Advertisement
ಪಂದ್ಯದ ನಾಲ್ಕನೇ ದಿನದಾಟದಲ್ಲಿ ಪ್ಯಾಟ್ ಕಮಿನ್ಸ್ ಮತ್ತು ಜೋಶ್ ಹ್ಯಾಝಲ್‌ವುಡ್ ಬಿಗು ದಾಳಿ ಸಂಘಟಿಸಿದ್ದರಿಂದ ದಕ್ಷಿಣ ಆಫ್ರಿಕಾ ಕೇವಲ 149 ರನ್ನಿಗೆ 6 ವಿಕೆಟ್ ಕಳೆದುಕೊಂಡಿದೆ.
Related Articles
Advertisement
ನಾಲ್ಕನೇ ದಿನವೂ ಮಳೆ ತೊಂದರೆ ನೀಡಿದ ಬಳಿಕ ಕಮಿನ್ಸ್ ಮತ್ತು ಹ್ಯಾಝಲ್‌ವುಡ್ ಬಿಗು ದಾಳಿ ಸಂಘಟಿಸಿದ್ದರಿಂದ ದಕ್ಷಿಣ ಆಫ್ರಿಕಾ ರನ್ ಗಳಿಸಲು ಒದ್ದಾಡಿತು. ತೆಂಬಾ ಬವುಮ ಮತ್ತು ಖಾಯ ಝಾಂಡೊ ಮಾತ್ರ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದರು. ಕಮಿನ್ಸ್ 29 ರನ್ನಿಗೆ 3 ವಿಕೆಟ್ ಕಿತ್ತರೆ ಹ್ಯಾಝಲ್‌ವುಡ್ 29 ರನ್ನಿಗೆ 2 ವಿಕೆಟ್ ಉರುಳಿಸಿದರು.
ಖ್ವಾಜಾ ಅಜೇಯ 195ಈ ಮೊದಲು ಆಸ್ಟ್ರೇಲಿಯ ನಾಯಕ ಕಮಿನ್ಸ್ ಅವರು ಆಸ್ಟ್ರೇಲಿಯದ ಮೊತ್ತ 4 ವಿಕೆಟಿಗೆ 475 ರನ್ ಇದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದರು. ಇದರಿಂದ 195 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಉಸ್ಮಾನ್ ಖ್ವಾಜಾ ಅವರು ದ್ವಿಶತಕ ಪೂರ್ತಿಗೊಳಿಸುವ ಅವಕಾಶ ಕಳೆದುಕೊಂಡರು. ಇದು ಆಟಗಾರನೋರ್ವ 190 ಪ್ಲಸ್ ರನ್ ಗಳಿಸಿದ ವೇಳೆ ತಂಡದ ನಾಯಕರು ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ಮೂರನೇ ನಿದರ್ಶನವಾಗಿದೆ. ಈ ಮೊದಲು ಫ್ರ್ಯಾಂಕ್ ವೊರೆಲ್ ಮತ್ತು ಸಚಿನ್ ತೆಂಡುಲ್ಕರ್ 190 ಪ್ಲಸ್ ರನ್ ಗಳಿಸಿದ್ದ ವೇಳೆ ತಂಡದ ನಾಯಕರು ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದರು.