Advertisement

BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..

11:02 PM Jan 08, 2025 | Team Udayavani |

ಬೆಂಗಳೂರು: ‘ಟಿಕೆಟ್ ಟು ಫಿನಾಲೆ’ ಆಟ ದೊಡ್ಮನೆಯಲ್ಲಿ ಕಾವು ಪಡೆದುಕೊಂಡಿದೆ. ತಂಡಗಳಾಗಿ ಹಾಗೂ ವೈಯಕ್ತಿಕವಾಗಿಯೂ ಸ್ಪರ್ಧಿಗಳು ಸ್ಪರ್ಧಿಗಳು ‌ಟಾಸ್ಕ್ ನಲ್ಲಿ ಪೈಪೋಟಿ ನೀಡಿದ್ದಾರೆ.

Advertisement

ಫಿನಾಲೆಗೆ ಕೆಲವೇ ದಿನಗಳು ಇರುವುದರಿಂದ ನಾಮಿನೇಟ್ ಆಗಿರುವ ಸ್ಪರ್ಧಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ.

ನಾನು ಯಾವತ್ತೂ ಕಿತ್ತಾಡಿಕೊಂಡು ಯಾವತ್ತೂ ಆಡಿಲ್ಲ. ನನ್ನ ಮೇಲೆ ನನಗೆ ಅಸಹ್ಯ ಆಗುತ್ತಿದೆ ಎಂದು ತಿವಿಕ್ರಮ್ ಭವ್ಯ ಅವರ ಬಳಿ ಹೇಳಿದ್ದಾರೆ.

ಏಕಾಗ್ರತೆ ಜತೆ ಭಾರವನ್ನು ಎತ್ತಿ ನಿಲ್ಲುವ ಟಾಸ್ಕ್:
ಭವ್ಯ, ತ್ರಿವಿಕ್ರಮ್, ಹನುಮಂತು, ಮೋಕ್ಷಿತಾ ಅವರಿಗೆ ‘ನಿಲುವಿನ ಗೆಲುವು’ ಎಂಬ ಟಾಸ್ಕ್ ನೀಡಲಾಗಿದೆ.

ಮರಳಿನ ತೂಕವನ್ನು ಎರಡು ಕೈಯಲ್ಲಿ ಹಿಡಿದು‌ ನಿಲ್ಲಬೇಕು. ಒಂದೊಂದು ಬೆಲ್ ಆದ ಬಳಿಕ ಒಂದೊಂದೇ ಚೀಲವನ್ನು ಒಮ್ಮತದ ನಿರ್ಧಾರದಂತೆ ಉಳಿದ ಸ್ಪರ್ಧಿಗಳು ಹಾಕಬೇಕು.

Advertisement

ಮೊದಲು ಭವ್ಯ ಅವರಿಗೆ ಒಂದು ಚೀಲ ಭಾರ ಹಾಕಿದ್ದು, ಎರಡನೇಯದಾಗಿ ಮೋಕ್ಷಿತಾ ಅವರತ್ತ ಒಂದು ಚೀಲದ ಭಾರವನ್ನು ಹಾಕಿದ್ದಾರೆ. ಮೂರು ಹಾಗೂ ನಾಲ್ಕನೆಯ ಬಾರಿಯೂ ಇತರೆ ಸ್ಪರ್ಧಿಗಳು ಭವ್ಯ ಅವರಿಗೆ ಚೀಲದ ಭಾರವನ್ನು ಹಾಕಿದ್ದಾರೆ. ಐದನೇ ಬಾರಿ ಮಂಜು ಅವರು‌ ಮತ್ತೆ ಭವ್ಯ ಅವರಿಗೆ ಮರಳಿನ ಭಾರವನ್ನು ಹಾಕಿದ್ದಾರೆ.

ಸ್ಪರ್ಧಿಗಳು ಟಾರ್ಗೆಟ್ ಮಾಡಿದಂತೆ ಭವ್ಯ ಅವರ ಮೇಲೆಯೇ ಭಾರದ ಚೀಲವನ್ನು ಹಾಕಿದ್ದಾರೆ.

ಭವ್ಯ ಅವರು ಸತತ ಪ್ರಯತ್ನದ ಮಾಡಿ, ಭಾರವನ್ನು ಸಹಿಸದೆ ಮೊದಲು ಟಾಸ್ಕ್ ನಿಂದ ಆಚೆ ಬಿದ್ದಿದ್ದಾರೆ.

