ಭಾರತದಲ್ಲಿ ಅಚರಿಸುವಷ್ಟು ಹಬ್ಬ ಹರಿದಿನಗಳು ಇತರ ಯಾವುದೇ ದೇಶದಲ್ಲಿಯೂ ಇಲ್ಲ. ವರ್ಷದ ಒಂದೆರಡು ತಿಂಗಳು ಬಿಟ್ಟರೆ ಉಳಿದ ಹತ್ತು ತಿಂಗಳು ಏನಾದರೊಂದು ಹಬ್ಬಗಳು ಇರುತ್ತವೆ. ಈ ಹಬ್ಬದ ಅವಧಿಯಲ್ಲಿ ನೆನಪಾಗುವುದು ಸಿಹಿ ಕುಂಬಳ. ಇದು ಮಳೆಗಾಲದ ಖಾದ್ಯವೂ ಹೌದು. ಬಡವರ ಪಾಲೀನ ಸಂಜೀವಿನಿಯೂ ಹೌದು.
ಇದನ್ನೂ ಓದಿ:ಹುಟ್ಟುಹಬ್ಬದ ದಿನವೇ ವಿಷ ಸೇವಿಸಿ ಯುವಕ ಆತ್ಮಹತ್ಯೆ: ಈ ಹಿಂದೆ ಎರಡು ಬಾರಿ ಪ್ರಯತ್ನ ಮಾಡಿದ್ದ!
ಸಿಹಿ ಕುಂಬಳಕಾಯಿ ಕ್ಯಕರ್ಬಿಟಾ ಮತ್ತು ಕ್ಯಕರ್ಬಿಟೀಸ್ ಜಾತಿಯ ಒಂದು ಗಡುಸಾದ ತರಕಾರಿ ಪ್ರಭೇದವಾಗಿದೆ. ಇವುಗಳು ವಿಶಿಷ್ಟವಾಗಿ ಕೇಸರಿ ಅಥವಾ ಹಳದಿ ಬಣ್ಣದಲ್ಲಿರುತ್ತವೆ ಮತ್ತು ಕಾಂಡದಿಂದ ಕೊನೆಯವರೆಗೂ ಹಲವಾರು ಸುಕ್ಕುಗಳನ್ನು ಹೊಂದಿರುತ್ತವೆ. ಕುಂಬಳಕಾಯಿಯು ಹೊರಭಾಗದಲ್ಲಿ ದಪ್ಪವಾದ ತೊಗಡೆಯನ್ನು ಹೊಂದಿದ್ದು, ಒಳಭಾಗದಲ್ಲಿ ಬೀಜ ಮತ್ತು ತಿರುಳನ್ನು ಹೊಂದಿದೆ. ಕುಂಬಳಕಾಯಿಯನ್ನು ಉತ್ತರ ಭಾರತದಲ್ಲಿ ಚಳಿಗಾಲದ ಹಣ್ಣು ಎಂದೇ ಖ್ಯಾತಿ ಪಡೆದಿದ್ದು, ಇದರ ಸಿಹಿ ಪಾನೀಯಕ್ಕೆ ಬಹಳ ಬೇಡಿಕೆ ಇದೆ.
ಲಾಭದಾಯಕ ಬೆಳೆ ಸಿಹಿ ಕುಂಬಳಕಾಯಿ ಲಾಭದಾಯಕ ಬೆಳೆಯೂ ಹೌದು. ಅನೇಕ ಜೀವಸತ್ವ, ಖನಿಜಾಂಶಗಳೊಂದಿಗೆ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ವಾಣಿಜ್ಯ ಬೆಳೆಯಾಗಿಯು ಇದನ್ನು ಬೆಳೆಯಲಾಗುತ್ತದೆ. ಸುಲಭ ಬೆಳೆ ಸಿಹಿ ಕುಂಬಳಕಾಯಿ ಹೆಚ್ಚು ಶ್ರಮವಿಲ್ಲದೆ ಸುಲಭವಾಗಿ ಕೈ ತೋಟದಲ್ಲಿ ಬೆಳೆಯಬಹುದಾದ ತರಕಾರಿ. ವಾತಾವರಣಕ್ಕೆ ಹೊಂದಿಕೊಂಡು ಕುಂಬಳಕಾಯಿ ಕೃಷಿ ಮಾಡಬಹುದು. ಮಣ್ಣಿನಲ್ಲಿ
4- 5 ಮಿ.ಮೀ. ಒಳಗೆ ಮಾತ್ರ ಬೀಜಗಳನ್ನು ಹಾಕಬೇಕು. ತುಂಬಾ ಆಳದಲ್ಲಿದ್ದರೆ ಬೇಗ ಮೊಳಕೆ ಒಡೆಯುವುದಿಲ್ಲ.
ಬೀಜ ಹಾಕಿದ ಬಳಿಕ ನೀರು ಹೆಚ್ಚು ಹಾಕಬಾರದು. ಚಿಗುರೊಡೆದ ಅನಂತರ ಕೆಲವು ದಿನಗಳ ಕಾಲ ಸ್ವಲ್ಪ ನೀರು ಸಿಂಪಡಿಸಬೇಕು. ಸಾವಯವ ಗೊಬ್ಬರ ಹಾಕಿ ಪೋಷಣೆ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು. ಸರಿಯಾಗಿ ನಿರ್ವಹಣೆ ಮಾಡಿದರೆ 3- 4 ತಿಂಗಳಲ್ಲಿ ಫಸಲು ತೆಗೆಯಬಹುದು. ಸಾಮಾನ್ಯವಾಗಿ ಇದು ಆರು ತಿಂಗಳ ಬೆಳೆ. ಬೆಚ್ಚಗೆ, ನೀರು ತಾಗದಂತೆ ಸುದೀರ್ಘ ಅವಧಿಯವರೆಗೆ ಇದನ್ನು ಶೇಖರಿಸಿ
ಇಡಬಹುದು.