Advertisement

ರಷ್ಯಾ: ಐಸಿಸ್‌ ಬೆಂಬಲಿತ ಕೈದಿಗಳ ದಾಳಿಗೆ 4 ಜೈಲು ಸಿಬಂದಿ ಸಾವು

01:37 AM Aug 25, 2024 | Team Udayavani |

ಹೊಸದಿಲ್ಲಿ: ಇಸ್ಲಾಮಿಕ್‌ ಸ್ಟೇಟ್‌(ಐಸಿಸ್‌) ಬೆಂಬಲಿ ಗರು ಎಂದು ಹೇಳಿಕೊಂಡ ನಾಲ್ವರು ಕೈದಿಗಳು ನಡೆ ಸಿದ ದಾಳಿಯಲ್ಲಿ 4 ಮಂದಿ ಜೈಲು ಸಿಬಂದಿ ಮೃತಪಟ್ಟ ಘಟನೆ ರಷ್ಯಾದ ವೋಲ್ಗೊಗ್ರಾಡ್‌ ಪ್ರಾಂತದಲ್ಲಿ ಶುಕ್ರ ವಾರ ನಡೆದಿದೆ. ದಾಳಿಯ ಬಳಿಕ ರಷ್ಯಾದ ವಿಶೇಷ ಪಡೆಗಳು ಪ್ರತಿದಾಳಿ ನಡೆಸಿ ಕೈದಿಗಳನ್ನು ಕೊಂದಿದೆ.

Advertisement

ಕೈದಿಗಳು ಚಾಕುಗಳನ್ನು ಹಿಡಿದಿದ್ದರು ಹಾಗೂ ನಾವು ಐಸಿಸ್‌ ಬೆಂಬಲಿಗರು ಎಂದು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ ಅವರು ಒತ್ತೆಯಾ ಳುಗಳನ್ನು ಇರಿಸಿಕೊಂಡು, ಬಂಧೀಖಾನೆಯ ಒಂದು ಭಾಗವನ್ನು ವಶಪಡಿಸಿಕೊಂಡಿದ್ದರು. ಈ ವೇಳೆ ರಷ್ಯಾ ವಿಶೇಷ ಸೇನೆ, ಶಸ್ತ್ರಾಸ್ತ್ರ ಪಡೆ ಹಾಗೂ ರೊಸ್‌ಕ್ವಾರ್ಡಿಯಾ ನ್ಯಾಶನಲ್‌ ಗಾರ್ಡ್‌ನ ಪರಿಣತ ಸ್ನೆ„ಪರ್‌ಗಳು ಸೇರಿ ಹಲವು ವಿಶೇಷ ಪಡೆಗಳು ನಡೆಸಿದ ದಾಳಿ ಯಿಂದ ನಾಲ್ಕೂ ದಾಳಿಕೋರರನ್ನು ಕೊಲ್ಲಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next