ಭವ್ಯ ಅವರು ಬಳಿಕ ಇನ್ನೊಬ್ಬರು ಸ್ಪರ್ಧಿಯನ್ನು ಕೆಳಗಿಳಿಸಲು ಪ್ಲ್ಯಾನ್ ಮಾಡಿದ್ದಾರೆ. ಆದರೆ ಒಮ್ಮತ ಆಗದ ಕಾರಣ ಉಸ್ತುವಾರಿ ರಜತ್ ಅವರು ಹನುಮಂತು ಅವರ ಹೆಸರನ್ನು ಹೇಳಿದ್ದಾರೆ.

ಅದರಂತೆ ಎರಡನೇಯದಾಗಿ ಮೋಕ್ಷಿತಾ ಅವರು ಟಾಸ್ಕ್ ನಿಂದ ಹೊರಬಿದ್ದಿದ್ದಾರೆ. ಕೊನೆಯದಾಗಿ ಹನುಮಂತು ಹಾಗೂ ತ್ರಿವಿಕ್ರಮ್ ಉಳಿದಿದ್ದಾರೆ.

ಹನುಮಂತು ಅವರು ಕೊನೆಯದಾಗಿ ಟಾಸ್ಕ್ ‌ನಿಂದ ಆಚೆ ಬಿದ್ದಿದ್ದಾರೆ. ತ್ರಿವಿಕ್ರಮ್ ಟಾಸ್ಕ್ ಗೆದ್ದಿದ್ದಾರೆ. ಆ ಮೂಲಕ ತ್ರಿವಿಕ್ರಮ್ ‘ಟಿಕೆಟ್ ಟು ಫಿನಾಲೆ’ ಆಡಲು ಅರ್ಹತೆ ಪಡೆದಿದ್ದಾರೆ.

ಇದರೊಂದಿಗೆ ರಜತ್ ಕೂಡ ಫಿನಾಲೆ ಆಡಲು ಅರ್ಹತೆ ಪಡೆದಿದ್ದಾರೆ.

ಚೈತ್ರಾ ಅವರನ್ನು ಗುರಿಯಾಗಿಸಿದ ತಂಡ:
ತಂಡವಾಗಿ ಟಾಸ್ಕ್ ನಲ್ಲಿ ಸೋತ ಕಾರಣ, ಧನರಾಜ್, ಗೌತಮಿ, ಧನರಾಜ್ ಹಾಗೂ ಚೈತ್ರಾ ಅವರ ತಂಡದಲ್ಲಿ ಒಬ್ಬರನ್ನು ಟಿಕೆಟ್ ಟು ಫಿನಾಲೆ ಓಟದಿಂದ ಹೊರಗಿಡಬೇಕು. ಅದರಂತೆ ಮೂವರು ಚೈತ್ರಾ ಅವರ ಹೆಸರನ್ನು ಹೇಳಿದ್ದಾರೆ.

ಆದರೆ ಇದಕ್ಕೆ ಚೈತ್ರಾ ಅವರು ಒಮ್ಮತವಿಲ್ಲ. ಇದನ್ನು ನಾನು ಒಪ್ಪಿಲ್ಲವೆಂದು ಹೇಳಿದ್ದಾರೆ. ನನ್ನನ್ನು ಟಾರ್ಗೆಟ್ ಮಾಡುತ್ತಿದ್ದೀರಿ ಎಂದು ಚೈತ್ರಾ ವಾದಿಸಿದ್ದಾರೆ.

ಅವರು ಯಾವಾಗಲೂ ವಾದಾ ಮಾಡುತ್ತಲೇ ಇರುತ್ತಾರೆ. ಫಿಸಿಕಲ್ ಟಾಸ್ಕ್ ಅಗಲ್ಲ ಅಂಥ ಹೇಳಿದ್ದಾರೆ. ಬೇರೆ ಅವರಿಗೆ ಮಾತನಾಡಲು ಅವಕಾಶ ಕೊಡಲ್ಲ. ಬಿಗ್ ಬಾಸ್ ಮನೆಯ ನಿಯಮಗಳನ್ನು ಮುರಿದಿದ್ದಾರೆ ಎಂದು ಮಂಜು ಹೇಳಿದ್ದಾರೆ.

