Advertisement
ಕಳೆದ 2 ತಿಂಗಳಿಂದೀಚೆ ಜಡ್ಕಲ್ ಗ್ರಾ.ಪಂ. ವ್ಯಾಪ್ತಿಯಲ್ಲಿ ಏಕಾಏಕಿ ಡೆಂಗ್ಯೂ ರೋಗ ಪೀಡಿತರು ಹೆಚ್ಚುತ್ತಿದ್ದು, ಪಂಚಾಯತ್, ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರು ಸೇರಿ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಶೈಲೇಶ್ ಅವರ ನೇತೃತ್ವದಲ್ಲಿನ ತಂಡವು ಕಾರ್ಯಪ್ರವೃತ್ತಗೊಂಡಿದ್ದರೂ ರೋಗ ಲಕ್ಷಣ ಉಲ್ಬಣಗೊಳ್ಳುತ್ತಿರುವುದು ಇಲಾಖೆಗೆ ಸವಾಲಾಗಿದೆ.
Related Articles
Advertisement
ಡೆಂಗ್ಯೂ ರೋಗ ಲಕ್ಷಣ ಕಂಡುಬಂದವರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗಳಿಗೆ ಸಾಗಿಸಲು ಪ್ರತ್ಯೇಕ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ರೋಗಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ, ಉತ್ತಮ ಸೇವೆಯ ಕ್ರಮ ಕೈಗೊಳ್ಳಲಾಗಿದೆ.
ಸ್ವಚ್ಛತೆಯ ಅರಿವು
ಜಡ್ಕಲ್ ಗ್ರಾ.ಪಂ. ಹಾಗೂ ಆಶಾ ಕಾರ್ಯಕರ್ತೆಯರ ಸಹಕಾರದೊಡನೆ ಜಡ್ಕಲ್ ಗ್ರಾಮಗಳ ವಿವಿಧೆಡೆ ತೆರಳಿ ರೋಗ ಲಕ್ಷಣ ಕಂಡುಬಂದವರ ರಕ್ತ ಪರೀಕ್ಷೆಗೆ ವ್ಯವಸ್ಥೆಗೊಳಿಸಲಾಗಿದೆ. ಗ್ರಾಮಸ್ಥರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ದಿಸೆಯಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ. ಎಲ್ಲರೂ ಸಹಕರಿಸುವಂತೆ ಕೋರಲಾಗಿದೆ. –ಡಾ| ಶೈಲೇಶ್, ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲೂರು
ಹೆಚ್ಚಿನ ಕಾಳಜಿ
ಜಡ್ಕಲ್ ಗ್ರಾ.ಪಂ. ಸದಸ್ಯರು, ಸಿಬಂದಿ, ಆರೋಗ್ಯ ಇಲಾಖೆಗಳ ಸಹಕಾರದೊಡನೆ ವಿವಿಧ ತಂಡ ರಚಿಸಿ ಮನೆ-ಮನೆಗೆ ತೆರಳಿ ಡೆಂಗ್ಯೂ ರೋಗ ಲಕ್ಷಣ ಹೊಂದಿದವರ ಬಗ್ಗೆ ಮಾಹಿತಿ ಸಂಗ್ರಹಿಸಿ, ರಕ್ತ ಪರಿಶೀಲನೆ ನಡೆಸಿ ಆಸ್ಪತ್ರೆ ದಾಖಲಿಸುವ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಶ್ರಮಿಸಲಾಗುತ್ತಿದೆ. – ವನಜಾಕ್ಷಿ ಶೆಟ್ಟಿ, ಅಧ್ಯಕ್ಷೆ, ಗ್ರಾ.ಪಂ.ಜಡ್ಕಲ್