Advertisement

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು

12:25 AM Nov 26, 2024 | Team Udayavani |

ಮಣಿಪಾಲ: ಲಂಚ ಸ್ವೀಕಾರ ಆರೋಪದಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧಿತರಾಗಿದ್ದ ಉಡುಪಿ ಖಜಾನೆಯ ಪ್ರಭಾರ ನಿರ್ದೇಶಕ ರವಿಕುಮಾರ್‌ ಎಚ್‌. ಮತ್ತು ಎಫ್‌ಡಿಎ ರಾಘವೇಂದ್ರ ಎಂ.ಜಿ. ಅವರಿಗೆ ಜಾಮೀನು ಮಂಜೂರು ಮಾಡಿ ಉಡುಪಿ ಜಿಲ್ಲಾ ಪ್ರಧಾನ ನ್ಯಾಯಾಲಯದ ನ್ಯಾಯಾಧೀಶ ಕಿರಣ್‌ ಎಸ್‌. ಗಂಗಣ್ಣನವರ್‌ ಆದೇಶಿಸಿದ್ದಾರೆ. ಆರೋಪಿತರನ್ನು ಲೋಕಾಯುಕ್ತ ಪೊಲೀಸರು ನ. 16ರಂದು ಬಂಧಿಸಿದ್ದರು. ಆರೋಪಿ ಪರ ಕುಂದಾಪುರದ ಪಿ. ಜಯಚಂದ್ರ ಶೆಟ್ಟಿ, ಉಡುಪಿಯ ಕ್ಲಿಂಟನ್‌ ಡಿಸಿಲ್ವಾ, ನಂದನ್‌ ಶೆಟ್ಟಿ ವಾದಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next