Advertisement

ಅಲ್ಪಸಂಖ್ಯಾತರ ಮೇಲೆ ಪ್ರೀತಿಯಿದ್ದರೆ ಜಮೀರ್ ರನ್ನೇ ಸಿಎಂ ಅಭ್ಯರ್ಥಿಯಾಗಿಸಿ: ಶರವಣ ಸವಾಲು

03:20 PM Oct 18, 2021 | Team Udayavani |

ಬೆಂಗಳೂರು: “ಸಿದ್ದರಾಮಯ್ಯನವರೇ ಅಲ್ಪಸಂಖ್ಯಾತರ ಮೇಲೆ ಪ್ರೀತಿಯಿದ್ದರೆ ಜಮೀರ್ ಅಹಮದ್ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿ” ಎಂದು ಜೆಡಿಎಸ್ ವಕ್ತಾರ ಟಿ.ಎ.ಶರವಣ ಸವಾಲೆಸೆದರು.

Advertisement

ಜೆಪಿ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಐದು ವರ್ಷ ಅಲ್ಪಸಂಖ್ಯಾತ ರಿಗೆ ಏನು ಕೆಲಸ ಮಾಡಿದ್ದಾರೆ? ಅಕ್ಕಿ ‌ಕೊಟ್ಟೆ, ಅ ಭಾಗ್ಯ ಈ ಭಾಗ್ಯ ಅಂತೀರಾ ಅಷ್ಟೇ, ಆದರೆ ಸಿದ್ದರಾಮಯ್ಯ ಅಲ್ಪಸಂಖ್ಯಾತ ನಾಯಕರನ್ನು ಮುಗಿಸಿದ್ದಾರೆ. ಜಮೀರ್ ಅವರನ್ನೂ ಮುಗಿಸುತ್ತಾರೆ. ಹೀಗಾಗಿ ಜಮೀರ್ ಎಚ್ಚರವಾಗಿ ಇರಿ ಎಂದರು.

ಸಿದ್ದರಾಮಯ್ಯ, ಕಾಂಗ್ರೆಸ್ ಗೆ ತಾಕತ್ ಇದ್ದರೆ ಜಮೀರ್ ರನ್ನೇ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿ. ಅದು ಆಗದಿದ್ದರೇ ಅಲ್ಪಸಂಖ್ಯಾತ ನಾಯಕರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿ. ನಮ್ಮದು ಸಣ್ಣ ಪಕ್ಷ ನಾವು ಸಿಎಂ ಮಾಡುವುದು ಬಿಡಿ, ನಿಮ್ಮದು ರಾಷ್ಟ್ರೀಯ ಪಕ್ಷ ನೀವು ಅಲ್ಪಸಂಖ್ಯಾತರಿಗೆ ಸಿಎಂ ಸ್ಥಾನ ಕೊಡಿ ಎಂದರು.

ಇಕ್ಬಾಲ್ ಅನ್ಸಾರಿಯವರನ್ನು ಮಂತ್ರಿ ಮಾಡಿದ್ದು ಯಾರು? ಕಾಂಗ್ರೆಸ್ ‌ನಿಂದ ಸೋತು ಹೋಗಿದ್ದ ಅವರನ್ನು ಕುಮಾರಸ್ವಾಮಿ ಟಿಕೆಟ್ ಕೊಟ್ಟು ಗೆಲ್ಲಿಸಿದರು. ಕುಮಾರಸ್ವಾಮಿ ‌ಹೆಸರಿನಲ್ಲಿ ಅನ್ಸಾರಿ ಪ್ರಮಾಣ ವಚನ ಸ್ವೀಕಾರ ಮಾಡಿದರು ಇವತ್ತು ಅದನ್ನ ಮರೆತು ಮಾತಾಡುತ್ತೀರಿ ಎಂದು ಇಕ್ಬಾಲ್ ಅನ್ಸಾರಿ ವಿರುದ್ದವೂ ಶರವಣ ಕಿಡಿಕಾರಿದರು.

