ದಾವಣಗೆರೆ : ಈ ಬಾರಿಯ ಟಿ-20 ವಿಶ್ವಕಪ್‌ಗೆ ದಾವಣಗೆರೆ ಮೂಲದ ಆಟಗಾರ ಶ್ರೇಯಸ್ ಮೋವಾ ಕೆನಡಾ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಶ್ರೇಯಸ್ ಮೋವಾ ದಾವಣಗೆರೆ ನಗರದವರಾಗಿದ್ದು ನಗರದ ನಗರ ಬಾಪೂಜಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದ್ದಾರೆ. 2006ರಲ್ಲಿ ದಾವಣಗೆರೆ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದು, ನಂತರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಡೆಸುವ ಅಂತಾರಾಜ್ಯ ವಯೋಮಿತಿ ಒಳಗೊಂಡ 19 ವರ್ಷದೊಳಗಿನ, 16 ವರ್ಷದೊಳಗಿನ ಪಂದ್ಯಾವಳಿಗಳಿಗೆ ಆಯ್ಕೆಯಾಗಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.
ತುಮಕೂರು ಕ್ರಿಕೆಟ್ ವಲಯದ ಸಂಚಾಲಕರಾಗಿ ಕೆ. ಶಶಿಧರ್ ವೀನಸ್ ಕ್ರಿಕೆಟ್ ಕ್ಲಬ್ ತಂಡವನ್ನು ಹಲವು ವರ್ಷ ಪ್ರತಿನಿಧಿಸಿದ ಶ್ರೇಯಸ್, ಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕೆನಡಾಕ್ಕೆ ಹೋಗಿ, ಅಲ್ಲಿಯೂ ತಮ್ಮಲ್ಲಿರುವ ಕ್ರಿಕೆಟ್ ಆಸಕ್ತಿ ತೋರಿ, ಕೆನಡಾ ದೇಶದ ಪೌರತ್ವ ಪಡೆದು, ಕ್ರಿಕೆಟ್ ವೃತ್ತಿ ಮುಂದುವರಿಸಿದ್ದಾರೆ.
ಹಲವು ವರ್ಷಗಳ ಪ್ರಯತ್ನದ ಬಳಿಕ ಕೆನಡಾ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ ಶ್ರೇಯಸ್, ಹಲವು ಅಂತಾರಾಷ್ಟ್ರೀಯ ಪಂದ್ಯಗಳನ್ನೂ ಆಡಿದ್ದಾರೆ. ಈಗ ಪ್ರಸಕ್ತ ತಿಂಗಳು ಆರಂಭವಾಗುವ ಟಿ-20 ವಿಶ್ವಕಪ್‌ಗೆ ಈಗ ಆಯ್ಕೆಯಾಗಿದ್ದು ಕೆನಡಾ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಪುತ್ರ ಶ್ರೇಯಸ್ ವಿಶ್ವಕಪ್ ತಂಡಕ್ಕೆ ಪುತ್ರ ಆಯ್ಕೆಯಾಗಿರುವುದಕ್ಕೆ ಎಂ.ಜಿ. ವಾಸುದೇವರೆಡ್ಡಿ ಹಾಗೂ ಎನ್ ಯಶೋಧ ದಂಪತಿ ಹರ್ಷ ವ್ಯಕ್ತಪಡಿಸಿದ್ದಾರೆ.