Advertisement

ಸಿಂಡ್‌ ಬ್ಯಾಂಕ್‌: ಒಟ್ಟಾರೆ ವಹಿವಾಟು 5 ಲಕ್ಷ ಕೋಟಿ ರೂ.ಗೆ ಏರಿಕೆ

02:17 AM Feb 12, 2020 | mahesh |

ಮಣಿಪಾಲ: ಪ್ರಸಕ್ತ ಹಣಕಾಸು ವರ್ಷದ ತ್ತೈಮಾಸಿಕದಲ್ಲಿ ಸಿಂಡಿಕೇಟ್‌ ಬ್ಯಾಂಕ್‌ 435 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದಲದೇ, ಬ್ಯಾಂಕ್‌ನ ಒಟ್ಟಾರೆ ವಹಿವಾಟನ್ನು ಐದು ಲಕ್ಷ ಕೋಟಿ ರೂ.ಗೆ ಏರಿಸಿ ದಾಖಲೆ ಮಾಡಿದೆ.

Advertisement

ಗಾಂಧಿನಗರದ ಸಿಂಡಿಕೇಟ್‌ ಬ್ಯಾಂಕ್‌ ಪ್ರಧಾನ ಕಚೇರಿಯಲ್ಲಿ ಮಂಗಳವಾರ ನಡೆದ ಪ್ರಸಕ್ತ ಆರ್ಥಿಕ ವರ್ಷದ ಮೂರನೇ ತ್ತೈಮಾಸಿಕದ ಫ‌ಲಿತಾಂಶ ಕುರಿತು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೃತ್ಯುಂಜಯ ಮಹಾಪಾತ್ರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 2019-20ನೇ ಆರ್ಥಿಕ ವರ್ಷದ ಮೂರನೇ ತ್ತೈಮಾಸಿಕದ ಅಂತ್ಯಕ್ಕೆ ಸಿಂಡಿಕೇಟ್‌ ಬ್ಯಾಂಕ್‌ ಐದು ಲಕ್ಷ ಕೋಟಿ ರೂ. ವಹಿವಾಟು ನಡೆಸಿ ದಾಖಲೆ ಮಾಡಿದೆ ಎಂದರು.

ಕಳೆದ ಆರ್ಥಿಕ ವರ್ಷದ (2018-19) ಮೂರನೇ ತ್ತೈಮಾಸಿಕದಲ್ಲಿ 108 ಕೋಟಿ ರೂ. ಇದ್ದ ನಿವ್ವಳ ಲಾಭವು ಈ ಬಾರಿ 435 ಕೋಟಿ ರೂ.ಗೆ ಏರಿಕೆಯಾಗಿದೆ. ಪ್ರಮುಖವಾಗಿ ಒಟ್ಟು ಅನುತ್ಪಾದಕ ಆಸ್ತಿ ಪ್ರಮಾಣ ಅನುಪಾತವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 12.54 ರಿಂದ 11.33ಕ್ಕೆ
ಇಳಿಕೆಯಾಗಿದೆ. ಅಂತೆಯೇ ನಿವ್ವಳ ಅನುತ್ಪಾದಕ ಆಸ್ತಿ ಪ್ರಮಾಣ ಅನು ಪಾತ ಕೂಡ 6.75ರಿಂದ 5.94ರಷ್ಟು ಇಳಿಕೆಯಾಗಿದೆ ಎಂದರು.

ನಿರ್ವಹಣಾ ಲಾಭ ವೃದ್ಧಿ
2018-19ರ ಮೂರನೇ ತ್ತೈಮಾಸಿಕಕ್ಕಿಂತ ಈ ಬಾರಿ ನಿರ್ವಹಣಾ ಲಾಭ ಪ್ರಮಾಣವು ಶೇ. 111ರಷ್ಟು ಏರಿಕೆಯಾಗಿದ್ದು, 1,336 ಕೋಟಿ ರೂ.ಗೆ ತಲುಪಿದೆ. ಜತೆಗೆ ಬಡ್ಡಿಯಿಂದ ಬರುವ ನಿವ್ವಳ ಬಡ್ಡಿ ಆದಾಯವು ಶೇ. 16ರಷ್ಟು ಏರಿಕೆಯಾಗಿದ್ದು, 1,871 ಕೋಟಿ ರೂ.ಗೆ ತಲುಪಿದೆ.

