Advertisement
ರಾಹುಲ್ ದ್ರಾವಿಡ್ ಕಳೆದ ಎರಡುವರೆ ವರ್ಷಗಳಿಂದ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ಶನಿವಾರ ನಡೆದ ವಿಶ್ವಕಪ್ ಫೈನಲ್ ಪಂದ್ಯದವರೆಗೆ ಟೀಮ್ ಇಂಡಿಯಾಕ್ಕೆ ನೀಡಿದ ಕೊಡುಗೆ, ಸಲಹೆ, ಸೂಚನೆಗಳಿಂದ ೧೧ ವರ್ಷಗಳಿಂದ ಸಿಗದಿದ್ದ ಐಸಿಸಿ ಟ್ರೋಫಿಯ ಬರವನ್ನು ನೀಗಿಸಿದೆ.
ವಿರಾಟ್ ಕೊಹ್ಲಿ ಜೊತೆ ಮಾತನಾಡಿದ ಪ್ರಧಾನಿ ಮೋದಿ “ ನಿಮ್ಮೊಂದಿಗೆ ಮಾತನಾಡಿ ಸಂತೋಷವಾಯಿತು. ಫೈನಲ್ ಪಂದ್ಯದ ಇನ್ನಿಂಗ್ಸ್ ಭಾರತ ತಂಡಕ್ಕೆ ಆಧಾರವಾಗಿತ್ತು. ಎಲ್ಲ ವಿಧದ ಕ್ರಿಕೆಟ್ ಮಾದರಿಯಲ್ಲೂ ಭವ್ಯವಾಗಿ ಬ್ಯಾಟಿಂಗ್ ನಡೆಸಿದ್ದೀರಿ. ಟಿ-೨೦ ಕ್ರಿಕೆಟ್ ನಿಮ್ಮನ್ನು ಮಿಸ್ ಮಾಡಿಕೊಳ್ಳಲಿದೆ. ಆದರೆ ನೀವು ಯುವ ಪೀಳಿಗೆಯ ಆಟಗಾರರನ್ನು ಪ್ರೇರೇಪಿಸುತ್ತೀರಿ ಎಂಬ ವಿಶ್ವಾಸ ಹೊಂದಿದ್ಧೇನೆ” ಎಂದರು.
Related Articles
Advertisement
ಫೈನಲ್ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಪಾಂಡ್ಯ ಹಾಗೂ ಸೂರ್ಯ ಕುಮಾರ್ ಯಾದವ್‌ಗೂ ಪ್ರಧಾನಿ ಮೋದಿ ಪ್ರಶಂಸಿದ್ದಾರೆ. ಐತಿಹಾಸಿಕ ಗೆಲುವು ಸಾಧಿಸಿದ್ದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಶುಭ ಹಾರೈಸಿದ್ದಾರೆ.