Advertisement

CM ನಿವಾಸದಲ್ಲೇ ಕೇಜ್ರಿವಾಲ್ ಆಪ್ತ ಸಹಾಯಕನಿಂದ ಹಲ್ಲೆ: ಸ್ವಾತಿ ಮಲಿವಾಲ್ ಆರೋಪ

03:35 PM May 13, 2024 | Team Udayavani |

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಹಿರಿಯ ನಾಯಕಿ ಮತ್ತು ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರ ಹೆಸರಿಂದ ಕರೆಗಳು ಬಂದಿರುವುದಾಗಿ ಸಿವಿಲ್ ಲೈನ್ಸ್‌ ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

ಕೇಜ್ರಿವಾಲ್ ಆಪ್ತ ಕಾರ್ಯದರ್ಶಿಯಾಗಿರುವ ಬಿಭವ್ ಕುಮಾರ್ ಅವರು ಮುಖ್ಯಮಂತ್ರಿಗಳ ನಿವಾಸದಲ್ಲೇ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ದೆಹಲಿ ಪೊಲೀಸರು ಇಂದು ಬೆಳಿಗ್ಗೆ ಸಿವಿಲ್ ಲೈನ್ಸ್‌ ಪೊಲೀಸ್ ಠಾಣೆಗೆ ದೆಹಲಿ ಮುಖ್ಯಮಂತ್ರಿ ಅವರ ನಿವಾಸದಿಂದ ಎರಡು ಪಿಸಿಆರ್ ಕರೆ ಕರೆಗಳು ಬಂದಿದ್ದು ಅದರಲ್ಲಿ ಸ್ವಾತಿ ಮಲಿವಾಲ್ ಅವರ ಧ್ವನಿಯನ್ನು ಹೋಲುವ ಮಹಿಳೆಯೊಬ್ಬರು ಕರೆ ಮಾಡಿದ್ದು ಸಿಎಂ ಆಪ್ತ ಕಾರ್ಯದರ್ಶಿಯಾಗಿರುವ ಬಿಭವ್ ಕುಮಾರ್ ಅವರು ತನ್ನ ಮೇಲೆ ಹಲ್ಲೆ ನಡೆಸಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ದೂರು ಸ್ವೀಕರಿಸಿದ ಪೊಲೀಸರು ಮುಖ್ಯಮಂತ್ರಿ ನಿವಾಸಕ್ಕೆ ಧಾವಿಸಿದ್ದಾರೆ, ಹಲ್ಲೆಯ ಬಗ್ಗೆ ಸಿಎಂ ನಿವಾಸ ಅಥವಾ ಆಮ್ ಆದ್ಮಿ ಪಕ್ಷವಾಗಲಿ, ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

ಕಿಡಿಕಾರಿದ ಬಿಜೆಪಿ:
ಸ್ವಾತಿ ಮಲಿವಾಲ್ ಆರೋಪದ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಕೇಜ್ರಿವಾಲ್ ನಿವಾಸದಲ್ಲಿ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆಗೆ ಭದ್ರತೆ ಇಲ್ಲ, ಇನ್ನು ದೆಹಲಿಯ ಜನತೆ ಹೇಗೆ ಇರಬೇಕು ಎಂದು ಎಂದು ಕಿಡಿಕಾರಿದೆ.

ಆಪ್ತ ಕಾರ್ಯದರ್ಶಿ ಸ್ಥಾನದಿಂದ ವಜಾಗೊಂಡಿದ್ದ ಬಿಭವ್ ಕುಮಾರ್
ಇತ್ತೀಚೆಗಷ್ಟೇ ಬಿಭವ್ ಕುಮಾರ್ ವಿರುದ್ಧ ಅಕ್ರಮ ನೇಮಕಾತಿ ಹಗರಣದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಬಿಭವ್ ಕುಮಾರ್ ನನ್ನು ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಬಿಭವ್ ಕುಮಾರ್ ವಿರುದ್ಧ 2007ರಲ್ಲಿ ಸಾರ್ವಜನಿಕ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸಿದಡಿ ಪ್ರಕರಣ ದಾಖಲಾಗಿತ್ತು. ಫೆಬ್ರವರಿಯಲ್ಲಿ, ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬಿಭವ್‌ಗೆ ಸಮನ್ಸ್ ಕೂಡ ನೀಡಿತ್ತು.

Advertisement

ಇದನ್ನೂ ಓದಿ: Bollywood: ಜೂನ್‌ನಿಂದಲೇ ಬ್ಯುಸಿಯಾಗಲಿದೆ ಬಾಲಿವುಡ್; ಶುರುವಾಗಲಿದೆ ರಿಲೀಸ್‌ ಭರಾಟೆ

Advertisement

Udayavani is now on Telegram. Click here to join our channel and stay updated with the latest news.

Next