Advertisement

ಸಿಡ್ನಿ ಯುಎನ್‌ಎಸ್‌ಡಬ್ಲ್ಯು-ಮಾಹೆ ಅನುದಾನ ಘೋಷಣೆ

12:59 AM Dec 15, 2019 | mahesh |

ಉಡುಪಿ: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷೆಯನ್ನು ಸುಧಾರಿಸಲು ಮತ್ತು ಉಡುಪು ಕೈಗಾರಿಕೆಯ ಅವಕಾಶ ಬಳಸಿಕೊಳ್ಳುವ ಮೊದಲ ಪ್ರಾಜೆಕ್ಟ್ಗೆ ಸಿಡ್ನಿಯ ಯುಎನ್‌ಎಸ್‌ಡಬ್ಲ್ಯು- ಮಣಿಪಾಲ ಮಾಹೆ ಸಹಭಾಗಿತ್ವದ ಸಂಶೋಧನೆಗೆ ಬೀಜ ಧನ ಕಾರ್ಯಕ್ರಮವಾಗಿ ಅನುದಾನ ಮಂಜೂರಾಗಿದೆ.

Advertisement

ಶನಿವಾರ ಮಣಿಪಾಲದಲ್ಲಿ ಯುಎನ್‌ಎಸ್‌ಡಬ್ಲ್ಯು ಅಧ್ಯಕ್ಷ ಮತ್ತು ಕುಲಪತಿ ಪ್ರೊ| ಐಯಾನ್‌ ಜಾಕೋಬ್ಸ್ ಮತ್ತು ಮಾಹೆ ಕುಲಪತಿ ಡಾ| ಎಚ್‌. ವಿನೋದ ಭಟ್‌ ಅವರು 10 ಜಂಟಿ ಅನುದಾನ ಕಾರ್ಯಕ್ರಮಗಳನ್ನು ಘೋಷಿಸಿದರು. ನಮ್ಮೆರಡು ಪಾಲುದಾರಿಕೆ ಬಗ್ಗೆ ಸಂತಸವಾಗುತ್ತಿದೆ. ನಮ್ಮೆರಡೂ ವಿ.ವಿ.ಗಳಲ್ಲಿ ಈ ಹೊಸ ಅನುದಾನ ಶೈಕ್ಷಣಿಕವಾಗಿ ಅನುಕೂಲವಾಗಲಿದೆ. ಸಂಕೀರ್ಣ ಮತ್ತು ಜಾಗತಿಕ ಸಂಶೋಧನ ಸವಾಲುಗಳನ್ನು ಬಗೆ ಹರಿಸಲು ಬುದ್ಧಿವಂತರನ್ನು ಸಮೀಪಕ್ಕೆ ತರಲಾಗುತ್ತಿದೆ ಎಂದು ಜಾಕೋಬ್ಸ್ ಹೇಳಿದರು.

ಎರಡು ಪ್ರಮುಖ ಸಂಸ್ಥೆಗಳು ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕರ ಜೀವಗಳು, ಸಂಶೋಧನೆ ಮತ್ತು ಶಿಕ್ಷಣದಲ್ಲಿ ಬದಲಾವಣೆಗಳನ್ನು ತಂದು ಉತ್ತಮ ಭವಿಷ್ಯವನ್ನು, ಭಾರತ ಮತ್ತು ಆಸ್ಟ್ರೇಲಿಯ ಸಂಬಂಧಗಳನ್ನು ಎತ್ತರಕ್ಕೆ ಏರಿಸಲಿವೆ ಎಂದು ಡಾ| ವಿನೋದ ಭಟ್‌ ತಿಳಿಸಿದರು.

ಕಾರ್ಯಕ್ರಮಗಳ ರೂಪರೇಖೆ, ಮಾರ್ಗ, ಜ್ಞಾನ ವಿನಿಮಯಗಳ ಸುಧಾರಣೆ ಅವಕಾಶ, ಸಂದರ್ಶಕ ಫೆಲೋ, ವಿದ್ಯಾರ್ಥಿ ಮತ್ತು ಸಿಬಂದಿಗಾಗಿ ಸಿಬಂದಿ ಮಾರ್ಗದರ್ಶನ ಅಭಿವೃದ್ಧಿಗಳ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.

ಡಾ| ಭಟ್‌ ಅವರು 2018ರ ಡಿಸೆಂಬರ್‌ನಲ್ಲಿ ಯುಎನ್‌ಎಸ್‌ಡಬ್ಲ್ಯುಗೆ ಭೇಟಿ ನೀಡಿದ ಸಂದರ್ಭ ಈ ಮಹತ್ವದ ಪಾಲುದಾರಿಕೆಗೆ ಭೂಮಿಕೆ ಸಿದ್ಧವಾಗಿತ್ತು. ಇದಾದ ಬಳಿಕ ಯುಎನ್‌ಎಸ್‌ಡಬ್ಲ್ಯು ಸಹಕುಲಪತಿ, ಸಿಇಒ ಲಾರಿ ಪರ್ಸಿ, ಎಂಜಿನಿಯರಿಂಗ್‌ ಪ್ರಾಧ್ಯಾಪಕ ಡೀನ್‌ ಮಾರ್ಕ್‌ ಹೋಫ್ಮ್ಯಾನ್‌ ಇದೇ ಜುಲೈಯಲ್ಲಿ ಮಣಿಪಾಲಕ್ಕೆ ಆಗಮಿಸಿದ್ದರು. 2019ರಲ್ಲಿ ಯುಎನ್‌ಎಸ್‌ಡಬ್ಲ್ಯು ಉಪನ್ಯಾಸಕರ ಬಳಗ ಮಣಿಪಾಲಕ್ಕೆ ಎರಡು ಬಾರಿ ಆಗಮಿಸಿತ್ತು.

Advertisement

ತಲಾ 20,000  ಡಾಲರ್‌ ಮೊತ್ತದ ಹತ್ತು ಅನುದಾನಗಳನ್ನು ಕೊಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next