ಕುಂಬಳೆ: ಈಜುವುದು ಒಂದು ಕಲೆ, ಮಕ್ಕಳಿಗೆ ಈಜುವ ಕಲೆಯಲ್ಲಿ ವಿಶೇಷ ಆಸಕ್ತಿ ಇರುತ್ತದೆ. ಜೀವನಕ್ಕೆ ಸ್ಫೂರ್ತಿ ನೀಡಿ ಉತ್ತಮ ಆರೋಗ್ಯಕರ ಜೀವನ ಶೆ„ಲಿ ಅಳವಡಿಸಲು ಈಜು ಸಹಕಾರಿ ಎಂಬುದಾಗಿ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆ ಅಳಿಕೆಯ ಅಧ್ಯಕ್ಷ ಉಳುವಾನ ಗಂಗಾಧರ ಭಟ್‌ಹೇಳಿದರು.
ಬಾಯಾರು ಪ್ರಶಾಂತಿ ವಿದ್ಯಾಕೇಂದ್ರ ದಲ್ಲಿ ನೂತನವಾಗಿ ನಿರ್ಮಿಸಿದ ಈಜು ಕೊಳವನ್ನು ಉದ್ಘಾಟಿಸಿದ ಬಳಿಕ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಗ್ರಾಮೀಣ ಪ್ರದೇಶದ ಪ್ರಶಾಂತಿ ವಿದ್ಯಾಕೇಂದ್ರವು ವಿದ್ಯಾದಾನದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಿದೆ. ಸಂಸ್ಥೆಗೆ ಉಜ್ವಲ ಭವಿಷ್ಯವಿದ್ದು, ಮಾದರಿ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ಪ್ರಜ್ವಲಿಸಲಿ ಎಂದು ಶುಭ ಹಾರೈಸಿ ಸಂಸ್ಥೆಯ ವಿದ್ಯಾರ್ಥಿಗಳು ಬುದ್ಧಿವಂತ, ಘನತೆವೆತ್ತ ಹಾಗೂ ಶ್ರೀಮಂತರಾಗಿ ದೇಶಕ್ಕೆ ಮಾದರಿಯಾಗಲಿ ಎಂದರು.
ವಿದ್ಯಾಕೇಂದ್ರದ ಈಜುಕೊಳ ನಿರ್ಮಾ ಣಕ್ಕೆ ಸೂಕ್ತ ಮಾರ್ಗದರ್ಶನ ನೀಡಿ ಪೊÅàತ್ಸಾಹಿಸಿದ ಬೆಂಗಳೂರು ನರೇಶ್ ಸ್ವಿಮ್ಮಿಂಗ್ ಅಕಾಡೆಮಿಯ ಪ್ರಧಾನ ತರಬೇತುದಾರ ಹಾಗೂ ತರುಣ್ ಅಸೋಸಿ ಯೇಟ್ಸ್ ನಿರ್ದೇಶಕ ಎಚ್.ಸಿ. ನರೇಶ್ ಅವರನ್ನು ಸಮಾರಂಭದಲ್ಲಿ ಶಾಲು ಹೊಸಡಸಿ ಸ್ಮರಣಿಕೆ ನೀಡಿ ಗೌರವಿಸ ಲಾಯಿತು.
