ಹುಣಸೂರು: ಇಲ್ಲನ ನ್ಯೂ ವಿಕ್ರಂ ಜಿಮ್‌ನನಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ದೇಹದಾಡ್ಯì ಸ್ಪರ್ಧೆಯಲ್ಲಿ ದಾವಣಗೆರೆಯ ಸೈಯದ್ ಇಕ್ಬಾಲ್ ಪ್ರಥಮ ಸ್ಥಾನ ಪಡೆದು 25 ಸಾವಿರ ರೂ.ನಗದು ಹಾಗೂ ಟ್ರೋಫಿಯನ್ನು ತಮ್ಮ ಮುಡಿಗೇರಿಸಿಕೊಂಡರು.
ನಗರಸಭಾ ಮೈದಾನದಲ್ಲಿ ಇ-ಚಾನಲ್ ಸಹಯೋಗದಲ್ಲಿ ನಡೆದ ದೇಹದಾಡ್ಯ ಸ್ಪರ್ಧೆಯಲ್ಲಿ ಒಟ್ಟು 30 ಮಂದಿ ಸ್ಪರ್ಧಾಳುಗಳು ಭಾಗವಹಿಸಿ ಆಕರ್ಷಕ ಸ್ಪರ್ಧೆಯು ನಾಲ್ಕು ತಂಡಗಳಲ್ಲಿ ನಡೆದು ಅಂತಿಮ ಸ್ನೇಹಜೀವಿ ಕ್ಲಾಸಿಕ್-2018 ಸ್ಪರ್ಧೆಗೆ ನಾಲ್ಕುಮಂದಿ ಆಯ್ಕೆ ಮಾಡಲಾಯಿತು.
ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ನೀಡಿದ ಸೈಯದ್ ಇಕ್ಬಾಲ್ ಪ್ರೇಕ್ಷಕರ ಬೆಂಬಲದೊಂದಿಗೆ ಸ್ನೇಹಜೀವಿ ಕ್ಲಾಸಿಕ್-2018ಗೆ ಆಯ್ಕೆಯಾಗಿ 25 ಸಾವಿರ ರೂ.ನಗದು ಹಾಗೂ ಟ್ರೋಫಿಗಳಿಸಿದರೆ, ಬೆಂಗಳೂರಿನ ಫೋಕಸ್ ಫಿಟ್‌ನೆಸ್ ಜಿಮ್‌ನ ಎಂ.ಶಿವಕುಮಾರ್ ಬೆಸ್ಟ್ ಫೋಸರ್ ಹಾಗೂ ಬೆಂಗಳೂರಿನ ಫಿಟ್ ನೆಸ್ ಅಡ್ಡಾ ಜಿಮ್‌ನ ಹೇಮಂತ ಕುಮಾರ್ ಬೆಸ್ಟ್ ಮಸ್ಕೂಲರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡು ತಲಾ 10 ಸಾವಿರ ರೂ.ನಗದು ಬಹುಮಾನ ಹಾಗೂ ಟ್ರೋಫಿಗಳಿಸಿಕೊಂಡರು.
ಕಕ್ಕಿರಿದ ಸಾವಿರಾರು ಮಂದಿ:ವಿಜೇತರಿಗೆ ಇ-ಚಾನಲ್‌ನ ಮುಖ್ಯಸ್ಥ ಎಚ್.ಪಿ.ಅಮರ್‌ನಾಥ್, ರಕ್ಷಾ ಸಮಿತಿ ಸದಸ್ಯ ರವಿಸಾಲಿಯಾನ, ಕಸಾಪ ಅಧ್ಯಕ್ಷ ನವೀನ್ ರೈ, ಅಕ್ರಮ ಸಕ್ರಮ ಸಮಿತಿ ಸದಸ್ಯ ಚಿಕ್ಕಸ್ವಾಮಿ ಹಾಗೂ ನಗದು ಬಹುಮಾನ ಹಾಗೂ ಟ್ರೋಫಿ ವಿತರಿಸಿದರು. ನ್ಯೂ ವಿಕ್ರಂ ಜಿಮ್‌ನ ಮಣಿ ಹಾಜರಿದ್ದರು. ದೇಹದಾಡ್ಯ ಸ್ಪರ್ಧೆ ವೀಕ್ಷಿಸಲು 3 ಸಾವಿರಕ್ಕೂ ಹೆಚ್ಚು ಮಂದಿ ಕಿಕ್ಕಿರಿದು ನೆರೆದಿದ್ದರು.
ಆಕರ್ಷಿಸಿದ ಏಷ್ಯಾಡ್ ಬಾಲಕೃಷ್ಣ: ದೇಹದಾಡ್ಯ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಏಷ್ಯಾಡ್ ದೇಹದಾಡ್ಯ ಸ್ಪರ್ಧಾ ವಿಜೇತ ಬಾಲಕೃಷ್ಣ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿ, ನಿತ್ಯ ದೇಹ ದಂಡನೆಯಿಂದ ಮಾತ್ರ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಇಂತಹ ಸ್ಪರ್ಧೆಗಳಲ್ಲಿ ಜಯಗಳಿಸಲು ಸಾಧ್ಯವೆಂದರು.
ನೆರೆದಿದ್ದ ಅಭಿಮಾನಿಗಳು ಬಾಲಕೃಷ್ಣರ ಎಕ್ಸ್ ಫೋಸ್ ಹಾತೊರೆದಾಗ ಕೆಲ ಕಾಲದ ನಂತರ ವೇದಿಕೆಗಾಗಮಿಸಿ ದೇಹವನ್ನು ಎಕ್ಸ್ ಪೋಸ್ ಮಾಡಿದಾಗಲಂತೂ ನೆರೆದಿದ್ದವರು ಮನಸೋತು ಅಭಿನಂದಿಸಿದರು.