ಇದನ್ನೂ ಓದಿ:ಶಾಸಕ ಪಾಟೀಲ್‌ ಹೇಳಿಕೆಗೆ ರಾಜಕೀಯ ಧ್ವನಿ

Advertisement

ವಿಧಾನಸೌಧದ ಒಳಗೆ ಜಮೀರ್ ಅವ್ರನ್ನ ಬಿಟ್ಟಿರಲಿಲ್ಲ. ಕುಮಾರಸ್ವಾಮಿ ಅವತ್ತು ನಿಮ್ಮ ಹೆಗಲ ಮೇಲೆ ಕೈ ಹಾಕಿ ಎಂಎಲ್ಎ ಮಾಡುತ್ತೇನೆಂದು ಕರೆದುಕೊಂಡು ಬಂದಿದ್ದರು. ನಿಮ್ಮ ಮೂಲ ಬೇರು ಯಾವುದು? ಅದನ್ನೆ ಮರೆತು ಹೋದ್ರಾ? ಅಂದು ಕುಮಾರಸ್ವಾಮಿ ಅವ್ರನ್ನು ಇಂದ್ರ, ಚಂದ್ರ- ಸರ್ವಸ್ವ ಅಂತ ಹೇಳಿದ್ದರು. ಇವತ್ತು ಅವರ ವಿರುದ್ದ ಮಾತಾಡ್ತೀರಾ? ಜಮೀರ್ ಅಹಮದ್ ಗೆ ತಾಕತ್ ಇದ್ದರೆ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಸಿಎಂ ಸ್ಥಾನ ಘೋಷಣೆ ಮಾಡಿ, ಅಥವಾ ಡಿಸಿಎಂ ಸ್ಥಾನ ಘೋಷಣೆ ಮಾಡಿ, ಅಥವಾ ಪತಿಷತ್ ವಿಪಕ್ಷ ಸ್ಥಾನ ಇಬ್ರಾಹಿಂ ಗೆ ಕೊಡಿ ಎಂದರು.

ನಾವು ಉತ್ತರ ಕೊಡುತ್ತೇವೆ: ಯಾವುದರಲ್ಲಿ ಎಷ್ಟು ಡೀಲ್ ಮಾಡಿದ್ದೀರಾ ನಮಗೆ ಗೊತ್ತು. ದೇವೇಗೌಡರು ದೇವರು ಅಂದ ನೀವು ಇವತ್ತು ಮಾತಾಡ್ತೀರಾ. ಇನ್ನು ಮುಂದೆ ಜಮೀರ್ ಗೆ ಕುಮಾರಸ್ವಾಮಿ ಉತ್ತರ ಕೊಡಬೇಡಿ. ನಾವು ಅವರಿಗೆ ಉತ್ತರ ಕೊಡುತ್ತೇವೆ. ಎರಡು ಬಾರಿ ಸೋತು ಮನೆಯಲ್ಲಿ ಜಮೀರ್ ಇದ್ದರು. ಶಾಸಕನಾಗಿ ಮಾಡಲು ಯಾರು ಕಾರಣ? ಸಿದ್ದರಾಮಯ್ಯ ಇವತ್ತು ನಾಯಕ ಅಂತೀರಾ? ಇಲ್ಲಿ ಇದ್ದಾಗ ಕುಮಾರಣ್ಣ, ಈಗ ಸಿದ್ದರಾಮಣ್ಣ, ಮುಂದೆ ಯಾರಣ್ಣ ಎನ್ನುತ್ತಾರೋ ಗೊತ್ತಿಲ್ಲ ಎಂದು ಶರವಣ ವ್ಯಂಗ್ಯವಾಡಿದರು.

ದೇವೇಗೌಡ ಫ್ಯಾಕ್ಟರಿಯಲ್ಲಿ ಎಷ್ಟೋ ಜನ ಬಂದು ಹೋಗಿದ್ದಾರೆ. ತೊಡೆ ತಟ್ಟಿದವರು ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದಿದ್ದಾರೆ. ಬಾಯಿಗೆ ಬಂದಂತೆ ಮಾತಾಡಬೇಡಿ. ಯೋಚನೆ ಮಾಡಿ ಹೇಳಿಕೆಕೊಡಿ ಎಂದು ಜಮೀರ್ ವಿರುದ್ದ ಶರವಣ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next