Advertisement
ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಈ ಹಿಂದಿನ ಬಿಬಿಎಂಪಿ ನಿರ್ಣಯದಂತೆ ಕುಡಿಯುವ ನೀರು ಹಾಗೂ ಒಳಚರಂಡಿ ಸಂಪರ್ಕ ಬಯಸುವವರಿಗೆ ಒಸಿ ಕೇಳುತ್ತಿದೇವೆ. ಒದಗಿಸದವರಿಗೆ ಮಾಸಿಕ ಶುಲ್ಕದ ಶೇ.50 ರಷ್ಟು ದಂಡ ಹಾಕುತ್ತಿದ್ದೇವೆ. 2400 ಚದರಡಿ ವ್ಯಾಪ್ತಿಯ ನಿವೇಶನದಲ್ಲಿ ನಿರ್ಮಾಣವಾಗುವ ಎಲ್ಲಾ ಮನೆಗಳಿಗೂ ವಿನಾಯ್ತಿ ನೀಡುವ ಸಂಬಂಧ ಬಿಬಿಎಂಪಿ ತಿದ್ದುಪಡಿ ಮಾಡಿದರೆ ಅದನ್ನು ಕೂಡಲೇ ಜಾರಿಗೆ ತರುತ್ತೇವೆ ಎಂದರು.
Related Articles
Advertisement
ತ್ಯಾಜ್ಯ ನೀರಿನ ಸಮಸ್ಯೆಗೆ ಪರಿಹಾರ: ನಗರಕ್ಕೆ ಕಾವೇರಿಯಿಂದ 1,400 ಎಂಎಲ್‌ಡಿ ಕಾವೇರಿ ನೀರು, 400 ಎಂಎಲ್‌ಡಿ ಕೊಳವೆ ಬಾವಿ ನೀರು ನಗರದಲ್ಲಿ ಪ್ರತಿದಿನ ಪೂರೈಕೆ ಆಗುತ್ತಿದೆ. ಇದರಿಂದ ನಿತ್ಯ 1,440 ಎಂಎಲ್‌ಡಿ ತ್ಯಾಜ್ಯ ನೀರು ಉತ್ಪತ್ತಿಯಾಗುತ್ತಿದೆ. ಇದಕ್ಕೆ ಸಮನಾಗಿ ತ್ಯಾಜ್ಯ ನೀರಿನ ಕೊಳವೆಗಳು, ತ್ಯಾಜ್ಯ ಸಂಸ್ಕರಣಾ ಘಟಕಗಳು ನಮ್ಮಲ್ಲಿ ಇಲ್ಲ.
2017ರ ವರೆಗೆ ಕೇವಲ 721 ಎಂಎಲ್‌ಡಿ (ಶೇ.50ರಷ್ಟು) ತ್ಯಾಜ್ಯ ನೀರು ಸಂಸ್ಕರಣಾ ಸಾಮರ್ಥ್ಯದ ಘಟಕಗಳನ್ನು ತೆರೆಯಲಾಗಿದೆ. ಹೀಗಾಗಿಯೇ ರಾಜಕಾಲುವೆ ಹಾಗೂ ಕೆರೆಗಳಿಗೆ ತ್ಯಾಜ್ಯ ನೀರು ನೇರವಾಗಿ ಹರಿಯುತ್ತಿದೆ ಎಂದರು. ಈ ಕುರಿತು ಪರಿಹಾರವಾಗಿ ಜೈಕಾ ವತಿಯಿಂದ ಅನುದಾನ ಪಡೆದು 336 ಎಂಎಲ್‌ಡಿ ತ್ಯಾಜ್ಯ ನೀರು ಸಂಸ್ಕರಣೆ ಮಾಡುವ 10 ಎಸ್‌ಟಿಪಿ, ಹೆಬ್ಟಾಳ, ವೃಷಭಾವತಿ ವ್ಯಾಲಿ, ದೊಡ್ಡಬೆಲೆ, ಕೆಎನ್‌ಸಿ ವ್ಯಾಲಿಯಲ್ಲಿ 440 ಎಂಎಲ್‌ಡಿ ಸಾಮರ್ಥ್ಯದ ಎಸ್‌ಟಿಪಿ ಘಟಕ ಸ್ಥಾಪನೆಗೆ ಕ್ರಮಕೈಗೊಳ್ಳಲಾಗಿದೆ.
