Advertisement
ವೈದಿಕರು ಸುದರ್ಶನ ಹೋಮ ನಡೆಸಿದ ಬಳಿಕ ಆ ಹೋಮ ಕುಂಡದಲ್ಲಿ ಪಂಚಲೋಹದಿಂದ ಮಾಡಿದ ಶಂಖ ಮತ್ತು ಚಕ್ರದ ಮುದ್ರೆಗಳನ್ನು ಬಿಸಿ ಮಾಡಿ ತೋಳುಗಳಲ್ಲಿ ಮುದ್ರಿಸಿಕೊಳ್ಳುವುದು ಸಂಪ್ರದಾಯ. ಬುಧವಾರ ಕೊರೊನಾ ಕಾರಣದಿಂದ ಶ್ರೀಕೃಷ್ಣಮಠದಲ್ಲಿ ಭಕ್ತರಿಗೆ ಪ್ರವೇಶವಿಲ್ಲದ್ದರಿಂದ ಕೇವಲ ಸ್ವಾಮೀಜಿಯವರು ಮಾತ್ರ ಮುದ್ರಾಧಾರಣೆ ಮಾಡಿಸಿಕೊಂಡರು. ಇತರೆಡೆಗಳಲ್ಲಿಯೂ ಇದೇ ರೀತಿ ನಡೆಯಿತು.
ಕೃಷ್ಣಾಪುರ ಮಠದಲ್ಲಿ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಅದಮಾರು ಮೂಲ ಮಠದಲ್ಲಿ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಶಿರಸಿ ಸಮೀಪದ ಸೋಂದೆಯಲ್ಲಿ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ನೀಲಾವರ ಗೋಶಾಲೆ ಯಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಬೆಂಗಳೂರು ಪುತ್ತಿಗೆ ಮಠದಲ್ಲಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಪುತ್ತಿಗೆ ಮೂಲಮಠದಲ್ಲಿ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಬೆಂಗಳೂರು ಭಂಡಾರಕೇರಿ ಮಠದಲ್ಲಿ ಶ್ರೀ ವಿದ್ಯೆàಶತೀರ್ಥ ಶ್ರೀಪಾದರು, ಸುಬ್ರಹ್ಮಣ್ಯದಲ್ಲಿ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು, ಗೃಹಸ್ಥರು ನಡೆಸುವ ಏಕೈಕ ತಾಣವಾದ ಕಡಬ ತಾಲೂಕು ಉಪ್ಪಿನಂಗಡಿ ಸಮೀಪದ ಎರ್ಕಿ ಮಠದಲ್ಲಿ ಅರ್ಚಕ ವೇ| ಮೂ| ನರಹರಿ ಉಪಾಧ್ಯಾಯ ಅವರು ಮುದ್ರಾಧಾರಣೆ ಮಾಡಿಕೊಂಡರು. ಮುಂದೆ ಸಾರ್ವಜನಿಕರಿಗೆ ಮುದ್ರಾಧಾರಣೆ
ಈಗ ಕೋವಿಡ್-19 ಕಾರಣದಿಂದ ಯತಿಗಳಿಗೆ ಮಾತ್ರ ಮುದ್ರಾಧಾರಣೆ ಮಾಡಲಾಗುತ್ತಿದೆ. ಕೊರೊನಾ ಮೂಲಕ ಪ್ರಕೃತಿ ನಮಗೆ ಎಷ್ಟೋ ಹೊಸ ವಿಷಯಗಳ ಅನುಭವವನ್ನು ನೀಡಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಮುದ್ರಾಧಾರಣೆ ನಡೆಸಲಾಗುವುದು ಎಂದು ಪರ್ಯಾಯ ಅದಮಾರುಶ್ರೀ ಹೇಳಿದರು.
Related Articles
Advertisement