರಾ ಷ್ಟ್ರೀಯ ಅಂಧ ಕ್ರಿಕೆಟಿಗ ಪ್ರಕಾಶ್ ಜಯ ರಾಮಯ್ಯ, ಸುನಿಲ್ ಅವರನ್ನು ಸಮ್ಮಾನಿಸಲಾಯಿತು.