Advertisement

ಕ್ಯೂಪಿ ಫಾರ್ಮಾದಿಂದ “ಭಾರತಕ್ಕೆ ಕೆಟ್ಟ ಹೆಸರು ತರಲು ಸಿರಪ್‌ ನಕಲು”

10:19 PM Apr 26, 2023 | Team Udayavani |

ಚಂಡೀಗಢ: “ಭಾರತ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕೆಮ್ಮಿನ ಸಿರಪ್‌ ಅನ್ನು ಯಾರೋ ನಕಲು ಮಾಡಿದ್ದಾರೆ” ಎಂದು ಪಂಜಾಬ್‌ ಮೂಲದ ಕ್ಯೂಪಿ ಫಾರ್ಮಾ ಕೆಮಿಕಲ್‌ ಲಿಮಿಟೆಡ್‌ನ‌ ವ್ಯವಸ್ಥಾಪಕ ನಿರ್ದೇಶಕ(ಎಂಡಿ) ಸುಧೀರ್‌ ಪಾಠಕ್‌ ದೂರಿದ್ದಾರೆ.

Advertisement

ಮಾರ್ಷಲ್‌ ಐಲ್ಯಾಂಡ್ಸ್‌ ಮತ್ತು ಮೈಕ್ರೊನೇಶಿಯಾದಲ್ಲಿ ಭಾರತ ಮೂಲದ ಕೆಮ್ಮಿನ ಸಿರಪ್‌ ಕುರಿತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್‌ಒ) “ಕಳಪೆ ಉತ್ಪನ್ನ ಎಚ್ಚರಿಕೆ” ಹೊರಡಿಸಿರುವ ಹಿನ್ನೆಲೆಯಲ್ಲಿ ಪಾಠಕ್‌ ಈ ಹೇಳಿಕೆ ನೀಡಿದ್ದಾರೆ. ಆ ದೇಶಗಳಿಗೆ ರಫ್ತಾಗಿರುವ ಈ ಸಿರಪ್‌ಗ್ಳಲ್ಲಿ ಕಲುಷಿತ ಗೈಫೆನೆಸಿನ್‌ ಟಿಜಿ ಸಿರಪ್‌ ಪತ್ತೆಯಾಗಿದೆ ಎಂದು ಡಬ್ಲೂಎಚ್‌ಒ ಹೇಳಿದೆ.

ಕ್ಯೂಪಿ ಫಾರ್ಮಾ ಈ ಸಿರಪ್‌ಗ್ಳನ್ನು ತಯಾರಿಸಿದ್ದು, ಹರ್ಯಾಣದ ಟ್ರಿಲಿಯಮ್‌ ಫಾರ್ಮಾ ಇದರ ಮಾರ್ಕೆಟಿಂಗ್‌ ಮಾಡುತ್ತದೆ.
“ಕಾಂಬೋಡಿಯಗೆ ಕಳುಹಿಸಲಾದ ಉತ್ಪನ್ನವನ್ನು ಯಾರೋ ನಕಲು ಮಾಡಿದ್ದಾರೆ ಹಾಗೂ ನಂತರ ಅದನ್ನು ಮಾರ್ಷಲ್‌ ಐಲ್ಯಾಂಡ್ಸ್‌ ಮತ್ತು ಮೈಕ್ರೊನೇಶಿಯಾಗೆ ಮಾರಾಟ ಮಾಡಿದ್ದಾರೆ ಎಂದು ಪಂಜಾಬ್‌ನ ಆಹಾರ ಮತ್ತು ಔಷಧ ಆಡಳಿತ(ಎಫ್ಡಿಎ) ಅನುಮಾನ ವ್ಯಕ್ತಪಡಿಸಿದೆ. ಇಲಾಖೆಯು ಕಾಂಬೋಡಿಯಗೆ ಕಳುಹಿಸಲಾದ ಸಿರಪ್‌ನ ಮಾದರಿಯನ್ನು ಪಡೆದುಕೊಂಡಿದೆ. ಒಟ್ಟು 18,336 ಬಾಟಲ್‌ ಕೆಮ್ಮಿನ ಸಿರಪ್‌ ಅನ್ನು ಕಾಂಬೋಡಿಯಗೆ ಕಳುಹಿಸಲಾಗಿತ್ತು’ ಎಂದು ಪಾಠಕ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next