ತಪ್ಪನ್ನು ಸರಿ ಮಾಡಿಕೊಂಡು ಮುಂದೆ ಹೋಗುವ ಗುಣ ಅವರಲ್ಲಿ ಇಲ್ಲ. ಉಸ್ತುವಾರಿ ಆಗಿಯೂ ಅವರು ತಪ್ಪು ‌ಮಾಡಿದ್ದಾರೆ ಎಂದು ಧನರಾಜ್‌ ಹೇಳಿದ್ದಾರೆ.

ಎಲ್ಲರೂ ಒಂದು ಹೆಸರು ತೆಗೆದುಕೊಳ್ಳುತ್ತಾ ಇದ್ದಾರೆ ಅಂಥ ಹೇಳಿದ್ರೆ ಅವರ ಕಡೆಯಿಂದ ಮತ್ತೆ ಮತ್ತೆ ತಪ್ಪು ಆಗುತ್ತಾ ಇದೆ ಅಂಥ ಅರ್ಥವೆಂದು ಗೌತಮಿ ಹೇಳಿದ್ದಾರೆ.

ಮಂಜು ಅವರು ಟಾರ್ಗೆಟ್ ಮಾಡುತ್ತಾರೆ. ಒಬ್ಬರನ್ನು ಎತ್ತಿ ಕಟ್ಟಿ ಮಾತನಾಡುತ್ತಾರೆವೆಂದು ಚೈತ್ರಾ ಹೇಳಿದ್ದಾರೆ.

ನಾನು ನನ್ನನ್ನು ಪ್ರೂವ್ ಮಾಡ್ತಾ ಇದ್ದೆ ಅವಕಾಶ ಸಿಗಲಿಲ್ಲ. ಅಳಲ್ಲ ಅಂಥ ಹೇಳಿದ್ದೆ ನಾನು ಅಳಲ್ಲ. ನಾನು ನರಕದಲ್ಲೂ ಹೇಗೆ ಆಡಿದ್ದೆ ನನಗೆ ಗೊತ್ತು. ತಂಡಕ್ಕಾಗಿ ಎಲ್ಲ ತ್ಯಾಗ ಮಾಡಿದೆ.

ಒಬ್ಬರನ್ನು ಟಾರ್ಗೆಟ್‌ ಮಾಡಿ ಈಗಲೇ ಪ್ಲ್ಯಾನ್‌ ಮಾಡುತ್ತಾರೆ. ಈ ನೂರು ದಿನವೂ ಈ ಮನೆಯಲ್ಲಿ ನಡೆದದ್ದು ಇದೆ. ಆಡೋಕೆ ಕೊಡ್ತಾ ಇರಲಿಲ್ಲ. ಇದೇ ತರ ಟಾರ್ಗೆಟ್‌ ಮಾಡಿ ಆಟದಿಂದ ಹೊರಗಡೆ ಇಡ್ತಾ ಇದ್ರು. ಆಡೋಕೆ ಈಗಿನಿಂದ ಬರ್ತಾ ಇದ್ದೆ ಅಲ್ಲಿಂದಲೇ ಅಡ್ಡಗಾಲು ಇಟ್ರು ಎಂದು ಚೈತ್ರಾ ಕಣ್ಣೀರು ಇಟ್ಟಿದ್ದಾರೆ.

ಚೈತ್ರಾ ಅವರು ಟಿಕೆಟ್ ಟು ಫಿನಾಲೆಯಿಂದ ಹೊರಗೆ ಉಳಿದಿದ್ದಾರೆ. ಆ ಮೂಲಕ ಅವರು ಈ ವಾರದ ಯಾವುದೇ ಟಾಸ್ಕ್ ನಲ್ಲಿ ಆಡುವಂತಿಲ್ಲವೆಂದು ಬಿಗ್ ಬಾಸ್ ಹೇಳಿದ್ದಾರೆ.

