Advertisement

ಸಿಂಡ್‌ಬ್ಯಾಂಕ್‌ ವಹಿವಾಟು 4,77,265 ಕೋಟಿ

12:16 PM Nov 03, 2018 | |

ಬೆಂಗಳೂರು: ಸಾರ್ವಜನಿಕ ವಲಯದ ಸಿಂಡಿಕೇಟ್‌ ಬ್ಯಾಂಕ್‌ ಎರಡನೇ ತ್ತೈಮಾಸಿಕದ ಹಣಕಾಸು ವರದಿಯಲ್ಲಿ ಜಾಗತಿಕ ವಹಿವಾಟು 4,77,265 ಕೋಟಿ ರೂ.ಗಳಷ್ಟು ನಡೆಸಿದ್ದರೂ 1543 ಕೋಟಿ ರೂ. ನಿವ್ವಳ ನಷ್ಟ ಅನುಭವಿಸಿದೆ. 

Advertisement

ಇತೀಚೆಗೆ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ  ಮತ್ತು ಸಿಇಒ ಮೃತ್ಯುಂಜಯ ಮಹಾಪಾತ್ರ ಅವರು ಪತ್ರಿಕಾಗೋಷ್ಠಿ ನಡೆಸಿ 2018- 19ನೇ ಸಾಲಿನ 2ನೇ ತ್ತೈಮಾಸಿಕ ಹಾಗೂ ಅರ್ಧ  ವಾರ್ಷಿಕ ವರದಿ ಪ್ರಕಟಿಸಿದರು. 

2017ನೇ ಸಾಲಿನಲ್ಲಿ 4,8,488 ಕೋಟಿ ರೂ. ಜಾಗತಿಕ ವಹಿವಾಟು ನಡೆಸಿದ್ದ ಬ್ಯಾಂಕು ಪ್ರಸಕ್ತ ಸಾಲಿನಲ್ಲಿ 4,77,265  ಕೋಟಿ ರೂ. ವಹಿವಾಟು ನಡೆಸಿದೆ. ಸ್ಥಳೀಯ ವಹಿವಾಟಿನಲ್ಲಿ ಶೇ.2ರಷ್ಟು ಕುಸಿತ ಕಂಡಿದ್ದರೆ ಅರ್ಧ ವಾರ್ಷಿಕ ಫಲಿತಾಂಶದ ಪ್ರಕಾರ  ಕಾರ್ಯನಿರ್ವಹಣಾ ಲಾಭ ಮಾತ್ರ 1129 ಕೋಟಿ ರೂ. ಗಳಿಸಿದೆ. ಇನ್ನೂ ತ್ತೈಮಾಸಿಕದ ಕಾರ್ಯನಿರ್ವಹಣಾ ಲಾಭ 570 ಕೋಟಿ ರೂ.ಗಿಳಿದಿದೆ.

ವಸೂಲಾಗದ ಸಾಲದ ನಿರ್ವಹಣೆಗೆ ದೊಡ್ಡ ಮೊತ್ತದ ಲಾಭಾಂಶ ಮೀಸಲಿಟ್ಟಿ ರುವುದರಿಂದ ಬ್ಯಾಂಕು ನಷ್ಟ ಅನುಭವಿ ಸುವಂತಾಗಿದೆ ಎಂದರು. ಒಟ್ಟಾರೆ  ಸೆಪ್ಟೆಂಬರ್‌ 2018ರ ಅಂತ್ಯಕ್ಕೆ ನಿವ್ವಳ ನಷ್ಟ 2825 ಕೋಟಿ ರೂ. ಗಳಾಗಿದ್ದರೂ, 2ನೇ ತ್ತೈಮಾಸಿಕದಲ್ಲಿ 1543 ಕೋಟಿ ರೂ. ನಿವ್ವಳ ನಷ್ಟಕೀRಡಾಗಿದೆ.  ಕಳೆದ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್‌ 105 ಕೋಟಿ ರೂ. ಲಾಭ ಗಳಿಸಿತ್ತು. 

ಎರಡನೇ ತ್ತೈಮಾಸಿಕದಲ್ಲಿ ನಿವ್ವಳ ಬಡ್ಡಿ ಆದಾಯದಲ್ಲಿ ಶೇ.4 ರಷ್ಟು  (1572 ಕೋಟಿ ಯಿಂದ 1506 ಕೋಟಿಗೆ) ಏರಿಕೆ ಕಂಡು ಬಂದಿದೆ. ಠೇವಣಿ ಸಂಗ್ರಹ ಸೆಪ್ಟೆಂಬರ್‌ ಅಂತ್ಯಕ್ಕೆ 2,68,222 ಕೋಟಿಗಳಾಗಿ, ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದು, ಸ್ಥಳೀಯ ಠೇವಣಿಗಳ ಶೇಕಡವಾರು ಕಾಸಾ ಶೇ.30.41ರಷ್ಟು ಅಭಿವೃದ್ಧಿ ಕಂಡಿದೆ. ಎನ್‌ ಪಿಎ ಸರಾಸರಿ  ಶೇ.6.83ಕ್ಕೇರಿದ್ದು ಕಡಿಮೆ ಗೊಳಿಸಲು ಯತ್ನಿಸ ಲಾಗುವುದು ಎಂದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next