ಸಮ್ಮಾನಕ್ಕೆ ಪ್ರತ್ಯುತ್ತರವಾಗಿ ಮಾತನಾಡಿದ ನರೇಶ್ ಈಜು ಎಂಬುದು ಎಲ್ಲ ದೆ„ಹಿಕ ವ್ಯಾಯಾಮಗಳ ತಾಯಿ, ಈಜಿನಿಂದ ಶಾರೀರಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಈಜು ಮೇಲೋ ಯೋಗ ಮೇಲೋ ಎನ್ನುವ ಪ್ರಶ್ನೆ ಇದೇ ಕಾರಣಕ್ಕೆ ಉದ್ಭವವಾಗಿದೆ ಎಂದರು. ಪ್ರಶಾಂತಿ ವಿದ್ಯಾಕೇಂದ್ರವು ಮುಂದಿನ ದಿನಗಳಲ್ಲಿ ಉತ್ತಮ ಈಜು ಪಟುಗಳನ್ನು ಬೆಳೆಸಲಿ ಹಾಗೂ ರಾಷ್ಟ್ರಕ್ಕೆ ಕೀರ್ತಿ ತರಲಿ ಎಂದು ಹಾರೈಸಿದರು. ತರುಣ್ ಅಸೋಸಿಯೇಟ್ಸ್ ವತಿಯಿಂದ ವಿದ್ಯಾಕೇಂದ್ರಕ್ಕೆ ಈಜು ತರಬೇತಿ ಪರಿಕರಗಳನ್ನು ವಿದ್ಯಾ ಕೇಂದ್ರದ ಉಪಾಧ್ಯಕ್ಷ ಪೆಲತ್ತಡ್ಕ ರಾಮಕೃಷ್ಣ ಭಟ್ ಅವರ ಮೂಲಕ ಹಸ್ತಾಂತರಿಸಲಾಯಿತು. ಉದ್ಘಾಟನೆಯ ಪೂರ್ವಭಾವಿಯಾಗಿ ವೇ|ಮೂ| ವಿ.ಬಿ ಹಿರಣ್ಯಅವರಿಂದ ಗಂಗಾಪೂಜೆ ಕಾರ್ಯಕ್ರಮ, ಮಂತ್ರಘೋಷ ಹಾಗೂ ಸಾಯಿ ಸ್ಮರಣೆ ನೆರವೇರಿತು. ಗಂಗಾ ಸಂಕಲ್ಪ ತೀರ್ಥವನ್ನು ಗಂಗಾಧರ ಭಟ್ ಅವರು ಈಜುಕೊಳಕ್ಕೆ ಸಮರ್ಪಿಸಿದರು. ಅನಂತರ ನರೇಶ್‌ಅಕಾಡೆಮಿ ಹಾಗೂ ಪ್ರಶಾಂತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ವಿವಿಧ ಶೆ„ಲಿಯ ಈಜನ್ನು ಪ್ರದರ್ಶಿಸಿದರು. ಸಮಾರಂಭದಲ್ಲಿ ದ.ಕ. ದೆ„ಹಿಕ ಶಿಕ್ಷಣ ಪರಿವೀಕ್ಷಕ ಗುರುನಾಥ್ ಬಾಗೇವಾಡಿ, ಪೆರ್ವಡಿ ಸದಾನಂದ ಆಳ್ವ, ನಾರಾಯಣರಾವ್, ಕೆ.ಎಸ್ ಕೃಷ್ಣ ಭಟ್, ಬಿ. ಜಯರಾಮ ಭಟ್, ನ್ಯಾಯವಾದಿ ಎಂ. ರಾಮಚಂದ್ರ ಭಟ್, ಗಣಪತಿ ಭಟ್ ಪದ್ಯಾಣ, ಸದಾಶಿವ ಭಟ್, ಅಂತಾರಾಷ್ಟ್ರೀಯ ಕಬಡ್ಡಿ ಪಟು ಉದಯಚಂದ್ರ, ಶಿವಕುಮಾರ್, ಪ್ರಾಂಶುಪಾಲ ಅನೂಪ್ ಮೊದಲಾದವರಿದ್ದರು. ಪ್ರಶಾಂತಿ ವಿದ್ಯಾಕೇಂದ್ರದ ವಿಶ್ವಸ್ತ ಎಚ್.ಮಹಾಲಿಂಗ ಭಟ್ ಸ್ವಾಗತಿಸಿದರು. ಮಾಣಿಪ್ಪಾಡಿ ನಾರಾಯಣ ಭಟ್ ವಂದಿಸಿದರು.