ಚಾಲ್ತಿ ಹಾಗೂ ಉಳಿತಾಯ ಖಾತೆಯ ಠೇವಣಿ ಪ್ರಮಾಣವು ಶೇ. 8.19ರಷ್ಟು ಏರಿಕೆಯಾಗಿದೆ. ಕಳೆದ ಡಿಸೆಂಬರ್‌ನಲ್ಲಿದ್ದ ಶೇ. 64.81 ನಿಬಂಧನೆ ವ್ಯಾಪ್ತಿ ಅನುಪಾತವು 2019 ಡಿಸೆಂಬರ್‌ನಲ್ಲಿ ಶೇ. 69.28ರಷ್ಟು ಸುಧಾರಿಸಿದೆ. ಒಟ್ಟಾರೆ ಸಿಬಂದಿ ಶ್ರಮದಿಂದ ಮೂರನೇ ತ್ತೈಮಾಸಿಕದಲ್ಲಿ ಬ್ಯಾಂಕ್‌ ಅತ್ಯುತ್ತಮ ವಹಿವಾಟು ನಡೆಸಿದ್ದು, ನಾಲ್ಕನೇ ತ್ತೈಮಾಸಿಕದಲ್ಲಿಯೂ ಮುಂದುವರಿಸುವ ಭರವಸೆ ಇದೆ ಎಂದರು.

Advertisement

ಒಟ್ಟು ವ್ಯವಹಾರ ಶೇ.7ರಷ್ಟು ಹೆಚ್ಚಳ
2018ರ ಡಿಸೆಂಬರ್‌ನಲ್ಲಿ 4,67,911 ಕೋಟಿ ರೂ. ಇದ್ದ ವಹಿವಾಟು ಶೇ. 7ರಷ್ಟು ಹೆಚ್ಚಳವಾಗಿ 5,00,971 ಕೋಟಿ ರೂ.ಗೆ ತಲುಪಿದೆ. ಈ ದಾಖಲೆಯ ವಹಿವಾಟಿಗೆ ಮೂರನೇ ತ್ತೈಮಾಸಿಕದಲ್ಲಿ ಠೇವಣಿ ಹೆಚ್ಚಳವು ಪ್ರಮುಖ ಕಾರಣವಾಗಿದೆ. ಚಿಲ್ಲರೆ ಮತ್ತು ಕೃಷಿ ಕ್ಷೇತ್ರದಲ್ಲಿ ಕ್ರಮವಾಗಿ ಶೇ.7 ಮತ್ತು ಶೇ. 10ರಷ್ಟು ಬೆಳವಣಿಗೆ ಕಂಡು ಬಂದಿದೆ ಎಂದು ಹೇಳಿದರು.

ಗ್ರಾಹಕರ ಅನುಕೂಲವನ್ನು ಹೆಚ್ಚಿಸಲು ಮೊಬೈಲ್ ಬ್ಯಾಂಕಿಂಗ್‌ ಅಪ್ಲಿಕೇಶನ್‌ನ ಪರಿಷ್ಕೃತ ಆವೃತ್ತಿಯಲ್ಲಿ ಬ್ಯಾಂಕ್‌ ಹಿಂದಿ, ಇಂಗ್ಲಿಷ್‌ ಭಾಷೆಗಳ ಜತೆಗೆ 9 ಪ್ರಾದೇಶಿಕ ಭಾಷೆಗಳನ್ನು ಸಕ್ರಿಯಗೊಳಿಸಿದೆ. ಇನ್ನು ಬ್ಯಾಂಕ್‌ ವಿಲೀನ ಕುರಿತು ಗ್ರಾಹಕರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಬ್ಯಾಂಕ್‌ ಅಧಿಕಾರಿಗಳು ತಿಳಿಸಿದರು.

ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್‌. ಕೃಷ್ಣನ್‌, ಅಜಯ್‌ ಕೆ. ಕುರಾನಾ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next