Advertisement

“ಹಳ್ಳಿಗಳಲ್ಲೂ ಸ್ವತ್ಛ ಭಾರತ ಅನುಷ್ಠಾನ’ : ಪಡಂಗಡಿ: ಸ್ವತ್ಛ ಸಂಕೀರ್ಣ ಘಟಕ ಲೋಕಾರ್ಪಣೆ

09:49 PM Mar 06, 2021 | Team Udayavani |

ವೇಣೂರು: ಗ್ರಾಮದ ಸ್ವತ್ಛತೆ ಯಿಂದ ದೇಶ ಸ್ವತ್ಛತೆ ಆ ಮೂಲಕ ಸ್ವತ್ಛ ಭಾರತ ನಿರ್ಮಾಣದ ಕನಸನ್ನು ಪ್ರಧಾನಿ ಕಂಡಿದ್ದರು. ಇದರಿಂದಾಗಿ ಇಂದು ಹಳ್ಳಿ ಹಳ್ಳಿಗಳಲ್ಲಿ ಸ್ವತ್ಛ ಭಾರತದ ಕಲ್ಪನೆ ಅನು ಷ್ಠಾನಕ್ಕೆ ಬರಲು ಸಾಧ್ಯವಾಗಿದೆ ಎಂದು ಶಾಸಕ ಹರೀಶ್‌ ಪೂಂಜ ಹೇಳಿದರು.

Advertisement

ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದ.ಕ. ಜಿ.ಪಂ. ಮಂಗಳೂರು, ತಾ.ಪಂ. ಬೆಳ್ತಂಗಡಿ ಆಶ್ರಯದಲ್ಲಿ ಸ್ವತ್ಛ ಭಾರತ್‌ ಮಿಷನ್‌ ಯೋಜನೆಯಡಿ ನಿರ್ಮಿಸಲಾದ ಪಡಂಗಡಿ ಗ್ರಾ.ಪಂ.ನ ಸ್ವತ್ಛ ಸಂಕೀರ್ಣ ಘಟಕವನ್ನು ಶನಿವಾರ ಲೋಕಾರ್ಪ ಣೆಗೊಳಿಸಿ ಅವರು ಮಾತನಾಡಿದರು.

ತಾಲೂಕಿಗೆ 700 ಕೋಟಿ ರೂ.
ಕಳೆದ 3 ವರ್ಷಗಳ ಅವ ಧಿಯಲ್ಲಿ ತಾಲೂಕಿಗೆ ರಾಜ್ಯ ಸರಕಾರದ ಮೂಲಕ 700 ಕೋಟಿ ರೂ. ಅನುದಾನ ತಂದು ತಾಲೂಕಿಗೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಜಿ.ಪಂ. ಸ್ವತ್ಛ ಭಾರತ್‌ ಮಿಷನ್‌ನ ಉಪ ಕಾರ್ಯದರ್ಶಿ, ನೋಡಲ್‌ ಅಧಿಕಾರಿ ಕೆ. ಆನಂದ ಕುಮಾರ್‌ ಮಾತನಾಡಿದರು.
ಪಡಂಗಡಿ ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ತಾ.ಪಂ. ಸದಸ್ಯೆ ಸುಶೀಲಾ, ಕನ್ನಡಿಕಟ್ಟೆ ಮೊಹಿಯುದ್ದೀನ್‌ ಜುಮಾ ಮಸೀದಿಯ ಧರ್ಮಗುರು ಜ| ಸಂಶುದ್ದೀನ್‌ ದಾರಿಮಿ, ಗರ್ಡಾಡಿ ಪಾರಮನೆಯ ಶಂಕರ ಶೆಟ್ಟಿ, ಭಾಗವತ ರವಿಚಂದ್ರ ಕನ್ನಡಿಕಟ್ಟೆ, ಪದೆಂಬಿಲ ನಿತ್ಯಾನಂದ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಬಿ.ಸಿ. ಟ್ರಸ್ಟ್‌ ಜಿಲ್ಲಾ ನಿರ್ದೇಶಕ ಸತೀಶ್‌ ಶೆಟ್ಟಿ, ಯೋಜನಾಧಿಕಾರಿ ಯಶವಂತ ಎಸ್‌., ಜಿಲ್ಲಾ ಸ್ವತ್ಛ ಭಾರತ್‌ ಮಿಷನ್‌ನ ಸಂಯೋಜಕ ನವೀನ್‌, ಪಡಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ಕವಿತಾ, ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.
ಪಂ. ಕಾರ್ಯದರ್ಶಿ ತಾರಾನಾಥ ನಾಯ್ಕ ಕೆ. ಸ್ವತ್ಛತಾ ಪ್ರತಿಜ್ಞಾವಿಧಿ ಬೋಧಿಸಿದರು.

ತಾಲೂಕು ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕುಸುಮಾಧರ್‌ ಸ್ವಾಗತಿಸಿ, ಸಂಯೋಜಕ ಜಯಾನಂದ ಲಾೖಲ ಕಾರ್ಯಕ್ರಮ ನಿರೂಪಿಸಿದರು.

Advertisement

ಪಡಂಗಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸಫನಾ ವಂದಿಸಿದರು.

ಮಾದರಿ ಗ್ರಾಮ
ಮಾಜಿ ಉಪಾಧ್ಯಕ್ಷ ಸಂತೋಷ್‌ ಕುಮಾರ್‌ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಅಭಿವೃದ್ಧಿ ಯಾವತ್ತೂ ನಿಂತ ನೀರಾಗಬಾರದು. ಉತ್ತಮ ಆಡಳಿತ ವರ್ಗ, ಸಿಬಂದಿ ನಮ್ಮಲ್ಲಿದೆ. ಶಾಸಕರ ಮಾರ್ಗದರ್ಶನದೊಂದಿಗೆ ರಾಜ್ಯದಲ್ಲೇ ಮಾದರಿ ಗ್ರಾಮವನ್ನಾಗಿ ಮಾಡಲು ಶ್ರಮಿಸುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next