ಟಿಕೆಟ್ ಟು ಫಿನಾಲೆ’ಯ ಹಂತವಾಗಿ ಸ್ಪರ್ಧಿಗಳಿಗೆ ಚೆಂಡುಗಳ ಟಾಸ್ಕ್‌ ನೀಡಲಾಗಿದೆ. ಅದರಂತೆ ಈಗಾಗಲೇ ರಚನೆಯಾಗಿರುವ ತಂಡಗಳು ಬಿಗ್‌ ಬಾಸ್‌ ಸೂಚಿಸುವ ಸಂಖ್ಯೆಯತ್ತ ತೆರಳಬೇಕು. ಸದಸ್ಯರ ಕಾಲಿಗೆ ಹಗ್ಗವನ್ನು ಕಟ್ಟಲಾಗಿದೆ. ಕುಂಟುತ್ತಾ ಚೆಂಡನ್ನು ಸಂಗ್ರಹಿಸಿ ಆ ಬಳಿಕ ಅದನ್ನು ತಮಗೆ ಮೀಸಲಿರುವ ಬಾಸ್ಕೆಟ್‌ಗೆ ಹಾಕಬೇಕು.

ಇದರಲ್ಲಿ ಮಂಜು ಅಗ್ರೆಸಿವ್‌ ಆಗಿ ಆಡಿದ್ದಾರೆ. ಮಂಜಣ್ಣ ತಳ್ಳುತ್ತಿದ್ದಾರೆ ಎಂದು ಭವ್ಯ ಸಿಟ್ಟಿನಿಂದಲೇ ಹೇಳಿದ್ದಾರೆ. ನೀವು ಮೊದಲು ಬೇರೆಯವರಿಗೆ ಹೇಳೋಕ್ಕೂ ಮುಂಚೆ ಕರೆಕ್ಟಾಗಿ ಆಟ ಆಡಿ ಭವ್ಯ ಹೇಳಿದ್ದಾರೆ.

ಕೊನೆಯದಾಗಿ ಚೆಂಡು ಸಂಗ್ರಹಿಸಲು ಇನ್ನೊಬ್ಬರ ಮೈ ಮೇಲೆ ಬಿದ್ದ ಮಂಜು ಅವರನ್ನು ಉಸ್ತುವಾರಿ ವಹಿಸಿರುವ ರಜತ್‌ ಅವರು ನೀನು ಆಡ್ತಾ ಇರೋದು ಸರಿಯಲ್ಲ ಮಂಜು ಎಂದು ಹೇಳಿದ್ದಾರೆ.

ತೀವ್ರ ಹೋರಾಟದ ಬಳಿಕ ಈ ಟಾಸ್ಕ್ ನಲ್ಲಿ ಮಂಜು, ಗೌತಮಿ ಹಾಗೂ ಧನರಾಜ್ ಅವರ ತಂಡ ಮೇಲುಗೈ ಸಾಧಿಸಿದೆ.

ಗೌತಮಿ ಹೇಗೆ ಹುಡಿಗಿಯೋ ನಾವು ಕೂಡ ಹುಡುಗಿಯರು ನಮಗೂ ನೋವು ಆಗುತ್ತದೆ ಎಂದು ಮೋಕ್ಷಿತಾ ಮಂಜು ಅವರಿಗೆ ಹೇಳಿದ್ದಾರೆ. ಇನ್ನೊಂದು ಕಡೆ ಭವ್ಯ ಅವರು ಮಂಜು ಮೇಲೆ ರೇಗಾಡಿದ್ದಾರೆ.

ನಾನು ಆ್ಯಗ್ರೆಸಿವ್ ಆಡಿ ಆಡಿಲ್ಲ. ಮೊದಲಿನಿಂದಲೂ ಉಸ್ತುವಾರಿ ಫೇವರಿಸಂನಂತೆ ಇದ್ದಾರೆ ಎಂದು ಮಂಜು ಗೌತಮಿ ಬಳಿ ಹೇಳಿದ್ದಾರೆ.

ಟಿಕೆಟ್ ಟು ಫಿನಾಲೆಯ ಹಂತವಾಗಿ ತಂಡಗಳಿಗೆ ಮತ್ತೊಂದು ಟಾಸ್ಕ್ ನೀಡಲಾಗಿದೆ. ಇದರಲ್ಲೂ ಸ್ಪರ್ಧಿಗಳು ತೀವ್ರ ಪೈಪೋಟಿ ನೀಡಿದ್ದಾರೆ.ಕೊನೆಯ ಟಾಸ್ಕ್ ನಲ್ಲಿ ಹನುಮಂತು, ಭವ್ಯ, ಮೋಕ್ಷಿತಾ ಅವರ ತಂಡ ಗೆದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next