Advertisement

ʼರಾಮಾಯಣʼ ಸೆಟ್‌ ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

02:46 PM Apr 27, 2024 | Team Udayavani |

ಮುಂಬಯಿ: ಪ್ಯಾನ್‌ ಇಂಡಿಯಾ, ಬಿಗ್‌ ಬಜೆಟ್‌ ʼರಾಮಾಯಣʼ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಬಹು ನಿರೀಕ್ಷಿತ ಸಿನಿಮಾ ಸಟ್ಟೇರಿದ ದಿನವೇ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿದೆ.

Advertisement

ರಣ್ಬೀರ್‌ ಕಪೂರ್‌ ʼರಾಮʼನ ಅವತಾರದಲ್ಲಿ ಸಾಯಿಪಲ್ಲವಿ ʼಸೀತೆʼಯಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಗೊತ್ತೇ ಇದೆ. ಇದರೊಂದಿಗೆ ದೊಡ್ಡ ಕಲಾವಿದರ ದಂಡೇ ಸಿನಿಮಾದಲ್ಲಿ ಇರಲಿದ್ದಾರೆ ಎನ್ನಲಾಗುತ್ತಿದೆ. ʼರಾಮಾಯಣʼ ಸಿನಿಮಾದ ಚಿತ್ರೀಕರಣ ಆರಂಭಗೊಂಡಿದೆ.

ಸಿನಿಮಾಕ್ಕಾಗಿ ರಣ್ಬೀರ್‌ ಹಾಗೂ ಸಾಯಿಪಲ್ಲವಿ ಸಾಕಷ್ಟು ಪರಿಶ್ರಮವಹಿಸಿದ್ದು, ಅವರ ಪಾತ್ರದ ಲುಕ್‌ ಚಿತ್ರೀಕರಣದ ಸೆಟ್‌ ನಿಂದ ಲೀಕ್‌ ಆಗಿರುವುದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ʼರಾಮʼ ಹಾಗೂ ʼಸೀತೆʼಯಾಗಿ ಸಾಂಪ್ರದಾಯಿಕ ಉಡುಗೆಯಲ್ಲಿರುವ ಫೋಟೋವನ್ನು  ʼಝೂಮ್‌ ಟಿವಿʼ ಹಂಚಿಕೊಂಡಿದೆ. ರಣಬೀರ್ ಮತ್ತು ಸಾಯಿಪಲ್ಲವಿ ಪಾತ್ರಗಳು ವನವಾಸ ಪೂರ್ವದ ಸೀಕ್ವೆನ್ಸ್‌ಗಳ ಚಿತ್ರೀಕರಣದಲ್ಲಿದ್ದಾರೆ ಎನ್ನುವುದು ಫೋಟೋಗಳಿಂದ ಗೊತ್ತಾಗುತ್ತದೆ.

ನಿತೇಶ್ ತಿವಾರಿ ಅವರ ʼರಾಮಾಯಣʼದ ಫೋಟೋಗಳು ಸೆಟ್‌ ನಿಂದ ಲೀಕ್‌ ಆಗಿರುವುದು ಇದೇ ಮೊದಲಲ್ಲ. ಫೋಟೋಗಳು ಈ ರೀತಿ ಲೀಕ್‌ ಆಗಿರುವುದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ರಾವಣನ ಪಾತ್ರ ಮಾಡುತ್ತಾರೆ ಎನ್ನುವ ಚರ್ಚೆಯ ನಡುವೆ ಯಶ್‌ ʼರಾಮಾಯಣʼಕ್ಕೆ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ʼಹನುಮಾನ್ʼ ಪಾತ್ರಕ್ಕಾಗಿ ಸನ್ನಿ ಡಿಯೋಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಬಾಬಿ ಡಿಯೋಲ್ ಮತ್ತು ವಿಜಯ್ ಸೇತುಪತಿ ಅವರೊಂದಿಗೆ ಕುಂಭಕರ್ಣ ಮತ್ತು ವಿಭಾಷಣ ಪಾತ್ರಕ್ಕಾಗಿ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಆದರೆ ಅದು ಅಧಿಕೃತವಾಗಿಲ್ಲ.

ಎರಡು ಪಾರ್ಟ್‌ ಗಳಲ್ಲಿ ಸಿನಿಮಾಗಳಲ್ಲಿʼರಾಮಾಯಣʼ ತೆರೆಗೆ ಬರಲಿದೆ. ಮೊದಲ ಭಾಗ 2025 ರ ದೀಪಾವಳಿ ಹಬ್ಬಕ್ಕೆ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next