Advertisement

ಫೈನಲ್‌ನಲ್ಲಿ ಎಡವಿದ ಸಾಯಿ ಪ್ರಣೀತ್‌

12:30 AM Mar 18, 2019 | Team Udayavani |

ಬಾಸೆಲ್‌: ಭಾರತದ ಬಿ. ಸಾಯಿ ಪ್ರಣೀತ್‌ ಅವರಿಗೆ “ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌’ ಪುರುಷರ ಸಿಂಗಲ್ಸ್‌ ಪ್ರಶಸ್ತಿ ಮರೀಚಿಕೆಯೇ ಆಗುಳಿದಿದೆ. ರವಿವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಅವರು ಚೀನದ ವಿಶ್ವ ನಂ.2 ಆಟಗಾರ ಶಿ ಯುಖೀ ವಿರುದ್ಧ 21-19, 18-21, 12-21 ಅಂತರದಿಂದ ಪರಾಭವಗೊಂಡರು.

Advertisement

2 ವರ್ಷಗಳ ಬಳಿಕ ಮೊದಲ ಸಲ ವಿಶ್ವ ಮಟ್ಟದ ಬ್ಯಾಡ್ಮಿಂಟನ್‌ ಫೈನಲ್‌ನಲ್ಲಿ ಸೆಣಸಲು ಇಳಿದಿದ್ದ ವಿಶ್ವದ ನಂ. 22 ಆಟಗಾರ ಸಾಯಿ ಪ್ರಣೀತ್‌ ಮೊದಲ ಗೇಮ್‌ ವಶಪಡಿಸಿಕೊಂಡರೂ ಬಳಿಕ ಹಿನ್ನಡೆ ಕಾಣುತ್ತ ಹೋದರು. ನಿರ್ಣಾಯಕ ಗೇಮ್‌ನಲ್ಲಿ ಚೀನಿ ಆಟಗಾರನಿಗೆ ಸವಾಲೆಸೆಯುವಲ್ಲಿ ಸಂಪೂರ್ಣ ವಿಫ‌ಲರಾದರು.

ಸಾಯಿ ಪ್ರಣೀತ್‌ 2017ರಲ್ಲಿ ಥಾಯ್ಲೆಂಡ್‌ ಓಪನ್‌ ಕೂಟದ ಫೈನಲ್‌ ಪ್ರವೇಶಿಸಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಅನಂತರ ಅವರು ಪ್ರಶಸ್ತಿ ಸುತ್ತಿಗೇರಿದ್ದು ಇದೇ ಮೊದಲು.

Advertisement

Udayavani is now on Telegram. Click here to join our channel and stay updated with the latest news.

Next