ಜತೆಗೆ ಅಮೃತ್ ಯೋಜನೆ ಅಡಿಯಲ್ಲಿ 75 ಎಂಎಲ್‌ಡಿ ಎಸ್‌ಟಿಪಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಕಾಮಗಾರಿಗಳು ಮುಗಿದರೆ 2020ರ ವೇಳೆಗೆ 1,575 ಎಂಎಲ್‌ಡಿ ತ್ಯಾಜ್ಯ ನೀರು ಸಂಸ್ಕರಣೆ ಮಾಡಲಾಗುವುದು. ಮುಂದೆ 110 ಹಳ್ಳಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರಿಗೆ ಕೆರೆ ಸುತ್ತ ಎಸ್‌ಟಿಪಿ ನಿರ್ಮಾಣಕ್ಕೆ ಕ್ರಮಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಜಿಪಿಎಸ್ ವ್ಯವಸ್ಥೆ: ನಗರದಲ್ಲಿರುವ ಜಲಮಂಡಳಿಯ 2.40 ಲಕ್ಷ ಮ್ಯಾನ್, 110 ಜಟ್ಟಿಂಗ್ ಮಷಿನ್‌ಗಳಿವೆ. ಅವುಗಳಿಗೆ ನಂಬರಿಂಗ್ ಮಾಡಿ ಜನವರಿಯಿಂದ ಜಿಪಿಎಸ್ ಅಳವಡಿಕೆ ಮಾಡಲಾಗಿದೆ. ಜಟಿಂಗ್ ಯಂತ್ರಗಳ ಕೊರತೆ ಹಿನ್ನೆಲೆ 36 ಹೊಸ ಯಂತ್ರ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಒಳಚರಂಡಿ ಹೂಳು ತೆಗೆಯುವುದಕ್ಕೆ ಹೊರ ಗುತ್ತಿಗೆಯಲ್ಲಿ 4 ಬೃಹತ್ ತಂತ್ರ ಪಡೆಯಲಾಗುತ್ತಿದೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.
ಇವುಗಳ ಜತೆಗೆ ವಾರ್ಡ್‌ಗಳಲ್ಲಿ ತಿಂಗಳಲ್ಲಿ 1 ನೇ ಹಾಗೂ 3 ನೇ ಸೋಮವಾರ ಎಇಇ, ಎಇಗಳನ್ನು ಒಳಗೊಂಡು ಸಭೆ ನಡೆಸಲು ಸದ್ಯ ವೇಳಾಪಟ್ಟಿ ಸಿದ್ಧಪಡೆಸಿ ವೆಬ್‌ಸೈಟ್‌ನಲ್ಲಿ ಬಿಡುತ್ತೇವೆ. ಈ ಸಭೆಯಲ್ಲಿ ಬಿಬಿಎಂಪಿ ಸದಸ್ಯರು ತಮ್ಮ ವಾರ್ಡ್ ಸಮಸ್ಯೆ ಹೇಳಿಕೊಳ್ಳಬಹುದು ಎಂದರು. ಬೇಸಿಗೆಯಲ್ಲಿ ನಗರದಲ್ಲಿ ನೀರಿನ ಬವಣೆ ಉಂಟಾಗುವುದಿಲ್ಲ, ಅಗತ್ಯ ಬಿದ್ದರೆ ಕಾವೇರಿ ಪಂಪಿಂಗ್‌ನಿಂದ ಇನ್ನು 10 ಎಂಎಲ್‌ಡಿ ನೀರನ್ನು ತರಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.