Advertisement

Swimwear ಫ್ಯಾಶನ್‌ ಶೋ: ಮೊದಲ ಬಾರಿಗೆ ಸೌದಿಯಿಂದ ಅನುಮತಿ!

01:37 AM May 19, 2024 | Team Udayavani |

ಅಬುಧಾಬಿ: ಇದೇ ಮೊಟ್ಟ ಮೊದಲ ಬಾರಿಗೆ ಸೌದಿ ಅರೇಬಿಯಾದಲ್ಲಿ ಸ್ವಿಮ್ಮಿಂಗ್‌ವೇರ್‌ ಫ್ಯಾಶನ್‌ ಶೋ ನಡೆದಿದ್ದು, ರೂಪದರ್ಶಿಗಳು ವಿವಿಧ ಪ್ರಕಾರದ ಸ್ವಿಮ್‌ಸೂಟ್‌ಗಳನ್ನು ಧರಿಸಿ ಪೂಲ್‌ ಪಕ್ಕದಲ್ಲಿ ನಡೆದಿದ್ದಾರೆ. ಇಸ್ಲಾಮಿಕ್‌ ರಾಷ್ಟ್ರವಾದ ಸೌದಿ ಯಲ್ಲಿ ಇಂಥ ಫ್ಯಾಶನ್‌ ಶೋಗೆ ಅನುಮತಿಸಿರುವುದು ಇದೇ ಮೊದಲು.

Advertisement

ಸೌದಿಯ ಪಶ್ಚಿಮ ಕರಾವಳಿಯಲ್ಲಿರುವ ಸೆಂಟ್‌ ರೇಗಿಸ್‌ ರೆಡ್‌ ಸೀ ರೆಸಾರ್ಟ್‌ನಲ್ಲಿ ರೆಡ್‌ ಸೀ ಫ್ಯಾಶನ್‌ ವೀಕ್‌ನ 2‌ನೇ ದಿನದಂದು ಸ್ವಿಮ್‌ವೇರ್‌ ಫ್ಯಾಶನ್‌ ಶೋ ನಡೆದಿದೆ. ಮೊರಾಕೋದ ಖ್ಯಾತ ವಸ್ತ್ರ ವಿನ್ಯಾಸಕಿ ಯಾಸ್ಮಿನ್‌ ಕನಾjಲ್‌ ಅವರ ವಿವಿಧ ಸ್ವಿಮ್‌ವೇರ್‌ ಸಂಗ್ರಹಗಳನ್ನು ರೂಪದರ್ಶಿಗಳು ಪ್ರದರ್ಶಿಸಿದ್ದಾರೆ. ಸೌದಿ-2030 ಸಾಮಾಜಿಕ ಮತ್ತು ಆರ್ಥಿಕ ಸುಧಾ ರಣೆೆಯ ಭಾಗವಾಗಿರುವ ರೆಡ್‌ ಸೀ ರೆಸಾರ್ಟ್‌ನಲ್ಲೇ ಈ ಫ್ಯಾಶನ್‌ ಶೋ ಆಯೋಜಿಸಿರುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next